ಬ್ರಹ್ಮಾವರ: ಹೆಗ್ಗುಂಜೆ ಭೂಒತ್ತುವರಿ ತೆರವು ಪ್ರಕರಣಕ್ಕೆ ಸಂಬಂಧಿಸಿದಂತೆ ಬ್ರಹ್ಮಾವರ ತಹಶೀಲ್ದಾರ್ ಕಚೇರಿ ಎದುರು ಬೃಹತ್ ಪ್ರತಿಭಟನೆ ಸಂಸದರು ಮತ್ತು ಶಾಸಕರ ನೇತೃತ್ವದಲ್ಲಿ ಜರಗಿತು. ಮಂಗಳವಾರ ಬೆಳಗ್ಗೆ ಬ್ರಹ್ಮಾವರ ತಾಲೂಕು ಕಚೇರಿ ಬಳಿ ಸಾಕಷ್ಟು ಸಂಖ್ಯೆಯಲ್ಲಿ ಜಮಾಯಿಸಿದ ಸಾರ್ವಜನಿಕರು, ತಹಶೀಲ್ದಾರ್ ನಡೆ ಬಗ್ಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.


ಸಂಸದ ಕೋಟ ಶ್ರೀನಿವಾಸ ಪೂಜಾರಿ ಮಾತನಾಡಿ, ಜನರಿಗೆ ಮೂಲಭೂತ ಸೌಕರ್ಯ ನೀಡಬೇಕೆಂದು ತಹಶೀಲ್ದಾರ್ ಕಚೇರಿ ಮತ್ತು ತಹಶೀಲ್ದಾರ್‌ರನ್ನು ನೇಮಕಗೊಳಿಸಿದರೆ, ಇವರು ಬಡವರ ಮನೆ ಒಡೆದು ಶಾಸಕರು ಸಂಸದರು ಸಾರ್ವಜನಿಕರು ನ್ಯಾಯ ಕೊಡಿ ಎಂದು ಕೇಳುವ ಸ್ಥಿತಿಗೆ ತಂದು ಇಟ್ಟಿದ್ದಾರೆ. ಘಟನೆ ಬಗ್ಗೆ ನನಗೆ ಮಾಹಿತಿ ಸಿಕ್ಕಾಗ ತಹಶೀಲ್ದಾರ್ ಆದಿಯಾಗಿ ಕಂದಾಯ ಸಚಿವರಲ್ಲಿಯೂ ನಾನು ಮಾತನಾಡಿ ನಾಲ್ಕೈದು ದಿನಗಳ ಕಾಲಾವಾಕಾಶ ನೀಡುವಂತೆ ಮನವಿ ಮಾಡಿದ್ದೆ. ಕಂದಾಯ ಸಚಿವರು ಕೂಡ ಮನವಿಗೆ ಒಪ್ಪಿಗೆ ಸೂಚಿಸಿದ್ದರು. ಸಚಿವರು ಸೂಚಿಸಿದ ಮೇಲು ಮನೆ ಅಳಿಯುವ ದರ್ಜು ಏನಿತ್ತು ಎನ್ನುವುದು ನಮ್ಮ ಪ್ರಶ್ನೆಯಾಗಿದೆ. ದೇವಕಿ, ಬೆಳ್ಳೆ ನಾಯ್ಕ ಮಾತ್ರವೇ ಭೂ ಒತ್ತುವರಿ ಮಾಡಿಕೊಂಡು ಮನೆಕಟ್ಟಿಕೊಂಡಿರುವುದು ಉಡುಪಿ ಜಿಲ್ಲೆಯಲ್ಲಿ 49ಸಾವಿರ ಅರ್ಜಿಗಳು ಹಕ್ಕು ಪತ್ರಕ್ಕಾಗಿ ಸಲ್ಲಿಕೆಯಾಗಿದೆ. ವಿಲೇವಾರಿ ಆಗಿದ್ದು ಕೇವಲ 9ಸಾವಿರ ಅರ್ಜಿಗಳು ಮಾತ್ರ. ಇನ್ನೂ 38ಸಾವಿರ ಅರ್ಜಿಗಳು 94 ಸಿ ಮತ್ತು ಸಿಸಿ ಅಡಿಯಲ್ಲಿ ವಿಲೇವಾರಿ ಆಗಲು ಬಾಕಿ ಇದೆ. ಹೀಗಿರುವಾಗ ಈ ಮನೆಗಳನ್ನು ಒಡೆದಿರುವುದು ಎಲ್ಲಾ 38 ಸಾವಿರ ಅರ್ಜಿಗಳಿಗೂ ತೊಂದರೆಯೇ ಎಂದರು. ತಹಶೀಲ್ದಾರ್ ಕಚೇರಿ ಬಡವರ ಮನೆ ಉಳಿಸುವ ಬದಲು ಮನೆ ಒಡೆಯುವುದಕ್ಕೆ ಬಹಳ ಉತ್ಸುಕವಾಗಿದೆ ಎಂದರು.

