ಬ್ರಹ್ಮಾವರ: ಇಲ್ಲಿನ ಕೋಟದ ಪ್ರಸಿದ್ಧ ಚರ್ಮರೋಗ ತಜ್ಞ ಡಾ.ವಾದಿರಾಜ್ 85ವ. ಅನಾರೋಗ್ಯದಿಂದ ಗುರುವಾರ ಸಂಜೆ ನಿಧನರಾದರು.
ಇವರು ಚರ್ಮರೋಗದ ಚಿಕಿತ್ಸೆಯಲ್ಲಿ ರಾಷ್ಟ್ರಾದ್ಯಂತ ಪ್ರಸಿದ್ದಿ ಹೊಂದಿದ್ದರು.
ಮೂಲತಃ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ಮಹಿಷಿ ಗ್ರಾಮದಲ್ಲಿ ಜನಿಸಿದ ಅವರು ಶಿವಮೊಗ್ಗದಲ್ಲಿ ತನ್ನ ವೈದ್ಯಕೀಯ ಸೇವೆ ಆರಂಭಿಸಿದ್ದರು. ತದನಂತರ ಗೋವಾ ಸೇರಿದಂತೆ ಬೇರೆ ಬೇರೆ ಭಾಗದಲ್ಲಿ ವೈದ್ಯಕೀಯ ಸೇವೆ ನೀಡಿದ್ದಾರೆ, 1972ರಲ್ಲಿ ಕೋಟದಲ್ಲಿ ಶುಶ್ರುತಾ ಕ್ಲಿನಿಕ್ ಪ್ರಾರಂಭಿಸಿ ಸುಧೀರ್ಘ 54ವರ್ಷಗಳಿಂದ ಸಾರ್ವಜನಿಕ ಸೇವೆ ಸಲ್ಲಿಸಿ ಇತ್ತೀಚಿಗಿನ ವರ್ಷಗಳಲ್ಲಿ ತನ್ನ ಮನೆಯಲ್ಲೆ ವೈದ್ಯಕೀಯ ಸೇವೆ ನೀಡುತ್ತಿದ್ದರು. ಬಡ ರೋಗಿಗಳಿಗೆ ಹಣ ಪಡೆಯದೆ ಚಿಕಿತ್ಸೆ ನೀಡುತ್ತಿದ್ದ ಇವರು. ದೇಶದ ನಾನಾ ಮೂಲೆಗಳಿಂದ ಚರ್ಮ ರೋಗಕ್ಕೆ ಸಂಬಂಧಿಸಿದ ಸಮಸ್ಯೆಗಳಿಗೆ ರೋಗಿಗಳು ಇವರನ್ನು ಭೇಟಿಯಾಗಿತ್ತಿದ್ದರು, ಕೋವಿಡ್ ಸಂದರ್ಭದಲ್ಲಿ ಅಮೇರಿಕದಲ್ಲಿದ್ದರೂ ಸಾಮಾಜಿಕ ಜಾಲತಾಣದ ಮೂಲಕ ರೋಗಿಗಳಿಗೆ ಸೂಕ್ತ ಸಲಹೆ ಸೂಚನೆ ನೀಡಿದ್ದರು. ವೈದ್ಯಕೀಯ ನಿಯತಕಾಲಿಕ ಪತ್ರಿಕೆಯಲ್ಲಿ ಲೇಖಕರಾಗಿ ,ಸಾಹಿತ್ಯಿಕ ಓದುಗರಾಗಿ, ಆಧ್ಯಾತ್ಮಿಕ ,ಸಾಮಾಜಿಕ ಕ್ಷೇತ್ರದಲ್ಲಿ ಗುರುತಿಸಿಕೊಂಡಿದ್ದರು. ರಾಜ್ಯದ. ವಿವಿಧ ಸಂಘಸಂಸ್ಥೆಗಳು ಇವರ ವೈದ್ಯಕೀಯ ಕ್ಷೇತ್ರದ ಸಾಧನೆಯನ್ನು ಗುರುತಿಸಿ ಗೌರವಿಸಿದ್ದಾರೆ ರೋಟರಿ ಕ್ಲಬ್ ಕೋಟ ಸಾಲಿಗ್ರಾಮ, ಸೇವಾಸಂಗಮ ಶಿಶುಮಂದಿರದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ, ಮೃತರು ಪತ್ನಿ ಇರ್ವರು ಪುತ್ರಿಯರನ್ನು ಅಗಲಿದ್ದಾರೆ.
ಮೃತದೇಹ ಶುಕ್ರವಾರ ಅವರ ಸ್ವಗೃಹ ಕದ್ರಿಕಟ್ಟು ಇಲ್ಲಿ ಪೂರ್ವಾಹ್ನ 9.30ರ ಸಮಯ ಸಾರ್ವಜನಿಕರ ದರ್ಶನಕ್ಕೆ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಅವರು ಕುಟುಂಬ ಮೂಲಗಳು ತಿಳಿಸಿದೆ.








