ಇಂದಿನಿಂದ 3 ದಿನ “ಬೈಂದೂರು ಉತ್ಸವ”

January 24, 2026 2:48 AM

ಬೈಂದೂರು: ಇಲ್ಲಿನ ಗಾಂಧಿ ಮೈದಾನದಲ್ಲಿ ಎರಡನೇ ವರ್ಷದ ಬೈಂದೂರು ಉತ್ಸವ ಅದ್ದೂರಿಯಾಗಿ ಜರಗಲಿದೆ.

ಇಂದಿನಿಂದ ಆರಂಭಗೊಂಡು(ಜ.24ರಿಂದ 26ರವರೆಗೆ) ಮೂರು ದಿನಗಳ ಕಾಲ ಅದ್ದೂರಿಯಾಗಿ ಜರಗಲಿರುವ ಈ ಕಾರ್ಯಕ್ರಮ  ಸಂಸದ ಬಿ.ವೈ. ರಾಘವೇಂದ್ರ ಅಧ್ಯಕ್ಷತೆಯಲ್ಲಿ, ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ ಮಾರ್ಗದರ್ಶನದಲ್ಲಿ ಮತ್ತು ಶಾಸಕ ಗುರುರಾಜ್‌ ಗಂಟಿಹೋಳಿ ನೇತೃತ್ವದಲ್ಲಿ ಜರಗಲಿದೆ.

ಮೂರು ದಿನಗಳ ಬೈಂದೂರು ಉತ್ಸವದಲ್ಲಿ ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆ, ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ, ಸಚಿವರಾದ ಶಿವರಾಜ ತಂಗಡಗಿ, ರಾಮಲಿಂಗಾ ರೆಡ್ಡಿ, ಸಂಸದ ಕೋಟ ಶ್ರೀನಿವಾಸ ಪೂಜಾರಿ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ, ಶಾಸಕರಾದ ಸುನಿಲ್ ಕುಮಾರ್, ಗುರ್ಮೆ ಸುರೇಶ್‌ ಶೆಟ್ಟಿ, ಯಶ್‌ಪಾಲ್ ಸುವರ್ಣ, ಕಿರಣ್‌ ಕುಮಾ‌ರ್ ಕೊಡ್ಗಿ, ಎಂ.ಆರ್.ಜಿ. ಗ್ರೂಪ್‌ ಚೇರ್ಮನ್ ಕೆ. ಪ್ರಕಾಶ್‌ ಶೆಟ್ಟಿ, ಸೀತಾರಾಮ ಶೆಟ್ಟಿ, ಕೃಷ್ಣಮೂರ್ತಿ ಮಂಜರು, ಎಸ್‌ಸಿಡಿಸಿಸಿ ಬ್ಯಾಂಕ್‌ ಅಧ್ಯಕ್ಷ ಎಂ.ಎನ್.‌ ರಾಜೇಂದ್ರ ಕುಮಾರ್‌, ಉತ್ಸವ ಸಮಿತಿಯ ಎಚ್.ಎಸ್.‌ಶೆಟ್ಟಿ, ಟಿ. ಶಿವಾನಂದ ಶೆಟ್ಟಿ, ಜಿಲ್ಲಾಧಿಕಾರಿ ಸ್ವರೂಪಾ ಟಿ.ಕೆ., ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಹರಿರಾಮ್‌ ಶಂಕರ್‌, ಮುಂಬೈ ಅರ್ಜುನ್‌ ಹಾಸ್ಪಿಟಾಲಿಟಿಯ ಅಶೋಕ್‌ ಶಟ್ಟಿ ಬೆಳ್ಳಾಡಿ, ಚಿತ್ರರಂಗದ ರಿಷಭ್ ಶೆಟ್ಟಿ, ಶನೀಲ್‌ ಗೌತಮ್‌, ರಾಜ್‌ ಬಿ. ಶೆಟ್ಟಿ ಭಾಗವಹಿಸಲಿದ್ದಾರೆ.

