– ವಿಶೇಷ ವರದಿ
ಮಹಾರಾಷ್ಟ್ರದ ರಾಜಕೀಯ ವಲಯಕ್ಕೆ ಆಳವಾಗಿ ಬೇರು ಮಾಡಿದ, ಬಾರಾಮತಿ ಎಂಬ ಭದ್ರಕೋಟೆಯನ್ನು ತನ್ನ ಹೆಸರಿನಿಂದಲೇ ಪರಿಚಿತವಾಗಿಸಿದ, ಪ್ರಭಾವಿ ನಾಯಕ ಅಜಿತ್ ಅನಂತರಾವ್ ಪವಾರ್ ಇನ್ನು ನೆನಪು ಮಾತ್ರ. ಜನವರಿ 28, 2026ರ ಬೆಳಿಗ್ಗೆ ಸಂಭವಿಸಿದ ಬಾರಾಮತಿ ವಿಮಾನ ದುರಂತದಲ್ಲಿ ಅವರ ಆಕಸ್ಮಿಕ ನಿಧನ, ರಾಜ್ಯದ ರಾಜಕೀಯ ಜತೆಗೆ ರಾಷ್ಟ್ರೀಯ ರಾಜಕೀಯ ವಲಯವನ್ನೂ ಬೆಚ್ಚಿಬೀಳಿಸಿದೆ.
ಮಹಾರಾಷ್ಟ್ರ ರಾಜಕೀಯದ ‘ಪವರ್ ಬ್ರಾಂಡ್’
ಮಹಾರಾಷ್ಟ್ರದ ಉಪಮುಖ್ಯಮಂತ್ರಿಯಾಗಿ ಹಲವಾರು ಅವಧಿಯಲ್ಲಿ ಕಾರ್ಯನಿರ್ವಹಿಸಿದ್ದ ಅಜಿತ್ ಪವಾರ್, ತಮ್ಮ ತಲೆಮಾರಿನ ಅತಿ ಪ್ರಭಾವಿ ರಾಜಕೀಯ ಮುಖಂಡರಲ್ಲಿ ಒಬ್ಬರು. ಬಾರಾಮತಿ ಜಿಲ್ಲೆ ಅವರ ಕುಟುಂಬದ ರಾಜಕೀಯ ಕೇಂದ್ರವಾಗಿದ್ದು, ಅಲ್ಲಿ ಅಭಿವೃದ್ದಿ, ಕೃಷಿ ನೀತಿ ಮತ್ತು ಮೂಲಸೌಕರ್ಯಗಳ ರೂಪಿಕರಣದಲ್ಲಿ ಅವರು ಪ್ರಮುಖ ಪಾತ್ರ ವಹಿಸಿದ್ದರು.
ಶರದ್ ಪವಾರ್ ಪುತ್ರನಾಗಿರುವ ಅಜಿತ್ ಪವಾರ್ ಮಹಾರಾಷ್ಟ್ರದ ರಾಜಕೀಯದಲ್ಲಿ ದಶಕಗಳಿಂದ ಬಲವಾದ ಹೆಜ್ಜೆಗುರುತು ಮೂಡಿಸಿದ ನಾಯಕ.
ಅವರ ನೇತೃತ್ವದಲ್ಲಿ ಎನ್‌ಸಿಪಿ ಪಕ್ಷದ ಸ್ಥಳೀಯ ಸಂಘಟನೆಗಳು ಬಲಪಡುತ್ತಲೇ ಬಂದವು. ಜನಸಂಪರ್ಕ, ನೇರವಾಗಿ ಜನರ ಸಮಸ್ಯೆಗಳಿಗೆ ಸ್ಪಂದಿಸುವ ಶೈಲಿ ಜನನಾಯಕನನ್ನಾಗಿ ಮಾಡಿತು.
