60 ವರ್ಷಗಳ ಹಿಂದೆ ನೆಲಸಮವಾಗಿ ಮತ್ತೆ ಪುನಃ ನಿರ್ಮಾಣಗೊಂಡ ಐತಿಹಾಸಿಕ ಕದ್ರಂಜೆ ಮಹಾಲಿಂಗೇಶ್ವರ ದೇವಸ್ಥಾನ ನೈಲಾಡಿ- ಬಿಲ್ಲಾಡಿ ಯ ಬ್ರಹ್ಮಕಲಶೋತ್ಸವವು ಫೆ 18 ರಿಂದ 23 ರ ತನಕ ನಡೆಯಲಿದ್ದು ಬ್ರಹ್ಮಕಲಶೋತ್ಸವದ ಆಮಂತ್ರಣ ಪತ್ರಿಕೆ ಯನ್ನು ಕೋಟ ಅಮೃತೇಶ್ವರೀ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅದ್ಯಕ್ಷರಾದ ಆನಂದ್ ಸಿ.ಕುಂದರ್ ಕೋಟ ಅವರು ಅಮ್ರತೇಶ್ವರಿ ದೇವಿ ಸನ್ನಿಧಿಯಲ್ಲಿ ಬಿಡುಗಡೆ ಗೊಳಿಸಿದರು . ಈ ಸಂದರ್ಭದಲ್ಲಿ ಕದ್ರಂಜೆ ಮಹಾಲಿಂಗೇಶ್ವರ ದೇವಸ್ಥಾನದ ಜೀರ್ಣೋದ್ಧಾರ ಸಮಿತಿಯ ಅದ್ಯಕ್ಷ ಪ್ರಥ್ವೀರಾಜ್ ಶೆಟ್ಟಿ ಬಿಲ್ಲಾಡಿ ,ಪ್ರಧಾನಕಾರ್ಯದರ್ಶಿ ಸಜಿತ್ ಹೆಗ್ಡೆಶಿರೂರು, ಸಂಚಾಲಕರಾದ ಗಣೇಶ್ ಪ್ರಸಾದ್ ಕಾಂಚನ್ ಶಿರಿಯಾರ, ಯುವಮೋರ್ಚಾ ಜಿಲ್ಲಾ ಉಪಾದ್ಯಕ್ಷ ಪ್ರಸಾದ್ ಬಿಲ್ಲವ ಕೋಟ, ಅಮ್ರತೇಶ್ವರಿ ದೇವಸ್ಥಾನದ ಆಡಳಿತ ಮಂಡಳಿ ಸದಸ್ಯರುಗಳು ಉಪಸ್ಥಿತರಿದ್ದರು
ಕದ್ರಂಜೆ ಮಹಾಲಿಂಗೇಶ್ವರ ಪುನರ್ ಪ್ರತಿಷ್ಠೆ: ಆಮಂತ್ರಣ ಪತ್ರಿಕೆ ಬಿಡುಗಡೆ











