ಮಂಗಳೂರು: ಬಿಗ್‌ಬಾಸ್ ಖ್ಯಾತಿಯ ಶೈನ್ ಶೆಟ್ಟಿ ಮಂಗಳೂರು ಹೊರವಲಯದ ಕಲ್ಲಾಪು ಬುರ್ದುಗೋಳಿ ಶ್ರೀಕೊರಗಜ್ಜನ ಉದ್ಭವ ಶಿಲೆಯ ಆದಿಸ್ಥಳ ಕ್ಷೇತ್ರಕ್ಕೆ ಭೇಟಿ ನೀಡಿ ಕೊರಗಜ್ಜ ದೈವದ ಮುಂದೆ ಪ್ರಾರ್ಥನೆ ಸಲ್ಲಿಸಿದರು.

ನವೆಂಬರ್‌ನಲ್ಲಿ ತೆರೆಕಾಣಲಿರುವ ಶೈನ್ ಶೆಟ್ಟಿ, ಪ್ರಭು ಮುಂಡ್ಕೂರು ಅಭಿನಯದ ”ಮರ್ಯಾದೆ ಪ್ರಶ್ನೆ” ಸಿನಿಮಾ ಯಶಸ್ಸು ಗಳಿಸಬೇಕೆಂದು ಅವರು ಕಲ್ಲಾಪು ಬುರ್ದುಗೋಳಿ ಕೊರಗಜ್ಜ ಉದ್ಬವ ಶಿಲೆಯ ಆದಿಸ್ಥಳದಲ್ಲಿ ಪ್ರಾರ್ಥನೆ ಸಲ್ಲಿಸಿದರು. ನಾವು ದಿನನಿತ್ಯ ನಮ್ಮ ಕಾರ್ಯ ಪ್ರಾರಂಭಿಸುವಾಗ ಅಜ್ಜನನ್ನು ನೆನಪಿಸಿಕೊಳ್ಳುತ್ತೇವೆ. ಇದರಿಂದ ಸಾಕಷ್ಟು ಯಶಸ್ಸು ಸಿಕ್ಕಿದೆ. ಈ ಸಿನಿಮಾ ಕೂಡಾ ಜನರ ಮನಗೆಲ್ಲಬೇಕು, ಅದಕ್ಕೆ ಕೊರಗಜ್ಜ ಹರಸಬೇಕೆಂದು ಪ್ರಾರ್ಥಿಸಲು ಈಕ್ಷೇತ್ರಕ್ಕೆ ಬಂದಿದ್ದೇವೆ ಖಂಡಿತ ದೈವ ಬಲ ಇರುತ್ತದೆ ಎಂದು ಶೈನ್ ಶೆಟ್ಟಿ ಈ ಸಂದರ್ಭ ಹೇಳಿದರು.

ಈ ವೇಳೆ ಬುರ್ದುಗೋಳಿ ಕ್ಷೇತ್ರದ ಅಧ್ಯಕ್ಷ ವಿಶ್ವನಾಥ್, ಕದ್ರಿ ಇವೆಂಟ್ಸ್‌ನ ಜಗದೀಶ್ ಕದ್ರಿ, ಸಾಯಿ ಪರಿವಾರ್ ಟ್ರಸ್ಟ್‌ನ ಪ್ರವೀಣ್ ಎಸ್. ಕುಂಪಲ, ಬುರ್ದುಗೋಳಿ ಕ್ಷೇತ್ರದ ಪುರುಷೋತ್ತಮ ಮೆಲಾಂಟ, ನವೀನ್ ಕಾಯಂಗಲ, ಪುರುಷೋತ್ತಮ ಕಲ್ಲಾಪು, ಪ್ರಶಾಂತ್ ಕಾಯಂಗಲ, ಹರೀಶ್ ಕೊಟ್ಟಾರಿ ಜೊತೆಗಿದ್ದರು.