ನ್ಯೂಸ್ ಬ್ಯೂರೋ: ಭಾರತದ ಹಣಕಾಸು ಸಚಿವರು ನಿರ್ಮಲಾ ಸೀತಾರಾಮನ್, ಫೆ.01ರಂದು ದೇಶದ ಒಂಬತ್ತನೇ ನಿರಂತರ ಬಜೆಟ್ ಮಂಡಿಸಲು ಸಜ್ಜಾಗಿದ್ದಾರೆ. ಜಾಗತಿಕ ಅನಿಶ್ಚಿತತೆ, ವಾಣಿಜ್ಯ ಬಿಕ್ಕಟ್ಟು, ಅಮೇರಿಕಾದ ಹೆಚ್ಚಿನ ಸುಂಕಗಳು ಹಾಗೂ ರೂಪಾಯಿ ಮೌಲ್ಯದ ಅಸ್ಥಿರತೆಯ ನಡುವೆಯೇ ಈ ಬಜೆಟ್ ಮಹತ್ತರ ಮಹತ್ವ ಪಡೆದಿದೆ.
ಪ್ರಮುಖ ನಿರೀಕ್ಷೆಗಳು
1. ತೆರಿಗೆ ರಿಯಾಯಿತಿಗಳು – ಹೆಚ್ಚಿನ ರಚನಾತ್ಮಕ ಸುಧಾರಣೆಗಳ ಸೂಚನೆ
ಕಳೆದ ವರ್ಷ ತೆರಿಗೆ ಸ್ಲ್ಯಾಬ್‌ಗಳಲ್ಲಿ ದೊಡ್ಡಮಟ್ಟದ ಬದಲಾವಣೆಗಳು ಆಗಿರುವುದರಿಂದ ಈ ಬಾರಿ ದೊಡ್ಡ “ಪಾಪ್ಯುಲಿಸ್ಟ್” ರಿಯಾಯಿತಿಗಳಿಗಿಂತ ರಚನಾತ್ಮಕ ಆರ್ಥಿಕ ಸುಧಾರಣೆಗಳು ಹೆಚ್ಚು ಕೇಂದ್ರೀಕರಿಸಲಾಗುವ ಸಾಧ್ಯತೆ ಇದೆ.
ಮಧ್ಯಮ ವರ್ಗದ ತೆರಿಗೆದಾರರ ನಿರೀಕ್ಷೆಗಳು
- ಹೆಚ್ಚುವರಿ ತೆರಿಗೆ ಸ್ಲ್ಯಾಬ್ ಸರಳೀಕರಣ
- ಸ್ಟಾಂಡರ್ಡ್ ಡಿಡಕ್ಷನ್ ಹೆಚ್ಚಳ
- ಹೊಸ ತೆರಿಗೆ ವ್ಯವಸ್ಥೆಗೆ ಹೆಚ್ಚಿನ ಸೌಲಭ್ಯಗಳು
ಕಳೆದ ಬಜೆಟ್‌ನಲ್ಲಿ ₹12 ಲಕ್ಷವರೆಗೆ ಆದಾಯ ಪರಿಣಾಮಕಾರಿಯಾಗಿ ತೆರಿಗೆ ಮುಕ್ತವಾಗಿದ್ದರಿಂದ, ಈ ಬಾರಿ ಇನ್ನಷ್ಟು ರಿಯಾಯಿತಿಗಳ ನಿರೀಕ್ಷೆ ಹೆಚ್ಚಾಗಿದೆ.
2. ತಯಾರಿಕಾ ವಲಯ ಮತ್ತು MSMEಗಳಿಗೆ ಬಲ – ಸರಬರಾಜು ಸರಪಳಿ ದೃಢೀಕರಣ
ಅಮೇರಿಕಾದ 50% ಸುಂಕಗಳ ಪರಿಣಾಮಕ್ಕೆ ಒಳಗಾದ ತಯಾರಿಕೆಯ ಹಾಗೂ MSME ವಲಯಗಳು ಲಾಜಿಕ್ಸ್ ಸುಧಾರಣೆ, ನೀತಿ ಸ್ಪಷ್ಟತೆ, ಸ್ಥಳೀಯ ಸರಬರಾಜು ವ್ಯವಸ್ಥೆಯನ್ನು ಬಲಪಡಿಸುವುದು ಸೇರಿದಂತೆ ಹಲವು ಸಹಾಯಕ ಕ್ರಮಗಳ ನಿರೀಕ್ಷೆಯಲ್ಲಿವೆ.
MSME ವಲಯವು ಭಾರತದ ಎರಡರಲ್ಲಿ ಒಂದು ರಫ್ತಿಗೆ ಕಾರಣವಾಗಿರುವುದರಿಂದ, ಟ್ರಂಪ್ ಆಡಳಿತದ ಸುಂಕ ಬದಲಾವಣೆಗಳಿಂದ ಬಂದ ಒತ್ತಡದಿಂದ ಹೊರಬರುವುದು ಅತ್ಯವಶ್ಯಕ.
