ಬ್ರಹ್ಮಾವರದಲ್ಲಿ ಜೋಡಿ ಕೊಲೆ: ಹೆತ್ತವರನ್ನೇ ಕೊಂದ ಪಾಪಿ ಮಗ

August 24, 2026 11:16 AM

ಬ್ರಹ್ಮಾವರ: ಇಲ್ಲಿನ ಬೈಕಾಡಿ ಗಾಂಧಿನಗರದಲ್ಲಿ ಬೆಳ್ಳಂಬೆಳಗ್ಗೆ ಆಘಾತಕಾರಿ ಘಟನೆ ನಡೆದಿದೆ. ಹೆತ್ತವರನ್ನೇ ಮಗ ಕೊಂದಿರುವ ದುಷ್ಕೃತ್ಯ ಬೆಳಕಿಗೆ ಬಂದಿದೆ.

ಬೈಕಾಡಿ ಗಾಂಧಿನಗರ ನಿವಾಸಿ ಮೆಹಬುಬ್‌ ಮತ್ತು ಸಂಸಾದ್‌ ಬೇಗಂ ಎಂಬುವವರನ್ನು ಅವರ ಮಗ ಶಾಹಿದ್‌ ಅಲಿ ಹತ್ಯೆ ಮಾಡಿದ್ದಾನೆ. ಕೊಲೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಸುತ್ತಿಗೆಯಿಂದ ಕೊಲೆ ಮಾಡಿರುವದಾಗಿ ತಿಳಿದುಬಂದಿದೆ. ಪೊಲೀಸರು ಆರೋಪಿಯನ್ನು ಬಂಧಿಸಿ ವಶಕ್ಕೆ ಪಡೆದಿದ್ದಾರೆ.
ಬಂಧಿತ ಈ ಹಿಂದೆ ಯುವಕ ಡೆಲಿವರಿ ಸರ್ವಿಸ್‌ ಉದ್ಯೋಗ ಮಾಡಿಕೊಂಡಿದ್ದು, ಇತ್ತಿಚಿಗೆ ಕೆಲಸವನ್ನು ಬಿಟ್ಟಿದ್ದ ಎನ್ನಲಾಗಿದೆ. ಸ್ಥಳೀಯರ ಪ್ರಕಾರ ನಿನ್ನೆ ರಾತ್ರಿ ವೇಳೆ ಮನೆಯಲ್ಲಿ ಜೋರಾದ ಗಲಾಟೆ ಕೇಳುತ್ತಿದ್ದು,, ಈ ವೇಳೆ ಹತ್ಯೆಯನ್ನು ಮಾಡಿರಬೇಕು ಎಂದು ಶಂಕಿಸಲಾಗಿದೆ. ಬೆಳಗ್ಗೆ ಶಾಹಿದ್‌ ಸ್ವತಃ ಪೊಲೀಸರಿಗೆ ಕರೆ ಮಾಡಿ ಘಟನೆಯ ಬಗ್ಗೆ ವಿವರಿಸಿದ್ದಾನೆ ಎಂದು ತಿಳಿದುಬಂದಿದೆ.

ಸ್ಥಳಕ್ಕೆ ಫಾರೆನ್ಸಿಕ್‌ ತಂಡ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಬ್ರಹ್ಮಾವರ ಠಾಣೆ ಪೊಲೀಸರು ಆರೋಪಿ ಶಾಹಿದ್‌ನನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.

ನಶೆ ಅಮಲಿನಲ್ಲಿ ನಡೆದ ಅವಘಡ!?

ಆರೋಪಿ ಶಾಹಿದ್‌ ಮೇಲೆ ಮಾದಕ ದೃವ್ಯ ಸೇವಿಸಿರುವ ಬಗ್ಗೆ ಈ ಹಿಂದೆ ಬ್ರಹ್ಮಾವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ. ಈ ವಿಚಾರಕ್ಕೆ ಹಲವು ಬಾರಿ ಮನೆಯಲ್ಲಿ ಗಲಭೆ ಸಂಭವಿಸಿದೆ. ನಿನ್ನೆ ರಾತ್ರಿ ನಡೆದ ಈ ಘಟನೆ ಕೂಡ ಮಾದಕ ದೃವ್ಯದ ಅಮಲಿನಲ್ಲಿಯೇ ನಡೆದ ಕೃತ್ಯ ಎಂದು ಶಂಕಿಸಲಾಗಿದೆ.

Harish Kiran Thunga

Harish Kiran Thunga is a journalist and editor based in Karnataka, India. He is actively involved in Udupi District Working Journalist Associations in the Udupi district. He serves as the Editor in Chief at Newsrays.in, a regional news portal. He also manages the Newsrays live YouTube channel, which features local news and short stories.

Join WhatsApp

Join Now

Leave a Comment

You cannot copy content of this page