ಶಾಸಕ ಕಿರಣ್ ಕೊಡ್ಗಿ ಮಾತನಾಡಿ, ನೈತಿಕತೆ ಬಗ್ಗೆ ಮಾತನಾಡುವ ತಹಶೀಲ್ದಾರ್ ಎಷ್ಟೊಂದು ನೈತಿಕತೆ ಉಳ್ಳವರು ಎಂದು ನಮಗೆ ಗೊತ್ತು. ಇವರ ವಿರುದ್ಧ ಹೋರಾಟ ಮಾಡದೇ ಇದ್ದರೆ ನಮ್ಮ ಜನರಿಗೆ ತೊಂದರೆ. ವ್ಯಾಪಾರ ಆದ್ರೆ ಎಲ್ಲವೂ ಸರಿ ಉಂಟು ಎಂದು ಹೇಳುವವರು ವ್ಯಾಪಾರ ಆಗದೇ ಇದ್ರೆ ಯಾವುದೂ ಸರಿ ಇಲ್ಲ. ಈ ಬಗ್ಗೆ ದಾಖಲೆ ಇಟ್ಟುಕೊಂಡೆ ನಾನು ಮಾತನಾಡುತ್ತಿದ್ದೇನೆ. ಶಾಸಕಾಂಗ ಕಾರ್ಯಾಂಗ ಜೊತೆಯಲ್ಲೇ ಸಾಗಬೇಕು ಎಂಬ ಕಾರಣಕ್ಕೆ ಸಾಕಷ್ಟು ಬಾರಿ ತಹಶೀಲ್ದಾರ್ ಅವರನ್ನು ಕರೆಯಿಸಿ ಮಾತನಾಡಿದ್ದೇನೆ. ಕಾನೂನಿ ಎಲ್ಲಾ ತೊಡಕುಗಳನ್ನು ಹುಡುಕಿಕೊಂಡು ಎಷ್ಟು ತೊಂದರೆ ಕೊಡಲು ಸಾಧ್ಯವೋ ಅಷ್ಟು ತೊಂದರೆ ಕೊಡುತ್ತಿದ್ದಾರೆ. ಈ ನಮ್ಮ ತಹಶೀಲ್ದಾರರು. ಉಡುಪಿ ಜಿಲ್ಲೆಯಲ್ಲೇ ಅತೀ ಹೆಚ್ಚು ತೊಂದರೆ ಕೊಡುವ ತಹಶೀಲ್ದಾರರು ಎಂದರೆ ಬ್ರಹ್ಮಾವರ ತಹಶೀಲ್ದಾರ್. ನಾನು ಸುಖಾ ಸುಮ್ಮನೆ ಆರೋಪ ಮಾಡುತ್ತಿಲ್ಲ. ಎರಡೂವರೆ ವರ್ಷಗಳಿಂದ ನಾನು ಅವರೊಂದಿಗೆ ಕೆಲಸ ಮಾಡಿಸಿಕೊಂಡ ಅನುಭವದಿಂದ ಮಾತನಾಡುತ್ತಿದ್ದೇನೆ. 30-40 ವರ್ಷಗಳ ಹಿಂದಿನ ಕಡತಗಳಿಗೆ ಸಾಕಷ್ಟು ಆಟವಾಡಿಸುತ್ತಾರೆ. ಇವರ ಕೈ ಬಿಸಿಯಾದರೆ ಕೆಲಸಗಳು ಬೇಗ ಬೇಗ ಆಗುತ್ತದೆ. ಬ್ರಹ್ಮಾವರ ತಾಲೂಕು ಕಚೇರಿಯಲ್ಲಿ ದಂಧೆಯನ್ನು ಮಾಡಿಕೊಂಡಿದ್ದಾರೆ ಇವರು. ಈ ಅಕ್ರಮ ಸಕ್ರಮ ಕಡತಗಳನ್ನು ಆಪ್‌ನಲ್ಲಿ ಅಪ್ಲೋಡ್ ಮಾಡಬೇಕಿದೆ. ಹಣ ಕೊಟ್ಟವರ ಫೈಲ್ ಆದಷ್ಟು ಬೇಗ ಅಪ್ಲೋಡ್ ಆಗುತ್ತದೆ. ಹಣ ಕೊಡದವನ ಫೈಲ್ ಅಲ್ಲೇ ಬಾಕಿ ಇರುತ್ತದೆ ಎಂದು ಆರೋಪಿಸಿದರು.

