ಬಾರ್ಕೂರು ಮನೆಗಳ್ಳತನ ಪ್ರಕರಣ: ಆರೋಪಿಯ ಬಂಧನ

April 4, 2026 6:11 PM

ಬಾರ್ಕೂರು: ಬ್ರಹ್ಮಾವರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದ ಮನೆಗಳ್ಳತನ ಪ್ರಕರಣವೊಂದನ್ನು ಭೇದಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದು, ಓರ್ವ ಆರೋಪಿಯನ್ನು ಬಂಧಿಸಿ ಆತನಿಂದ ಸುಮಾರು 11.02 ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣ ಹಾಗೂ ನಗದನ್ನು ವಶಪಡಿಸಿಕೊಂಡಿದ್ದಾರೆ.

ಪ್ರಕರಣದ ವಿವರ

ದಿನಾಂಕ 06.03.2026 ರಂದು ಬ್ರಹ್ಮಾವರ ಪೊಲೀಸ್ ಠಾಣಾ ವ್ಯಾಪ್ತಿಯ ಹೇರಾಡಿ ಗ್ರಾಮದ ಐಟಿಐ ಕಾಲೇಜು ಬಳಿ ಮನೆಗಳ್ಳತನ ನಡೆದಿತ್ತು. ಈ ಸಂಬಂಧ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಅ.ಕ್ರ 45/2026 ಕಲಂ 334(4), 305 BNS ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣದ ತನಿಖೆ ಕೈಗೊಂಡ ಪೊಲೀಸರು ಬಾರಕೂರಿನ ನರಸಿಂಹ ಸಂಕೀರ್ಣದ ನಿವಾಸಿ ಪ್ರವೀಣ್ ಕುಮಾರ್ ಕೆ. ಎಂಬಾತನನ್ನು ಬಂಧಿಸಿದ್ದಾರೆ.

ಬಂಧಿತ ಆರೋಪಿಯಿಂದ 10,20,000/- ರೂಪಾಯಿ ಮೌಲ್ಯದ 101 ಗ್ರಾಂ ಚಿನ್ನ., 75,000/- ರೂಪಾಯಿ ಮೌಲ್ಯದ 375 ಗ್ರಾಂ ಬೆಳ್ಳಿ., ರೂ. 7,500 ನಗದು ಹಣ. ವಶಕ್ಕೆ ಪಡೆದಿದ್ದು, ಒಟ್ಟು ರೂ. 11,02,500 ಮೌಲ್ಯದ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ.

ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕ ಶ್ರೀ ಹರಿರಾಂ ಶಂಕರ್ ಐ.ಪಿ.ಎಸ್. ಹಾಗೂ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಸುಧಾಕರ ನಾಯ್ಕ ಅವರ ಮಾರ್ಗದರ್ಶನದಲ್ಲಿ, ಉಡುಪಿ ಉಪ ವಿಭಾಗದ ಡಿವೈಎಸ್ಪಿ ಶ್ರೀ ಬೆಳ್ಳಿಯಪ್ಪ ಅವರ ನಿರ್ದೇಶನದಂತೆ ಕಾರ್ಯಾಚರಣೆ ನಡೆಸಲಾಗಿದ್ದು,

ಗೋಪಿಕೃಷ್ಣ (ಸಿ.ಪಿ.ಐ ಬ್ರಹ್ಮಾವರ) ಮಾರ್ಗದರ್ಶನದಲ್ಲಿ ಅಶೋಕ್ ಮಾಳಾಬಗಿ (ಪಿ.ಎಸ್.ಐ, ಬ್ರಹ್ಮಾವರ ಠಾಣೆ). ಕಿರಣ್, ಸಿದ್ದಪ್ಪ ಸಕನಳ್ಳಿ, ಸುರೇಶ್ ಬಾಬು, ಎ.ಎಸ್.ಐ ಕೃಷ್ಣಪ್ಪ, ವಿಶ್ವನಾಥ ಶೆಟ್ಟಿ, ಜಯಶೀಲಾ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.

Harish Kiran Thunga

Harish Kiran Thunga is a journalist and editor based in Karnataka, India. He is actively involved in Udupi District Working Journalist Associations in the Udupi district. He serves as the Editor in Chief at Newsrays.in, a regional news portal. He also manages the Newsrays live YouTube channel, which features local news and short stories.

Join WhatsApp

Join Now

Leave a Comment

You cannot copy content of this page