ಕೋಟ, ಫೆಬ್ರವರಿ 12: ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲೂಕಿನ ಕೋಟತಟ್ಟು ಗ್ರಾಮ ಪಂಚಾಯತ್ ಒಂದು ಮಾದರಿ ಕಾರ್ಯಕ್ರಮಕ್ಹಕೆ ಸಾಕ್ಷಿಯಾಗಲಿದೆ. ಸರ್ಕಾರದ ಅನುದಾನ ಹಾಗೂದಾನಿಗಳ ಸಹಕಾರದೊಂದಿಗೆ ಸುಮಾರು 1 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣಗೊಂಡಿರುವ 8 ಸುಸಜ್ಜಿತ ಮನೆಗಳ ಗೃಹ ಪ್ರವೇಶ ಮತ್ತು ಹಸ್ತಾಂತರ ಕಾರ್ಯಕ್ರಮ ‘ಆಸರೆ-2026’ ಫೆಬ್ರವರಿ 14 ರಂದು ನಡೆಯಲಿದೆ.
ಚಿಟ್ಟಿಬೆಟ್ಟು ಕೊರಗ ಕಾಲೋನಿಯಲ್ಲಿ ತಲಾ 12 ಲಕ್ಷ ರೂಪಾಯಿ ಅಂದಾಜು ವೆಚ್ಚದಲ್ಲಿ ಈ ಮನೆಗಳನ್ನು ನಿರ್ಮಿಸಲಾಗಿದ್ದು, ಸಮಾಜದ ಮುಖ್ಯವಾಹಿನಿಯಿಂದ ದೂರವಿರುವ ಕೊರಗ ಕುಟುಂಬಗಳಿಗೆ ಮನೆಯನ್ನು ಹಸ್ತಾಂತರಿಸುವ ಮೂಲಕ ಅವರ ಹೊಸ ಜೀವನಕ್ಕೆ ದಾರಿದೀಪವಾಗಲಿದೆ.
ಮನೆಗಳ ಹೆಸರು ಮತ್ತು ಫಲಾನುಭವಿಗಳು:
ಈ ಮನೆಗಳಿಗೆ ನಾಡಿನ ಪುಣ್ಯ ನದಿಗಳ ಹೆಸರನ್ನು ನಾಮಕರಣ ಮಾಡಲಾಗಿದ್ದು, ವಿವರ ಹೀಗಿದೆ:
- ಗಂಗಾ – ಶ್ರೀಮತಿ ಲಕ್ಷ್ಮೀ
- ಯಮುನಾ – ಶ್ರೀಮತಿ ಶೃಂಗೇರಿ
- ಗೋದಾವರಿ – ಶ್ರೀಮತಿ ಗುಲಾಬಿ
- ಸರಸ್ವತಿ – ಶ್ರೀಮತಿ ಸುಗಂಧಿ
- ನರ್ಮದಾ – ಶ್ರೀಮತಿ ಸುಂದರಿ
- ಸಿಂಧು – ಶ್ರೀಮತಿ ಸೋನಿ
- ಕಾವೇರಿ – ಶ್ರೀ ರವಿ
- ತುಂಗಾ – ಶ್ರೀ ಮಹಾಬಲ
ಕಾರ್ಯಕ್ರಮದಲ್ಲಿ ಮನೆಗಳ ಹಸ್ತಾಂತರ ಮತ್ತು ಆಶೀರ್ವಚನ ನಡೆಯಲಿದೆ. ಧಾರ್ಮಿಕ ಗುರುಗಳು, ಸಾಮಾಜಿಕ ಮುಖಂಡರು ಹಾಗೂ ಜನಪ್ರತಿನಿಧಿಗಳ ಉಪಸ್ಥಿತಿಯಲ್ಲಿ ಸಭಾ ಕಾರ್ಯಕ್ರಮ ಜರುಗಲಿದ್ದು, ದಾನಿಗಳಿಗೆ ಗೌರವಾರ್ಪಣೆ ಮಾಡಲಾಗುವುದು. ಮಧ್ಯಾಹ್ನ ಸರ್ವರಿಗೂ ಭೋಜನದ ವ್ಯವಸ್ಥೆ ಮಾಡಲಾಗಿದೆ.
ಈ ಐತಿಹಾಸಿಕ ಕಾರ್ಯಕ್ರಮಕ್ಕೆ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀ ಸತೀಶ್ ಕುಂದರ್, ಉಪಾಧ್ಯಕ್ಷರಾದ ಶ್ರೀಮತಿ ಸರಸ್ವತಿ, ಪಿ.ಡಿ.ಒ ಶ್ರೀ ರವೀಂದ್ರ ರಾವ್, ಕಾರ್ಯದರ್ಶಿ ಶ್ರೀಮತಿ ಸುಮತಿ ಅಂಚನ್ ಹಾಗೂ ಪಂಚಾಯತ್‌ನ ಸರ್ವ ಸದಸ್ಯರು ಸಾರ್ವಜನಿಕರನ್ನು ಆತ್ಮೀಯವಾಗಿ ಆಹ್ವಾನಿಸಿದ್ದಾರೆ.











