ಉಡುಪಿಯಲ್ಲಿ ಆಸ್ತಿ ತೆರಿಗೆ ಪಾವತಿ ಚಲನ್‌ಗಳಲ್ಲಿ ಅಕ್ರಮ – ಯೂನಿಯನ್ ಬ್ಯಾಂಕ್ ಸೀಲ್ ದುರ್ಬಳಕೆ ಶಂಕೆ

February 12, 2026 2:04 PM

ಉಡುಪಿ, ಫೆಬ್ರವರಿ12, 2026:
ಉಡುಪಿ ನಗರಸಭೆಯಲ್ಲಿ ಆಸ್ತಿ ತೆರಿಗೆ ಪಾವತಿ ಪರಿಶೀಲನೆ ಸಂದರ್ಭ ಗಂಭೀರ ಅಕ್ರಮ ಹೊರಬಿದ್ದಿದ್ದು, ಒಂದೇ ಚಲನ್ ಸಂಖ್ಯೆಗೆ ಬೇರೆ ಬೇರೆ ದಿನಾಂಕಗಳಲ್ಲಿ ಯೂನಿಯನ್ ಬ್ಯಾಂಕ್ ಸೀಲ್ ಕಾಣಿಸಿಕೊಂಡ ಘಟನೆ ಪತ್ತೆಯಾಗಿದೆ. ಈ ಬಗ್ಗೆ ನಗರಸಭೆ ಸಿಬ್ಬಂದಿಗಳ ಸೂಚನೆಯ ಮೇರೆಗೆ ಪೌರಾಯುಕ್ತ ಮಹಾಂತೇಶ್ ಉಡುಪಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಘಟನೆಯ ವಿವರ

ನಗರಸಭೆ ಕಚೇರಿಯಲ್ಲಿ ದಿನಾಂಕ 03/02/2026 ರಂದು ಆಸ್ತಿ ತೆರಿಗೆ ಪಾವತಿ ದಾಖಲೆಯನ್ನು ಪರಿಶೀಲಿಸುತ್ತಿದ್ದಾಗ, ಜ.28ರ ದಿನಾಂಕದ ಚಲನ್ ಮೇಲಿನ ಯೂನಿಯನ್ ಬ್ಯಾಂಕ್ ಸೀಲ್ ಇರುವುದು ಕಂಡು ಬಂದಿದೆ. ಆದರೆ ಬ್ಯಾಂಕ್ ಸ್ಟೇಟಮೆಂಟ್‌ನಲ್ಲಿ ಹಣ ಜಮಾ ಆಗಿರುವ ದಾಖಲೆ ಇಲ್ಲದಿರುವುದು ಗಮನಕ್ಕೆ ಬಂದಿದೆ.

ಈ ಆಧಾರದ ಮೇಲೆ ಮುಂದಿನ ದಿನವಾದ ಫೆ.4ರಂದು ಮತ್ತೊಮ್ಮೆ ಪರಿಶೀಲನೆ ನಡೆದಾಗ. ಅಲ್ಲಿ ದಿನದ ಚಲನ್‌ಗಳನ್ನು ಪರಿಶೀಲಿಸಿದಾಗ, ಬೇರೆ ಬೇರೆ ದಿನಾಂಕದ ಎರಡು ಚಲನ್‌ಗಳಲ್ಲಿ ಒಂದೇ ಚಲನ್‌ ಸಂಖ್ಯೆ ಇರುವುದು ಪತ್ತೆಯಾಗಿದೆ. ಇಲ್ಲಿ ಯಾವುದೋ ಅಕ್ರಮ ನಡೆದಿರುವ ಶಂಕೆ ವ್ಯಕ್ತವಾದ ಹಿನ್ನೆಲೆ ಪೌರಾಯುಕ್ತರು ಉಡುಪಿ ಠಾಣೆಯಲ್ಲಿ ದೂರು ನೀಡಿದ್ದಾರೆ. ಮೇಲ್ನೋಟಕ್ಕೆ ಯೂನಿಯನ್ ಬ್ಯಾಂಕ್ ಸೀಲ್ ಅನ್ನು ದುರ್ಬಳಕೆ ಮಾಡಿ, ಆಸ್ತಿ ತೆರಿಗೆ ಪಾವತಿ ಮಾಡಿದಂತೆ ತೋರಿಸಿ ಹಣವನ್ನು ದುರ್ಭಳಕೆ ಮಾಡಿರುವ ಶಂಕೆ ವ್ಯಕ್ತವಾಗಿದೆ

ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


Harish Kiran Thunga

Harish Kiran Thunga is a journalist and editor based in Karnataka, India. He is actively involved in Udupi District Working Journalist Associations in the Udupi district. He serves as the Editor in Chief at Newsrays.in, a regional news portal. He also manages the Newsrays live YouTube channel, which features local news and short stories.

Join WhatsApp

Join Now

Leave a Comment

You cannot copy content of this page