ಬೆಳಗಾವಿ: ಬೆಳಗಾವಿಯ ಹಿಂಡಲಗಾ ಜೈಲಿನಲ್ಲಿ 200ಕ್ಕೂ ಹೆಚ್ಚು ಕೈದಿಗಳಿಗೆ ಕಳೆದ 10 ತಿಂಗಳಿಂದ ಕೂಲಿ ಹಣ ಸಿಕ್ಕಿಲ್ಲ.
ಸರ್ಕಾರವು ದಿನಗೂಲಿಯಾಗಿ 524 ರೂಪಾಯಿ ನಿಗದಿಪಡಿಸಿದ್ದು, ಜೀವಾವಧಿ ಶಿಕ್ಷೆಗೆ ಒಳಗಾದ ಕೈದಿಗಳು ಜೈಲಿನೊಳಗೆ ಕೆಲಸ ನಿರ್ವಹಿಸುತ್ತಿದ್ದಾರೆ. ಈ ವೇತನವು ಕೈದಿಗಳ ಕುಟುಂಬಗಳಿಗೆ ಆರ್ಥಿಕ ನೆರವು ನೀಡುತ್ತದೆ. ಜೊತೆಗೆ ಅವರ ದೈನಂದಿನ ವೆಚ್ಚ ನಿರ್ವಹಣೆಗೆ ಈ ಹಣ ನೆರವಾಗುತ್ತಿತ್ತು. ಈಗ 10 ತಿಂಗಳಿನಿಂದ ಕೂಲಿ ಸಿಗದೆ ಕೈದಿಗಳು ಮತ್ತು ಅವರ ಕುಟುಂಬದ ಸದಸ್ಯರು ಪರದಾಡುತ್ತಿದ್ದಾರೆ
ಬೆಳಗಾವಿ ಜೈಲೊಂದರಲ್ಲೇ ಮೂರು ಕೋಟಿ ರೂಪಾಯಿಗೂ ಹೆಚ್ಚು ಕೂಲಿ ಹಣ ಬಾಕಿ ಉಳಿದಿದೆ. ಬೇರೆ ಜೈಲಿನ ಪರಿಸ್ಥಿತಿ ಏನು ಎನ್ನುವುದು ತಿಳಿದುಬಂದಿಲ್ಲ.
ಸರ್ಕಾರಿ ಗ್ಯಾರಂಟಿ ಯೋಜನೆಗಳ ಸರಿದೂಗಿಸಲು ಈ ವೇತನ ಪಾವತಿಯಲ್ಲಿ ವಿಳಂಬವಾಗಿದೆ ಎಂಬ ಆರೋಪ ಕೇಳಿಬರುತ್ತಿದೆ. ಕೈದಿಗಳು ಮತ್ತು ಜೈಲು ಅಧಿಕಾರಿಗಳು ಈಗಾಗಲೇ ಸರ್ಕಾರದ ಗಮನಕ್ಕೆ ತಂದಿದ್ದರೂ, ಹಣ ಬಿಡುಗಡೆಯಾಗಿಲ್ಲ. ಆದಷ್ಟು ಬೇಗ ಹಣ ಬಿಡುಗಡೆ ಮಾಡುವಂತೆ ಕೈದಿಗಳು ಮನವಿ ಮಾಡಿದ್ದಾರೆ.











