ಫಿಲಂ ಬ್ಯೂರೋ ನ್ಯೂಸ್‌ರೇ: ವೃತ್ತಿ ಜೀವನದ ಉತ್ತುಂಗದಲ್ಲಿರುವಾಗ ಪಾತ್ರಗಳ ಆಯ್ಕೆ ಮಾಡುವಾಗ ಎಚ್ಚರಿಕೆ ವಹಿಸುತ್ತಾರೆ.
ಆದರೆ ರಶ್ಮಿಕಾ ಮಂದಣ್ಣ Rashmika Mandanna ಒಪ್ಪಿಕೊಂಡ ಪಾತ್ರದ ಬಗ್ಗೆ ಅಭಿಮಾನಿಗಳು ಬೆರಗಾಗಿದ್ದಾರೆ.
ನಿಜ, ಸೂಪರ್ ಸ್ಟಾರ್, ಪ್ಯಾನ್ ಇಂಡಿಯಾ ನಟಿ ರಶ್ಮಿಕಾ, ತಮ್ಮ ವೃತ್ತಿ ಜೀವನದಲ್ಲಿ ಒಂದು ವಿಭಿನ್ನ ಪಾತ್ರಕ್ಕೆ ಒಪ್ಪಿಕೊಂಡಿದ್ದಾರೆ.
ಅಟ್ಲಿ Atlee ನಿರ್ದೇಶನದ ದೀಪಿಕಾ ಪಡುಕೋಣೆ Deepika Padukone ನಾಯಕಿಯಾಗಿರುವ AA22xA6 ಚಿತ್ರದಲ್ಲಿ ರಶ್ಮಿಕಾ Rashmika Mandanna ನಟಿಸುತ್ತಿದ್ದಾರೆ.
ಈ ಚಿತ್ರದಲ್ಲಿ ರಶ್ಮಿಕಾ Rashmika Mandanna ನೆಗೆಟಿವ್ ಶೆಡ್‌ನ ಪಾತ್ರವನ್ನು ಮಾಡಲು ಸಿದ್ದರಾಗಿದ್ದು, ಇದೊಂದು ಚಾಲೆಂಜ್ ಆಗಿ ಸ್ವೀಕರಿಸಿದ್ದಾರೆ.
ಋಣಾತ್ಮಕ ಪಾತ್ರ ಮಾಡುವುದರಿಂದ ವೃತ್ತಿ ಜೀವನದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ ಎಂಬ ನಂಬಿಕೆ ನಡುವೆ ಈ ನಿರ್ಧಾರ ತೆಗೆದುಕೊಂಡಿರುವ ರಶ್ಮಿಕಾ Rashmika Mandanna ಬಗ್ಗೆ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಅಲ್ಲದೆ ಈ ಚಿತ್ರದಲ್ಲಿ ಮತ್ತೇ ಅಲ್ಲು ಅರ್ಜುನ್ ಜೊತೆಯಾಗ್ತಾರಾ ಎನ್ನುವುದು ನೋಡಬೇಕಿದೆ.