ಹಾವೇರಿ: ಈ ಅವಧಿ ಪೂರ್ತಿ ನಾನೇ ಸಿಎಂ ಎಂದು ಹೇಳಿಕೆ ನೀಡುತ್ತಿದ್ದ ಸಿಎಂ ಸಿದ್ದರಾಮಯ್ಯ ಬುಧವಾರ ಅಚ್ಚರಿಯ ಹೇಳಿಕೆ ನೀಡಿದ್ದಾರೆ.
ಸುದೀರ್ಘ ಅವಧಿಗೆ ರಾಜ್ಯದ ಮುಖ್ಯಮಂತ್ರಿಯಾಗಿದ್ದ ಸಾಮಾಜಿಕ ನ್ಯಾಯದ ಹರಿಕಾರ ದೇವರಾಜ ಅರಸು ಅವರ ದಾಖಲೆ ಮುರಿದಿರುವ ಸಿಎಂ ಸಿದ್ದರಾಮಯ್ಯ. ಹಾವೇರಿಯಲ್ಲಿ ನಡೆದ ನಡೆದ ಕಾರ್ಯಕ್ರಮದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ಜನರ ಆಶೀರ್ವಾದದಿಂದ ರಾಜಕೀಯದಲ್ಲಿ ಇಲ್ಲಿಯವರೆಗೆ ಬಂದಿದ್ದೇನೆ ಮತ್ತು ಇನ್ನೂ ಎಷ್ಟು ದಿನ ಸಕ್ರಿಯವಾಗಿರುತ್ತೇನೆಂದು ಗೊತ್ತಿಲ್ಲ ಎಂದಿದ್ದಾರೆ.
ದೇವರಾಜು ಅರಸು ಅವರ ದಾಖಲೆ ಮುರಿಯುವ ಕಾರಣಕ್ಕಾಗಿಯೇ ಇಲ್ಲಿಯವರೆಗೆ ಸಿಎಂ ಕಾದಿದ್ದಾರೆಯೇ ಎನ್ನುವ ಅನುಮಾನ ಮೂಡಿಬರುತ್ತಿದೆ. ಹಾಗಾದರೆ ಸಿಎಂ ಮುಂದಿನ ದಿನಗಳಲ್ಲಿ ಪಟ್ಟವನ್ನು ಡಿಕೆಶಿಯವರಿಗೆ ಅಥವಾ ತಮ್ಮ ಆಪ್ತ ವಲಯದವರಿಗೆ ಕೊಡಲಿದ್ದಾರೆಯೇ ಎನ್ನುವ ಮಾತುಗಳು ಕೇಳಿಬಂದಿದೆ.
ಸಿಎಂ ಹೇಳಿಕೆ ಎನ್ನುವುದು ಪುನಃ ಸಿಎಂ ಬದಲಾವಣೆ ಚರ್ಚೆಯನ್ನು ಹುಟ್ಟುಹಾಕಲಿದೆಯೇ ಕಾದು ನೋಡಬೇಕಿದೆ.











