ಬ್ರಹ್ಮಾವರ: ಸಾಸ್ತಾನ ಸಮೀಪದ ಗುಂಡ್ಮಿಯಲ್ಲಿರುವ ಶ್ರೀ ಕಂಬಿಗಾರ ಶ್ರೀ ಬಬ್ಬುಸ್ವಾಮಿ ಮತ್ತು ಪರಿವಾರ ದೈವಗಳ ದೈವಸ್ಥಾನದಲ್ಲಿ ಇದೇ ಬರುವ ಏಪ್ರಿಲ್ 17 ರಿಂದ 19 ರವರೆಗೆ ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ‘ಸಿರಿ ಸಿಂಗಾರದ ನೇಮೋತ್ಸವ’ ಮತ್ತು ಸಾರ್ವಜನಿಕ ಅನ್ನಸಂತರ್ಪಣೆ ಜರುಗಲಿದೆ ಎಂದು ನೇಮೋತ್ಸವ ಸಮಿತಿ ಅಧ್ಯಕ್ಷ ಕೇಶವ ಕುಂದರ್ ಹೇಳಿದರು.
ಅವರು ಗುಂಡ್ಮಿಯ ನೇಮೋತ್ಸವ ಕಚೇರಿಯಲ್ಲಿ ನಡೆದ ಸುದ್ಧಿಗೋಷ್ಠಿಯಲ್ಲಿ ಮಾತನಾಡಿ, 54 ವರ್ಷಗಳ ಬಳಿಕ ನೇಮೋತ್ಸವ ಜರುಗುತ್ತಿದ್ದು, ಕಂಬಿಗಾರ ಬಬ್ಬುಸ್ವಾಮಿ ದೈವಸ್ಥಾನವು ತುಳುನಾಡ ಸೀಮೆಯ ಆರಂಭದ ದೈವಸ್ಥಾನವಾಗಿದೆ. ಈ ಏ.17ರ ಮಧ್ಯಾಹ್ನ 3:00ಕ್ಕೆ ಕೋಟದ ಶ್ರೀ ಹಿರೇಮಹಾಲಿಂಗೇಶ್ವರ ದೇವಸ್ಥಾನದಿಂದ ಗುಂಡ್ಮಿ ಕ್ಷೇತ್ರಕ್ಕೆ ಹಸಿರು ಹೊರೆಕಾಣಿಕೆ, ರಾತ್ರಿ 7ರಿಂದ ಧಾರ್ಮಿಕ ಸಭಾ ಕಾರ್ಯಕ್ರಮ ನಡೆಯಲಿದೆ. ಆ ಬಳಿಕ ಕಾರ್ತಿಕ್‌ರಾಜ್ ಸಾಸ್ತಾನ ಮತ್ತು ತಂಡದವರಿಂದ ‘ಭಕ್ತಿ ರಸಮಂಜರಿ’ ಹಾಗೂ ಮನು ಹಂದಾಡಿ ಮತ್ತು ತಂಡದವರಿಂದ ‘ನಗೆ ಹಬ್ಬ’ ಜರಗಲಿದೆ.
ಏ.18ರ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರಗಲಿದ್ದು, ಮಧ್ಯಾಹ್ನ ಮಹಾ ಅನ್ನಸಂತರ್ಪಣೆ ನಡೆಯಲಿದೆ. ಸಂಜೆ 5ರಿಂದ ದೈವಗಳ ಭಂಡಾರವನ್ನು ಪುರ ಮೆರವಣಿಗೆ ನಡೆಯಲಿದೆ. ರಾತ್ರಿ 9:30ರಿಂದ ಶ್ರೀ ಬಬ್ಬುಸ್ವಾಮಿ ದೈವದ ನೇಮೋತ್ಸವ ನಡೆಯಲಿದೆ ಮಧ್ಯರಾತ್ರಿ ಶ್ರೀ ತನ್ನಿಮಾನಿಗ ದೇವಿಯ ನೇಮೋತ್ಸವ ನಡೆಯಲಿದೆ.
ಏಪ್ರಿಲ್ 19 ಭಾನುವಾರ ಬೆಳಗ್ಗೆ 10ರಿಂದ ಶ್ರೀ ಜುಮಾದಿ ಮತ್ತು ಬಂಟ ದೈವಗಳ ನೇಮೋತ್ಸವ. ಮಧ್ಯಾಹ್ನ 2ರಿಂದ ಶ್ರೀ ಗುಳಿಗ ದೈವಗಳ ನೇಮೋತ್ಸವ. ಸಂಜೆ 4ರಿಂದ ಶ್ರೀ ಕೊರಗಜ್ಜ ದೈವದ ನೇಮೋತ್ಸವ ನಡೆಯಲಿದೆ ಎಂದು ಮಾಹಿತಿ ನೀಡಿದರು.
ಸುದ್ಧಿಗೋಷ್ಠಿಯಲ್ಲಿ ಪ್ರತಾಪ್ ಶೆಟ್ಟಿ, ಗೋಪಾಲ ಮಡಿವಾಳ, ಚಂದ್ರ ಕಟ್ಟಿನಮನೆ, ಜಗದೀಶ್ ಗಂಗೊಳ್ಳಿ, ರಾಜೇಶ್ ಆಚಾರ್ಯ, ಅಕ್ಷಯ, ದೀಪಾ ಐರೋಡಿ ಮೊದಲಾದವರು ಇದ್ದರು
ಗುಂಡ್ಮಿ: ಏ.19 ಶ್ರೀ ಕಂಬಿಗಾರ ಬಬ್ಬುಸ್ವಾಮಿ ಮತ್ತು ಪರಿವಾರ ದೈವಗಳ ಸಿರಿ ಸಿಂಗಾರದ ನೇಮೋತ್ಸವ










