ದೆಹಲಿ: ತಂದೆಯಿಂದ ಟೆನ್ನಿಸ್ ಆಟಗಾರ್ತಿ ರಾಧಿಕಾ ಯಾದವ್ RADHIKA YADAV ಭೀಕರ ಹತ್ಯೆಯಾದ ಘಟನೆ ದೆಹಲಿಯ ಗುರುಗ್ರಾಮ ಸೆಕ್ಟರ್ 57ರಲ್ಲಿ ನಡೆದಿದೆ.

ರಾಷ್ಟ್ರೀಯ ಟೆನ್ನಿಸ್ ಆಟಗಾರ್ತಿ ರಾಧಿಕಾ ಯಾದವ್ RADHIKA YADAV ತಂದೆ ದೀಪಕ್ ಯಾದವ್ ಬಂದೂಕಿನಿಂದ ಗುಂಡು ಹಾರಿಸಿ ಕೊಲೆ ಮಾಡಿದ್ದಾರೆ.
ಕೊಲೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಮನೆಯಲ್ಲಿ ರಾಧಿಕಾ ಏನನ್ನೋ ಹುಡುಕಾಡುತ್ತಿರುವಾಗ ಹಿಂದಿನಿಂದ ಬಂದ ದೀಪಕ್ 32 ಬೋರ್ ರಿವಾಲ್ವರ್‌ನಿಂದ 5 ಸುತ್ತು ಗುಂಡು ಹಾರಿಸಿದ್ದಾನೆ.
ಇದನ್ನು ಕಂಡ ತಾಯಿ ಮಂಜು ಯಾದವ್ ತಕ್ಷಣ ಆಸ್ಪತ್ರೆಗೆ ದಾಖಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ.
ದೀಪಕ್ ಯಾದವ್ ಕೃತ್ಯದ ಬಗ್ಗೆ ಎಲ್ಲಾ ಕಡೆಯಿಂದಲೂ ಖಂಡನೆ ವ್ಯಕ್ತವಾಗಿದೆ.
ಪೊಲೀಸರು ದೀಪಕ್ ಯಾದವ್ ಅವರನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ. ಆದರೆ ಕೊಲೆಗೆ ಕಾರಣವಾದ ಅಂಶದ ಬಗ್ಗೆ ಬಾಯಿ ಬಿಡುತ್ತಿಲ್ಲ ಎಂದು ತಿಳಿದು ಬಂದಿದೆ.
ಮೂಲಗಳ ಪ್ರಕಾರ ಅನ್ಯ ಕೋಮಿನ ಹುಡುಗನ ಜೊತೆ ಇದ್ದ ಸ್ನೇಹವೇ ತಂದೆಯ ಕೋಪಕ್ಕೆ ಕಾರಣವಾಗಿದೆ.
ಕಳೆದ ವರ್ಷ ಆ ಹುಡುಗನ ಜೊತೆ ವಿಡಿಯೋ ಆಲ್ಬಂ ಕೂಡ ರಾಧಿಕಾ ಮಾಡಿದ್ದರು ಎನ್ನಲಾಗಿದೆ. ಪೊಲೀಸರು ಈ ಕುರಿತು ತನಿಖೆ ನಡೆಸುತ್ತಿದ್ದಾರೆ.