ಹೆಗ್ಗುಂಜೆ ಪಂಚಾಯತ್ ಸದಸ್ಯ ಗುರುಪ್ರಸಾದ್ ಮಾತನಾಡಿ, ತಹಶೀಲ್ದಾರ್ ಸಾರ್ವಜನಿಕರಿಂದ ಹಣ ಪಡೆದ ಬಗ್ಗೆ ದಾಖಲೆ ನನ್ನಲ್ಲಿದೆ. ನಮ್ಮ ಈ ಅಧಿಕಾರಿಗಳಿಗೆ ಬಂಗಲೆ, ಮನೆ ಬೇಕು. ಬಡವರು ಬೀದಿಯಲ್ಲಿರಬೇಕು. ಇವರಿಗೆ ನಾಲ್ಕಾರು ದಿನಗಳ ಕಾಲಾವಕಾಶ ಕೋರಿದರೂ ಅವಕಾಶ ನೀಡದೆ ಮನೆಯನ್ನು ಜೆಸಿಬಿಯಿಂದ ನೆಲಸಮ ಮಾಡಿದರು. ಬೆಳ್ಳ ನಾಯ್ಕ ಕ್ಯಾನ್ಸರ್ ಪೀಡಿತ. ಅವರ ಚಿಕಿತ್ಸೆಗೆ ೨೦ ಲಕ್ಷ ಹಣ ಬೇಕಾಗಿದೆ. ಚಿಕಿತ್ಸೆಯ ಕಾರಣದಿಂದ ಬೆಳ್ಳ ನಾಯ್ಕರು ಮನೆಯನ್ನು ತನ್ನ ಸಂಬಂಧಿಕರಾದ ಶ್ರೀಮತಿ ದೇವಕಿಗೆ ನೀಡಿ ಮನೆ ಕಟ್ಟಿದ ವೆಚ್ಚ ಪಡಕೊಂಡಿದ್ದರು. ಅದಕ್ಕೆ ಮನೆ ಮಾರಿದ್ದಾನೆ ಎಂದು ಅಪಪ್ರಚಾರ ಮಾಡುತ್ತಿದ್ದಾರೆ. ಜಾಗ ಪಡೆದ ದೇವಕಿಯವರು ಬಡವರು. ಹೈಕೋರ್ಟಿಗೆ ಹೋಗುವಷ್ಟು ಹಣ ಅವರಲ್ಲಿ ಇಲ್ಲವಾಗಿತ್ತು. ನಾವೆಲ್ಲ ಹಣ ಒಟ್ಟು ಮಾಡಿ ಹೈಕೋರ್ಟ್ ವಕೀಲರಿಗೆ ನೀಡಿದ್ದೆವು. ಒಂದೆರಡು ದಿನ ತಡೆದಿದ್ದರೆ ತಡೆಯಾಜ್ಞೆ ಸಿಗುತ್ತಿತ್ತು. ಈಗ ಮನೆಯೂ ಇಲ್ಲ, ಆ ಹಣವೂ ಇಲ್ಲ. ಎಂಬಂತಾಗಿದೆ ಎಂದರು.

ಬಿಜೆಪಿ ಮುಖಂಡ ಬಿರ್ತಿ ರಾಜೇಶ್ ಶೆಟ್ಟಿ, ಮಾತನಾಡಿ, ಇಲ್ಲಿ ಅರ್ಜಿ ಯಾವುದಾದರು ಹಿಡಿದುಕೊಂಡು ಬಂದರೆ ಸಮಸ್ಯೆಗಳನ್ನು ಹೆಕ್ಕಿ ತೆಗೆದು ಅಲೆದಾಡಿಸುವುದೇ ಉಡುಪಿ ಬ್ರಹ್ಮಾವರ ಎಂದು ಅಲೆದಾಡಿಸುತ್ತಾರೆ. ಮನೆ ಕಟ್ಟುವುದಕ್ಕೆಂದು ದಾಖಲೆ ಹಿಡಿದುಕೊಂಡು ಬಂದರೆ ತಹಶೀಲ್ದಾರ ಕಚೇರಿಯಿಂದ ರೆವಿನ್ಯೂ ಕಚೇರಿಗೆ ಅಲೆದಾಡಿಸುವುದು ಈ ವ್ಯವಸ್ಥೆ. ಈ ಅಧಿಕಾರಿಗಳ ಬೇಜವಬ್ದಾರಿಗೆ ಎಷ್ಟೋ ಜನರ ಬದುಕು ಹಾಳಾಗಿದೆ ನಾನು ದಾಖಲೆ ಸಮೇತ ತೋರಿಸುತ್ತೇನೆ ಎಂದು ಹೇಳಿದರು.
