20% ಭಾರೀ ರಿಯಾಯಿತಿ – ಗ್ರಾಹಕರಿಗೆ ಸುವರ್ಣಾವಕಾಶ
ಸಾಲಿಗ್ರಾಮ, ಫೆ.7: ಇಲ್ಲಿನ ಮಾರುತಿ ಕಾಂಪ್ಲೆಕ್ಸ್‌ನಲ್ಲಿ ಮಾರುತ್ತಿ ಸಿಲ್ಕ್ಸ್ ವತಿಯಿಂದ ಗ್ರಾಹಕರಿಗಾಗಿ ವಿಶೇಷ “ಸಾರಿ ಮೇಳ” ವನ್ನು ಆಯೋಜಿಸಲಾಗಿದೆ.
ಈ ಮೇಳವು ಫೆಬ್ರವರಿ 7 ಮತ್ತು 8, 2026ರಂದು ಎರಡುದಿನಗಳ ಕಾಲ ನಡೆಯಲಿದ್ದು, ಭರ್ಜರಿ ಖರೀದಿ ಅವಕಾಶವನ್ನು ಒದಗಿಸಲಿದೆ.
1993ರಿಂದ ಗುಣಮಟ್ಟ ಮತ್ತು ನಂಬಿಕೆಗೆ ಹೆಸರಾದ ಮಾರುತ್ತಿ ಸಿಲ್ಕ್ಸ್‌ನಲ್ಲಿ, ಈ ವಿಶೇಷ ಮೇಳದ ಪ್ರಯುಕ್ತ 20 ರಾಜ್ಯಗಳ ಸೀರೆಗಳ ಪ್ರದರ್ಶನ ಮತ್ತು ಮಾರಾಟ ನಡೆಯಲಿದ್ದು. ಈ ಸಂದರ್ಭದಲ್ಲಿ ಎಲ್ಲಾ ಸೀರೆಗಳ ಮೇಲೆ 20% ವಿಶೇಷ ರಿಯಾಯಿತಿ ನೀಡಲಾಗುತ್ತಿದೆ. ಮದುವೆ, ಹಬ್ಬ–ಹರಿದಿನಗಳು ಹಾಗೂ ವಿಶೇಷ ಸಂದರ್ಭಗಳಿಗೆ ಸೂಕ್ತವಾದ ನಾನಾ ವಿನ್ಯಾಸಗಳ ಸೀರೆಗಳು ಗ್ರಾಹಕರನ್ನು ಆಕರ್ಷಿಸುತ್ತಿವೆ.
ಮೇಳದ ಪ್ರಮುಖ ಆಕರ್ಷಣೆಯಾಗಿ, ₹100 ರಿಂದ ₹25,000 ವರೆಗೆ ಮೌಲ್ಯದ ಸೀರೆಗಳು ಲಭ್ಯವಿದ್ದು, ಪ್ರತಿಯೊಬ್ಬ ಗ್ರಾಹಕರಿಗೂ ತಕ್ಕ ಬೆಲೆಯಲ್ಲಿ ವಿಶಿಷ್ಟ ಆಯ್ಕೆ ದೊರೆಯಲಿದೆ. ಪರಂಪರೆಯ ರೇಷ್ಮೆ ಸೀರೆಗಳಿಂದ ಹಿಡಿದು ಆಧುನಿಕ ವಿನ್ಯಾಸದ ಸೀರೆಗಳವರೆಗೆ ವಿಶಾಲ ಸಂಗ್ರಹವನ್ನು ಮಾರುತ್ತಿ ಸಿಲ್ಕ್ಸ್ ಒದಗಿಸಿದೆ.
ಮಳಿಗೆ ವ್ಯವಸ್ಥಾಪಕರು ಮಾತನಾಡಿ,
“ಗ್ರಾಹಕರಿಗೆ ಉತ್ತಮ ಗುಣಮಟ್ಟವನ್ನು ಕೈಗೆಟುಕುವ ಬೆಲೆಯಲ್ಲಿ ನೀಡುವುದು ನಮ್ಮ ಉದ್ದೇಶ. ಈ ಸಾರಿ ಮೇಳವು ಕುಟುಂಬ ಸಮೇತರಾಗಿ ಬಂದು ಖರೀದಿ ಮಾಡುವ ಉತ್ತಮ ಅವಕಾಶವಾಗಿದೆ” ಎಂದು ತಿಳಿಸಿದರು.
ಸೀಮಿತ ಅವಧಿಯ ಈ ವಿಶೇಷ ಮೇಳಕ್ಕೆ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭೇಟಿ ನೀಡಿ, ಆಕರ್ಷಕ ರಿಯಾಯಿತಿಯೊಂದಿಗೆ ಖರೀದಿ ಮಾಡುವಂತೆ ಮಾರುತ್ತಿ ಸಿಲ್ಕ್ಸ್ ಮನವಿ ಮಾಡಿದೆ.
ವಿಳಾಸ: ಮಾರುತ್ತಿ ಕಾಂಪ್ಲೆಕ್ಸ್, ಅಂಜನೇಯ ದೇವಸ್ಥಾನದ ಹತ್ತಿರ, ಸಾಲಿಗ್ರಾಮ – 576225
ಸಂಪರ್ಕ: +91 9620153981, 7899773981