ಮಹಾರಾಷ್ಟ್ರದ ಹಣಕಾಸು ಇಲಾಖೆ ಸೇರಿದಂತೆ ಹಲವಾರು ಪ್ರಮುಖ ಖಾತೆಗಳನ್ನು ಅವರು ನಿರ್ವಹಿಸಿದ್ದ ಅವರು, ನಿರ್ಧಾರ ತೆಗೆದುಕೊಳ್ಳುವ ವೇಗ, ಬಜೆಟ್ ಜಾರಿಯಲ್ಲಿ ತೆಗೆದುಕೊಳ್ಳುವ ಕಠಿಣ ನಿಲುವು ಮತ್ತು ಇಲಾಖೆಗಳ ನಡುವಿನ ಸಮನ್ವಯ ಸಾಧಿಸುವಲ್ಲಿ ಅವರ ಸಾಮರ್ಥ್ಯ ಗಮನಾರ್ಹವಾದದ್ದು.
ರಾಜ್ಯದಲ್ಲಿ ನೀರಾವರಿ, ಗ್ರಾಮೀಣಾಭಿವೃದ್ಧಿ ಮತ್ತು ಕೃಷಿ ಸಂಬಂಧಿತ ಯೋಜನೆಗಳನ್ನು ನೇರವಾಗಿ ಪರಿಶೀಲಿಸುವಲ್ಲಿ ಅಜಿತ್ ಪವಾರ್ ಅವರು ತೀವ್ರ ಆಸಕ್ತಿ ತೋರಿದ್ದರು.
ಘಟನೆಯ ನಂತರ ಮಹಾರಾಷ್ಟ್ರ ಮತ್ತು ರಾಷ್ಟ್ರದ ರಾಜಕೀಯ ನಾಯಕರು ತೀವ್ರ ಆಘಾತ ವ್ಯಕ್ತಪಡಿಸಿದರು.
ರಾಜ್ಯ ಸರ್ಕಾರ, ಎನ್‌ಸಿಪಿ ನಾಯಕರು, ಮತ್ತು ವಿರೋಧ ಪಕ್ಷದ ಗಣ್ಯರು ಅವರ ಸೇವೆ, ವ್ಯಕ್ತಿತ್ವ ಮತ್ತು ಆಡಳಿತ ಶೈಲಿ ಕುರಿತು ಸಂತಾಪ ಸೂಚಿಸಿದರು.
ಪವಾರ್ ಕುಟುಂಬದ ಭದ್ರಕೋಟೆ ಮತ್ತು ಭವಿಷ್ಯದ ಪ್ರಶ್ನೆಗಳು
ಬಾರಾಮತಿ ಪ್ರದೇಶದ ರಾಜಕೀಯ ಪವಾರ್ ಕುಟುಂಬವನ್ನು ಅವಲಂಬಿತವಾಗಿದ್ದು, ಅಜಿತ್ ಪವಾರ್ ಅವರ ಆಗಮನ, ಅಭಿವೃದ್ಧಿಪರ ಯೋಜನೆಗಳು ಮತ್ತು ಸಂಘಟನೆಗಳು ಆ ಪ್ರದೇಶಕ್ಕೆ ವಿಶೇಷ ಗುರುತು ತಂದಿದ್ದವು. ಅವರ ನಿಧನವು ಎನ್‌ಸಿಪಿ ಪಕ್ಷದ ಭವಿಷ್ಯದಲ್ಲಿ ಹೊಸ ಪ್ರಶ್ನೆಗಳನ್ನು ಉದ್ಭವಿಸಿದೆ.
ಕುಟುಂಬದ ಇತರ ನಾಯಕರು ರಾಜಕೀಯ ಜವಬ್ದಾರಿ ಹೊತ್ತು ಕಣಕ್ಕೆ ಇಳಿಯುವ ಸಾಧ್ಯತೆ ಇದ್ದರೂ, ಅಜಿತ್ ಪವಾರ್ ಅವರ ಅನುಭವ ಮತ್ತು ಮುಕ್ತ ರಾಜಕೀಯ ಶೈಲಿಯ ಕೊರತೆ ನಿಶ್ಚಿತವಾಗಿಯೂ ಕಾಣಿಸಿಕೊಳ್ಳಲಿದೆ.