3. ಶುದ್ಧ ಇಂಧನ ಮತ್ತು EV ಮೌಲ್ಯ ಸರಪಳಿಗೆ ಮಹತ್ವದ ಪ್ರೋತ್ಸಾಹ
2026ರ ಬಜೆಟ್ ಭಾರತ ಶುದ್ಧ ಇಂಧನ ಕ್ಷೇತ್ರದಲ್ಲಿ ಜಾಗತಿಕ ನಾಯಕತ್ವ ಸಾಧಿಸುವ ಮಾರ್ಗವನ್ನು ನಿರ್ಧರಿಸಬಹುದು.
EV ವಲಯವು:
- ಬ್ಯಾಟರಿ ಉತ್ಪಾದನೆ
- ಚಾರ್ಜಿಂಗ್ ಮೂಲಸೌಕರ್ಯ
- ರಿಸೈಕ್ಲಿಂಗ್
- ದೀರ್ಘಾವಧಿ ಹಣಕಾಸು
ಇವುಗಳಿಗೆ ತೆರಿಗೆ ಹಾಗೂ ನಯವಾದ ನೀತಿಗಳ ನಿರೀಕ್ಷೆಯಲ್ಲಿದೆ.
ವಿವಿಧ ವಲಯಗಳ ಹೈಲೈಟ್ಸ್
ವಿಮಾನಯಾನ (Aviation)
ಸರ್ಕಾರವು ವಾಣಿಜ್ಯ ವಿಮಾನಗಳಿಗೆ ‘ಇನ್‌ಫ್ರಾಸ್ಟ್ರಕ್ಚರ್ ಸ್ಟೇಟಸ್’ ನೀಡುವ ಬಗ್ಗೆ ಚಿಂತನೆ ನಡೆಸುತ್ತಿದೆ. ಇದರಿಂದ ಏರ್‌ಲೈನ್ಸ್‌ಗೆ ಕಡಿಮೆ ಬಡ್ಡಿದರದಲ್ಲಿ ಸಾಲ ದೊರೆಯಲಿದ್ದು, ಭಾರತಕ್ಕೆ ಈಗಾಗಲೇ 1,700ಕ್ಕೂ ಹೆಚ್ಚು ವಿಮಾನಗಳ ಆರ್ಡರ್ ಇರುವುದರಿಂದ ಇದು ದೊಡ್ಡ ನೆರವು.
ರೈಲ್ವೆ
2026–27ರಲ್ಲಿ ₹2.75 ಲಕ್ಷ ಕೋಟಿ ಹೂಡಿಕೆ ಸಾಧ್ಯತೆ ಇದೆ ಎಂದು ಅಂದಾಜಿಸಲಾಗಿದೆ. ಇದರಿಂದ ರೈಲ್ವೇ ಮೂಲಸೌಕರ್ಯಕ್ಕೆ ಹೆಚ್ಚಿನ ನಿರೀಕ್ಷೆಗಳನ್ನು ಹೊಂದಿದೆ.
ಆರೋಗ್ಯ ವಲಯ
ತಜ್ಞರು ಸಾರ್ವಜನಿಕ ಆರೋಗ್ಯ ವಲಯದಲ್ಲಿ ಹೆಚ್ಚಿನ ಹೂಡಿಕೆಯನ್ನು ಬಯಸುತ್ತಿದ್ದಾರೆ. ಏಕೆಂದರೆ ಭಾರತದ ಸಾರ್ವಜನಿಕ ಆರೋಗ್ಯಕ್ಕೆ ಬಳಸುವ ವೆಚ್ಚವು GDPಯ 1.6–1.7% ಮಾತ್ರ. ಇದು ಆರೋಗ್ಯ ನೀತಿಯ ಗುರಿಗಿಂತ ಕಡಿಮೆಯಾಗಿದೆ. ಇದಕ್ಕಾಗಿ ತಜ್ಞರು
ವಿಶೇಷಜ್ಞರು:
- ಆಸ್ಪತ್ರೆಗಳ ಮೂಲಸೌಕರ್ಯಕ್ಕೆ ಉತ್ತೇಜನ
- ತಂತ್ರಜ್ಞಾನ ಆಧಾರಿತ ಚಿಕಿತ್ಸೆ
- ಅನಾರೋಗ್ಯ ತಡೆಗಟ್ಟಲು ಮುನ್ನೆಚ್ಚರಿಕಾ ಯೋಜನೆ
- ಗ್ರಾಮೀಣ ಆರೋಗ್ಯ ವ್ಯವಸ್ಥೆಯನ್ನು ಬಲಪಡಿಸುವ ಯೋಜನೆಗಳಿಗೆ ಹೆಚ್ಚಿನ ಹೂಡಿಕೆ ಅಗತ್ಯವಿದೆ ಎಂದು ಒತ್ತಾಯಿಸುತ್ತಿದ್ದಾರೆ. ಹಾಗೆಯೇ ಬಜೆಟ್‌ನಲ್ಲಿ PLI 2.0, ವೈದ್ಯಕೀಯ ಸಾಧನ ಉತ್ಪಾದನೆ, AI ಆಧಾರಿತ ಆರೋಗ್ಯಯಂತ್ರ ಅಭಿವೃದ್ದಿ ಮುಂತಾದವುಗಳಿಗೆ ಉತ್ತೇಜನ ನೀಡುವ ನಿರೀಕ್ಷೆ ಇದೆ.
