ನ್ಯೂಸ್ ರೇಸ್ ನ್ಯೂಸ್
ನಡೂರು: ಇಲ್ಲಿನ ರತ್ನಶೀಲ ಎಜುಕೇಶನ್ ಟ್ರಸ್ಟ್ (ರಿ.)ಆಶ್ರಯದ ಗ್ರ್ಯಾವಿಟಿ ಆಂಗ್ಲ ಮಾದ್ಯಮ ಶಾಲೆಯಲ್ಲಿ ಶಿಕ್ಷಕಿಯರಿಗಾಗಿ ಭಾಷೆ ಮತ್ತು ಬರವಣಿಗೆ ಕೌಶಲ್ಯ ವಿಶೇಷ ಕಾರ್ಯಾಗಾರ ನಡೆಯಿತು.
ವಿದ್ಯಾರ್ಥಿಗಳಲ್ಲಿ ಭಾಷೆ ಮತ್ತು ಬರವಣಿಗೆ ಕೌಶಲ್ಯದ ಪ್ರಗತಿಯನ್ನು ಉತ್ತಮಪಡಿಸುವ ನಿಟ್ಟಿನಲ್ಲಿ ಈ ತರಬೇತಿಯನ್ನು ಆಯೋಜಿಸಲಾಗಿದ್ದು,
ಕುಂಜಿಬೆಟ್ಟುವಿನ ಶಾರದಾ ಶಿಕ್ಷಕಿಯರ ತರಬೇತಿ ವಿದ್ಯಾಲಯದ ಪ್ರಾಂಶುಪಾಲೆ ಸುನಿತಾ ಹಾಗೂ ಉಪನ್ಯಾಸಕಿ ದಿವ್ಯ ಕೋಟ್ಯಾನ್ ಅವರು ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ್ದರು.
ಮಕ್ಕಳಲ್ಲಿ ಭಾಷಾ ಆಸಕ್ತಿ ಹಾಗೂ ಬರವಣಿಗೆಯ ಗುಣಮಟ್ಟವನ್ನು ಹೆಚ್ಚಿಸಲು ಶಿಕ್ಷಕರು ಅಳವಡಿಸಿಕೊಳ್ಳಬೇಕಾದ ಆಧುನಿಕ ಬೋಧನಾ ಶೈಲಿಗಳ ಬಗ್ಗೆ ಅವರು ಮಾಹಿತಿ ನೀಡಿದರು.
ಶಾಲಾ ಆಡಳಿತ ಮಂಡಳಿ ಅಧ್ಯಕ್ಷ ಮನೋಹರ್ ಹೆಗ್ಡೆ ಮಾತನಾಡಿ, ಶಿಕ್ಷಕರ ವೃತ್ತಿಪರ ಬೆಳವಣಿಗೆಗೆ ಪೂರಕವಾದ ಈ ಉತ್ತಮ ಕಾರ್ಯಾಗಾರ ಇಂತಹ ಕಾರ್ಯಾಗಾರ ಶಿಕ್ಷಕರಿಗೆ ಅತ್ಯಗತ್ಯ. ಇಂತಹ ಕಾರ್ಯಾಗಾರವನ್ನು ಮುಂದಿನ ದಿನಗಳಲ್ಲಿ ಹೆಚ್ಚಿನಸಂಖ್ಯೆಯಲ್ಲಿ ಆಯೋಜಿಸಲಾಗುವುದು ಎಂದರು.
ಈ ಸಂದರ್ಭ ಶಾಲಾ ಕಾರ್ಯದರ್ಶಿ ಪಾವನಾ ಎಂ ಹೆಗ್ಡೆ, ಶಾಲೆಯ ವಿಭಾಗೀಯ ಮುಖ್ಯಸ್ಥ ರಾದ ಸಂಗೀತ ಅಡಿಗ ಹಾಗೂ ಸರಸ್ವತಿ ಅವರು ಉಪಸ್ಥಿತರಿದ್ದರು.










