ಬ್ರಹ್ಮಾವರ: ಇಲ್ಲಿಗೆ ಸಮೀಪದ ನಡೂರಿನ ರತ್ನಶೀಲ ಶಿಕ್ಷಣ ಸಂಸ್ಥೆ (ರಿ) ಸಂಚಾಲಿತ ಗ್ರ್ಯಾವಿಟಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಶನಿವಾರ (ಮೇ 30) ಈ ಬಾರಿಯ ಶೈಕ್ಷಣಿಕ ವರ್ಷದ ಪ್ರಥಮ ಪಾಲಕರ ಸಭೆ ಜರಗಿತು.
ಸಭೆಯಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದ ಕೋಟೇಶ್ವರದ ಚಿರಂತನ ಶಿಕ್ಷಣ ಸಂಸ್ಥೆಯ ಸ್ಥಾಪಕಾಧ್ಯಕ್ಷ ಡಾ. ಚಿಂತನಾ ರಾಜೇಶ್ ಮಾತನಾಡಿ, ವಿದ್ಯಾರ್ಥಿಗಳಿಲ್ಲಿ ಒತ್ತಡ, ಸಮಯ ಪ್ರಜ್ಞೆ , ಮಾತಿನ ದಾಟಿ , ಜಾಲತಾಣದ ಯುಗದಲ್ಲಿ ಹಿರಿಯರಿಗೆ ಗೌರವ, ಹಾಗೂ ಸಮತೋಲಿತ ಮನಸ್ಸಿನಿಂದ ಶಿಕ್ಷಣದಲ್ಲಿ ಯಶಸ್ಸು ಸಾಧಿಸುವುದರ ಬಗ್ಗೆ ಪಾಲಕರಲ್ಲಿ ಹಂಚಿಕೊಂಡರು.

ಹಾಗೂ ಸ್ಪರ್ಧಾ ಸಾರಥಿ KAS ಅಕಾಡೆಮಿಯ ಸ್ಥಾಪಕಾಧ್ಯಕ್ಷರಾದ ಆದರ್ಶ ಶೆಟ್ಟಿ ಕೆಲ ಮಾತನಾಡಿ, ಶಿಕ್ಷಣದ ನಂತರದ ಸವಾಲುಗಳನ್ನು ಎದುರಿಸಲು ವಿದ್ಯಾರ್ಥಿಗಳು ಪ್ರಾಥಮಿಕ ಹಂತದಲ್ಲೇ ಸಿದ್ಧರಾಗಬೇಕೆಂದು ತಿಳಿಸಿದರು. ವಿವಿಧ ಸ್ಪರ್ಧಾತ್ಮಕ ತರಬೇತಿಗಳ ಬಗ್ಗೆ ಮಾಹಿತಿ ನೀಡಿದರು.

ಶೈಕ್ಷಣಿಕ ಉನ್ನತೀಕರಣಕ್ಕೆ ಹೊಸ ಪ್ರಸ್ತಾಪ:
ಇದೇ ಸಂದರ್ಭದಲ್ಲಿ ಶಾಲಾ ಆಡಳಿತ ಮಂಡಳಿ ಅಧ್ಯಕ್ಷ ಮನೋಹರ್ ಹೆಗ್ಡೆ ಮಾತನಾಡಿ, ವಿದ್ಯಾರ್ಥಗಳ ದೈಹಿಕ ಮತ್ತು ಮನೋ ವಿಕಾಸಕ್ಕಾಗಿ ಹೊಸ ಯೋಜನೆಗಳನ್ನು ಹಾಕಿಕೊಳ್ಳಲಾಗಿದೆ. ಈ ಬಗ್ಗೆ ಪೋಷಕರ ಸಹಕಾರ ಕೋರಿದರು.
- ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ: ಪ್ರತೀ ವಿದ್ಯಾರ್ಥಿಯ ಶೈಕ್ಷಣಿಕ ಗುಣಮಟ್ಟವನ್ನು ಸುಧಾರಿಸಿ ಉನ್ನತೀಕರಿಸುವುದರ ಜೊತೆಗೆ, ವಿಶೇಷವಾಗಿ 5 ಮತ್ತು 6ನೇ ತರಗತಿಯ ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಗಳ ಮೂಲಭೂತ ತರಬೇತಿಯನ್ನು ನೀಡಲಾಗುವುದು.
- ವೃತ್ತಿ ಮಾರ್ಗದರ್ಶನ ಹಾಗೂ ಕ್ರೀಡೆ: ವಿದ್ಯಾರ್ಥಿಗಳಿಗೆ ಭವಿಷ್ಯದ ದೃಷ್ಟಿಯಿಂದ ‘ಕರಿಯರ್ ಗೈಡೆನ್ಸ್’ (ವೃತ್ತಿ ಮಾರ್ಗದರ್ಶನ) ಹಾಗೂ ದೈಹಿಕ ಬೆಳವಣಿಗೆಗಾಗಿ ವಿಶೇಷ ‘ಕ್ರಿಕೆಟ್ ಕೋಚಿಂಗ್’ ತರಗತಿಗಳನ್ನು ಪ್ರಾರಂಭಿಸಲಾಗುವುದು ಎಂದು ತಿಳಿಸಿದರು.

ಈ ಎರಡೂ ಹೊಸ ಯೋಜನೆಗಳಿಗೆ ಪೋಷಕರು ಸಕಾರಾತ್ಮಕವಾಗಿ ಸ್ಪಂದಿಸಿ ಅಭಿನಂದಿಸಿದರು.

ಸಭೆಯ ವೇದಿಕೆಯಲ್ಲಿ ಕಾರ್ಯದರ್ಶಿ ಪಾವನ ಎಂ. ಹೆಗ್ಡೆ, ವಿಭಾಗೀಯ ಮುಖ್ಯಸ್ಥೆಯರಾದ ಸಂಗೀತಾ ಅಡಿಗ ಹಾಗೂ ಸರಸ್ವತಿ ಉಪಸ್ಥಿತರಿದ್ದರು.