ಬ್ಯಾಂಕಿಂಗ್ ಮತ್ತು NBFCಗಳು
ಠೇವಣಿ ಬೆಳವಣಿಗೆ ನಿಧಾನವಾಗಿರುವುದರಿಂದ ಬ್ಯಾಂಕ್‌ಗಳಿಗೆ ತೆರಿಗೆ ರಿಯಾಯಿತಿಗಳು, ಕ್ರೆಡಿಟ್ ಗ್ಯಾರಂಟಿಗಳು ಹಾಗೂ MSMEಗಳಿಗೆ ಕಡಿಮೆ ವೆಚ್ಚದ ಹಣಕಾಸು ಅಗತ್ಯ.
ವೃದ್ಧ ನಾಗರಿಕರಿಗಾಗಿ ಸೌಲಭ್ಯಗಳು
ವೃದ್ಧ ನಾಗರಿಕರಿಗೆ:
- ಬಡ್ಡಿ ಆದಾಯದ ಮೇಲಿನ ಹೆಚ್ಚುವರಿ ತೆರಿಗೆಗೆ ವಿನಾಯಿತಿ
- ವೈದ್ಯಕೀಯ ವೆಚ್ಚಗಳಿಗೆ ಹೆಚ್ಚಿನ ರಿಯಾಯಿತಿಯನ್ನು ಈ ಬಾರಿಯ ಬಜೆಟ್‌ನಲ್ಲಿ ನಿರೀಕ್ಷಿಸಬಹುದು.
ಹಣಕಾಸು ಶಿಸ್ತು ಮತ್ತು ಆರ್ಥಿಕ ದೃಷ್ಟಿಕೋನ
- 2026–27ರ ಆರ್ಥಿಕ ವರ್ಷದಲ್ಲಿ ಹಣಕಾಸಿನ ಬಲವರ್ಧನೆಗೆ ಪೂರಕವಾಗುವಂತಹ ಯೋಜನೆಗಳ ಬಗ್ಗೆ ಹೆಚ್ಚಿನ ಆಧ್ಯತೆ ನೀಡಲಾಗುತ್ತದೆ ಎಂದು ಅಂದಾಜಿಸಲಾಗಿದೆ. ಈ ಆರ್ಥಿಕ ವರ್ಷದ ವಿತ್ತಿಯ ಕೊರತೆ 4.3% ಎಂದು ಅಂದಾಜಿಸಲಾಗಿದೆ. ಇದು ಹಿಂದಿನ ವರ್ಷದ ಗುರಿಗಿಂತ ಕಡಿಮೆ.
- ಮಾರುಕಟ್ಟೆಯ ಸ್ಥಿರತೆ ಮತ್ತು ಹಣದುಬ್ಬರದ ನಿರ್ವಹಣೆ ಬಗ್ಗೆ ಹೆಚ್ಚಿನ ಒತ್ತು ನೀಡಿ, ಜನಪ್ರೀಯತೆ ನೀಡುವ ಯೋಜನೆಗಳ ಪ್ರಮಾಣ ಕಡಿಮೆ ಇರಬಹುದು ಎಂದು ಅಂದಾಜಿಸಲಾಗಿದೆ.
- ಜಾಗತಿಕ ಮಾರುಕಟ್ಟೆ ಅಸ್ಥಿರತೆ, ಸುಂಕ ಬದಲಾವಣೆಗಳು, ಕರೆನ್ಸಿ ಅಪಾಯ ಇವುಗಳನ್ನು ಮನಗೊಂಡು ಬಜೆಟ್ ಆರ್ಥಿಕ ಅಭದ್ರತೆ ನಿರ್ವಹಣೆಗೆ ಒತ್ತು ನೀಡುವ ಸಾಧ್ಯತೆ.
ಡಿಜಿಟಲ್ ಆರ್ಥಿಕತೆ ಮತ್ತು AI
ದೇಶದಲ್ಲಿ AI ಆಧಾರಿತ ಮೂಲಸೌಕರ್ಯ, ಜಾಗತಿಕ ಟೆಕ್ ಕಂಪನಿಗಳ ಹೂಡಿಕೆ, ಡಿಜಿಟಲ್ ಪರಿವರ್ತನೆ, ಕೌಶಲ್ಯಾಭಿವೃದ್ಧಿ ಸೇರಿದಂತೆ ಹಲವು ಘೋಷಣೆಗಳ ನಿರೀಕ್ಷೆಯಿದೆ.
ಸಾರಾಂಶ
ಯೂನಿಯನ್ ಬಜೆಟ್ 2026–27 ಜಾಗತಿಕ ಸವಾಲುಗಳ ನಡುವೆಯೂ ಭಾರತದ ದೀರ್ಘಾವಧಿಯ ಸುಸ್ಥಿರ ಬೆಳವಣಿಗೆಗೆ ಸೂಕ್ತ ಯೋಜನೆಗಳನ್ನು ಹಾಕುವ ನಿರೀಕ್ಷೆ ಇದೆ.











