ಬ್ರಹ್ಮಾವರ: ಭಾನುವಾರ ಕೋಟದಲ್ಲಿ ನಡೆದ ಬ್ಲಾಕ್ ಕಾಂಗ್ರೆಸ್ ಸಮಾವೇಶದಲ್ಲಿ ಸ್ಥಳೀಯ ಕಾಂಗ್ರೆಸ್ ನಾಯಕರು ತಮಗೆ ಸಂಸದ ಕೋಟ ಶ್ರೀನಿವಾಸ ಪೂಜಾರಿ ಯವರು ಹಾಗೂ ಕಿರಣ್ ಕೊಡ್ಗಿಯವರನ್ನುನೇರವಾಗಿ ಟೀಕಿಸಲು ಆಗದೆ ಬಾಡಿಗೆ ಭಾಷಣಕಾರ ಸುಧೀರ್ ಮುರೊಳಿ ಯವರನ್ನು ಕರೆಸಿ ಟೀಕಿಸುವಂಥ ಕಾರ್ಯ ಮಾಡಿಸಿದ್ದಾರೆ ಎಂದು ಬಿಜೆಪಿ ಯುವಮೋರ್ಚಾ ಅಧ್ಯಕ್ಷ ಪ್ರಥ್ವಿರಾಜ್ ಶೆಟ್ಟಿ ಬಿಲ್ಲಾಡಿ ಆರೋಪಿಸಿದ್ದಾರೆ.
ತನ್ನ ರಾಜಕೀಯ ಅಸ್ತಿತ್ವಕ್ಕಾಗಿ ಅಲೆದಾಡುತ್ತಿರುವ ಮುರೊಳ್ಳಿಯವರು ಹೋದಲ್ಲಿ ಬಂದಲ್ಲಿ ಪ್ರಧಾನಿ ನರೇಂದ್ರ ಮೋದಿಯವರನ್ನು, ಆರ್ ಎಸ್ ಎಸ್ ನ್ನು ಟೀಕಿಸುತ್ತಾ ಕಾಂಗ್ರೆಸ್ ಹೈಕಮಾಂಡ್ ಓಲೈಕೆಯಲ್ಲಿ ತೊಡಗಿದ್ದಾರೆ ಇಂತಹ ವ್ಯಕ್ತಿಗಳಿಂದ ಜನಪರ ಕಾರ್ಯಗಳ ಮೂಲಕ ಕುಂದಾಪುರದ ಅಭಿವೃದ್ಧಿಯಲ್ಲಿ ಜೋಡೆತ್ತಾಗಿ ಕೆಲಸ ಮಾಡುತ್ತಿರುವ ಕೋಟ ಹಾಗೂ ಕೊಡ್ಗಿ ಯವರಿಗೆ ಸರ್ಟಿಫಿಕೇಟ್ ಅಗತ್ಯ ಇಲ್ಲ.
ರಾಮನ ಕುರಿತು ಮೋದಿಯವರ ಕುರಿತು ನೀವು ಎಷ್ಟು ಟೀಕಿಸುತ್ತೀರೋ ಕುಂದಾಪುರ ಕ್ಷೇತ್ರದಲ್ಲಿ ಕಾಂಗ್ರೆಸ್ ಮುಂದಿನ ಚುನಾವಣೆಗಳಲ್ಲಿ ಇನ್ನಷ್ಟು ನೆಲಕಚ್ಚಲಿದೆ ಇದ್ದಕ್ಕೆಲ್ಲ ಕುಂದಾಪುರದ ಜನತೆ ಉತ್ತರಿಸಲಿದ್ದಾರೆ, ಸ್ಥಳೀಯ ಕಾಂಗ್ರೆಸ್ ನಾಯಕರು ಇನ್ನಾದರೂ ಬಾಡಿಗೆ ಭಾಷಣ ಕಾರರನ್ನು ಬಿಟ್ಟು ಟೀಕಿಸುವುದನ್ನು ಬಿಟ್ಟು ತಾವೇ ಮಾತಾಡಲಿ ಎಂದು ಯುವಮೋರ್ಚಾ ಪ್ರಥ್ವಿರಾಜ್ ಶೆಟ್ಟಿ ಬಿಲ್ಲಾಡಿ ಕಿಡಿಕಾರಿದ್ದಾರೆ.