ಪ್ರಥ್ವಿರಾಜ್ ಶೆಟ್ಟಿ ಬಿಲ್ಲಾಡಿ, ರಾಜೀವ್ ಕುಲಾಲ್ ಆರೂರು ಸೇರಿದಂತೆ ಹಲವರು ತಹಶೀಲ್ದಾರ್ ಶ್ರೀಕಾಂತ್ ಅವರ ವಿರುದ್ಧ ವಿರುದ್ಧ ಹರಿಹಾಯ್ದರು.
ಸಂಜೆವರೆಗೆ ಪ್ರತಿಭಟನೆ ಮುಂದುವರಿಯಿತು. ಬಳಿಕ ಆಗಮಿಸಿದ ಅಪರ ಜಿಲ್ಲಾಧಿಕಾರಿ ಅಬೀದ ಗದ್ಯಾಳ ಬಳಿ ತೆರವುಗೊಳಿಸಲಾದ ೫ ಮನೆಯವರಿಗೆ ಬದಲಿ ನಿವೇಶನವನ್ನು ಸರಕಾರ ನೀಡಬೇಕು. ಸ್ಥಳೀಯ ಮುಖಂಡರಾದ ಗಣೇಶ್ ಶೆಟ್ಟಿ ಮತ್ತು ಲೋಕೇಶ್ ವಿರುದ್ಧ ದಾಖಲಾದ ಪ್ರಕರಣವನ್ನು ಕೈಬಿಡಬೇಕು. ಈ ಪ್ರಕರಣದಲ್ಲಿ ಉದ್ದೇಶಪೂರ್ವಕವಾಗಿ ದ್ವೇಷ ಸಾಧಿಸಿದ ಬ್ರಹ್ಮಾವರ ತಹಶೀಲ್ದಾರ್ ಶ್ರೀಕಾಂತ್ ಹೆಗಡೆ ಮತ್ತು ಆರ್‌ಐ ರಾಜು ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು. ಒಂದುವಾರದಲ್ಲಿ ಈ ಬೇಡಿಕೆಗಳು ಈಡೇರದೇ ಇದ್ದರೆ ಒಂದು ವಾರದಲ್ಲಿ ಬಿಜೆಪಿ ಕುಂದಾಪುರ ಮತ್ತು ಉಡುಪಿ ಗ್ರಾಮಾಂತರ ಮಂಡಲದ ವತಿಯಿಂದ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಕೆಯನ್ನು ನೀಡಲಾಯಿತು.
ಪ್ರತಿಭಟನೆಯಲ್ಲಿ ಸುಧೀರ್ ಕೆ.ಎಸ್, ಸತೀಶ್ ಪೂಜಾರಿ ವಕ್ವಾಡಿ, ವಿಠಲ ಪೂಜಾರಿ ಐರೋಡಿ, ನಳಿನಿ ಪ್ರದೀಪ್‌ರಾವ್, ಹರೀಶ್ ಶೆಟ್ಟಿ ಅಂಬಲಪಾಡಿ, ರತ್ನಾಕರ ಶೆಟ್ಟಿ ಹರಿಮಕ್ಕಿ, ಪ್ರಭಾಕರ ಪೂಜಾರಿ ಉಡುಪಿ, ಪ್ರತಾಪ್ ಹೆಗ್ಡೆ ಮಾರಾಳಿ, ಸುರೇಶ್ ಶೆಟ್ಟಿ ಕಾಡೂರು, ವಿಘ್ನೇಶ್ ರಂಜನ್, ಉಮೇಶ್ ನಾಯ್ಕ್ ಚೇರ್ಕಾಡಿ, ಸುಧೀಂದ್ರ ಶೆಟ್ಟಿ ಶಿರಿಯಾರ, ಚಂದ್ರ ಶೇಖರ ಶೆಟ್ಟಿ ಸೂರ‍್ಗೋಳಿ, ನಿತ್ಯಾನಂದ ಬಿ.ಆರ್. ಬ್ರಹ್ಮಾವರ, ಪ್ರಕಾಶ್ ಶೆಟ್ಟಿ ಯಡ್ತಾಡಿ, ಪ್ರಭಾಕರ ನಾಯ್ಕ್ ಕಲ್ಮರ್ಗಿ, ಕೃಷ್ಣ ಶೆಟ್ಟಿ ಶಿರೂರು,










