ವಂಡ್ಸೆ, ಮಾರ್ಚ್ 4:
ಮಾರಣಕಟ್ಟೆ ಎಂ.ಎಸ್. ಶ್ರೀಧರ ಮಂಜ, ಕೃಷ್ಣಮೂರ್ತಿ ಮಂಜ ಮತ್ತು ಎಂ.ಎಸ್. ನಾಗರಾಜ ಮಂಜ ಸಹೋದರರು ಮಾರ್ಚ್ 19ರಂದು ನಡೆಸಲಿರುವ ಚತುಃಪವಿತ್ರ ನಾಗ ಮಂಡಲದ ಪೂರ್ವಭಾವಿಯಾಗಿ ಮಂಜರ ಮನೆಯ ಅನುಗ್ರಹ ವಠಾರದಲ್ಲಿ ಉಗ್ರಾಣ ಮಹೂರ್ತವು ಸೋಮವಾರ ಭಕ್ತಿ ಪೂರ್ವಕವಾಗಿ ನಡೆಯಿತು.

ಈ ಸಂದರ್ಭದಲ್ಲಿ ಸೇವಾಕರ್ತರಾದ ಶ್ರೀಮತಿ ವಿಜಯಲಕ್ಷ್ಮೀ – ಎಂ.ಎಸ್. ಶ್ರೀಧರ ಮಂಜ, ಶ್ರೀಮತಿ ಶೈಲಾ – ಎಂ.ಎಸ್. ನಾಗರಾಜ ಮಂಜ, ಮಾರಣಕಟ್ಟೆ ಶ್ರೀ ಬ್ರಹ್ಮಲಿಂಗೇಶ್ವರ ದೇವಸ್ಥಾನದ ಅರ್ಚಕರಾದ ನಾರಾಯಣ ಮಂಜ, ವಿಘ್ನೇಶ್ವರ ಮಂಜ, ಶಂಕರ ಮಂಜ, ಮಹೇಶ್ ಮಂಜ, ಸಾಮಾಜಿಕ ಕಾರ್ಯಕರ್ತ ಗಣೇಶ್ ಉಡುಪ, ಊರಿನ ಪ್ರಮುಖರಾದ ಡಾ. ಅತುಲ್ ಕುಮಾರ್ ಶೆಟ್ಟಿ, ವಂಡಬಳ್ಳಿ ಜಯರಾಮ ಶೆಟ್ಟಿ, ವಂಡ್ಸೆ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಉದಯಕುಮಾರ್ ಶೆಟ್ಟಿ ಅಡಿಕೆಕೊಡ್ಲು, ನಿವೃತ್ತ ಪ್ರಾಧ್ಯಾಪಕ ರಘುರಾಮ ಶೆಟ್ಟಿ ಊರ್‌ಬೈಲು, ಇಡೂರು ಮಹಾಲಿಂಗೇಶ್ವರ ದೇವಸ್ಥಾನದ ಜೀರ್ಣೋದ್ಧಾರ ಸಮಿತಿಯ ರವೀಂದ್ರ ಶೆಟ್ಟಿ, ಚಿತ್ತೂರು ಗ್ರಾಮ ಪಂಚಾಯತ್ ಅಧ್ಯಕ್ಷ ದಿವಾಕರ ಆಚಾರ್ಯ, ಮಾಜಿ ಅಧ್ಯಕ್ಷ ರವೀಂದ್ರ ಶೆಟ್ಟಿ, ಶಿಕ್ಷಕ ಬಾಲಕೃಷ್ಣ ಶೆಟ್ಟಿ, ಗುತ್ತಿಗೆದಾರ ಸೀತಾರಾಮ ಮಡಿವಾಳ, ಆನಂದ ಹಾರ್ಡ್‌ವೇರ್ ಮಾಲಕ ಅನಿಲ್ ಕುಮಾರ್ ಶೆಟ್ಟಿ, ಹಾಗೂ ಮಂಜರ ಕುಟುಂಬ ಸದಸ್ಯರು ಉಪಸ್ಥಿತರಿದ್ದರು.
ಮಹೂರ್ತದ ಪೂಜಾ ವಿಧಿಯನ್ನು ಪುರೋಹಿತರಾದ ನೆಂಪು ನರಸಿಂಹ ಭಟ್, ಹರವರಿ ದಿನಕರ ಉಡುಪ ಹಾಗೂ ಅರ್ಚಕ ವೃಂದದವರು ಧಾರ್ಮಿಕ ವಿಧಿವಿಧಾನಗಳೊಂದಿಗೆ ನೆರವೇರಿಸಿದರು.