ಈ ಬಾರಿಯ ಉತ್ಸವದಲ್ಲಿ ವಿಶೇಷ ಆಕರ್ಷಣೆಯಾಗಿ ಕಳರಿ ಬೆಂಕಿಯಾಟ, ವಿವಿಧ ಗೋಷ್ಠಿಗಳು, ಪುಸ್ತಕ ಸಂತೆ, ಕಾರ್ಟೂನ್ ಹಬ್ಬ, ಚೆಂಡೆ ಡೋಲು ವಾದನ, ಕೀಲುಕುದುರೆ, ಹೋಳಿ ಕುಣಿತ, ಭಜನೆ ಟ್ಯಾಲೆಂಟ್, ಬೈಂದೂರು ಹುಲಿ ಹೆಜ್ಜೆ, ಅಮ್ಯೂಸ್‌ಮೆಂಟ್ ಪಾರ್ಕ್, ವಾರ್‌ಷಿಪ್, ಇಲ್ಕಾಣಿ ಬೈಂದೂರು, ಬಾಯಿ ಪಟಾಕಿ, ಹೆಬ್ಬಾಗಿಲು ಮನೆ, ಬೈಂದೂರಿನ ದೇಗುಲಗಳ ಪ್ರತಿರೂಪ, ಭಜನಾ ಕುಣಿತ, ಕರುಗಳ ಪ್ರದರ್ಶನ, ಜಾನುವಾರು ಪ್ರದರ್ಶನ, ಕಂಬಳ ಇರಲಿವೆ. ಸಾಂಸ್ಕೃತಿಕ ಆಕರ್ಷಣೆಯಾಗಿ ನೃತ್ಯ, ನಾಟಕ, ಭಕ್ತಿ ಸಂಭ್ರಮ, ಸ್ವರ ಸಂಜೆ, ಹಳೆಯ ಹಾಡುಗಳು, ಜಾದೂ ಲೋಕ, ಆಳ್ವಾಸ್ ಸಾಂಸ್ಕೃತಿಕ ವೈಭವ, ಗಾನ ನಾಟ್ಯ ವೈಭವ, ನಗೆ ಹಬ್ಬ, ಟೀಮ್‌ ಸವಾರಿಯ ಲೈವ್‌ ದಿ ಬ್ಯಾಂಡ್‌ ರಿಯಾಲಿಟಿ ಶೋ, ಕಲಾವಿದರಿಂದ ಲೈವ್ ಸಂಗೀತ ಹಬ್ಬ ಇರಲಿವೆ.

ಕೃಷಿ ಮೇಳ, ಮೀನುಗಾರಿಕಾ ಮೇಳ, ಸಂಜೀವಿನಿ ಮೇಳ, ಅರಣ್ಯ ಜಾಂಬೂರಿ, ಆರೋಗ್ಯ ಮೇಳ, ಸಾಹಿತ್ಯ ಮೇಳ, ತೋಟಗಾರಿಕಾ ಮೇಳ, ವಿಜ್ಞಾನ ಮೇಳ, ಆಹಾರ ಮೇಳ, ಕೈಗಾರಿಕಾ ಮೇಳ, ಪ್ರಾಚ್ಯವಸ್ತು ಮೇಳ, ಕರಕುಶಲ ಮೇಳ, ಶಸ್ತ್ರ ಮತ್ತು ಶಾಸ್ತ್ರ ಮೇಳ, ಬೀಚ್‌ ಉತ್ಸವ, ಉದ್ಯೋಗ ಮೇಳ, ಸ್ಕೂಬಾ ಡೈವಿಂಗ್‌, ಚಿತ್ರಕಲಾ ಪ್ರದರ್ಶನ, ಗಾಳಿಪಟ ಉತ್ಸವ ಆಯೋಜಿಸಲಾಗಿದೆ.

Harish Kiran Thunga

Harish Kiran Thunga is a journalist and editor based in Karnataka, India. He is actively involved in Udupi District Working Journalist Associations in the Udupi district. He serves as the Editor in Chief at Newsrays.in, a regional news portal. He also manages the Newsrays live YouTube channel, which features local news and short stories.

Join WhatsApp

Join Now

Leave a Comment

You cannot copy content of this page