ಸಾಲಿಗ್ರಾಮ: ಇಲ್ಲಿನ ಶ್ರೀ ಗುರುನರಸಿಂಹ ದೇವರ ಹಣತೆ ಬೆಳಕಿನಲ್ಲಿ ಭವ್ಯ ದರ್ಶನ ಶನಿವಾರ ಸೂರ್ಯೋದಯಕ್ಕೂ ಮುನ್ನ ಸಂಪನ್ನಗೊಂಡಿತು.
ಶ್ರೀ ಗುರು ನರಸಿಂಹ ದೇವಸ್ಥಾನದಲ್ಲಿ ತಂತ್ರಿ ಕೃಷ್ಣ ಸೋಮಯಾಜಿಯವರ ನೇತೃತ್ವದಲ್ಲಿ ಋತ್ವಿಜರಿಂದ ರುದ್ರ ಪಠಣ, ಶ್ರೀ ದೇವರಿಗೆ ಪಂಚಾಮೃತ ಸಹಿತ ರುದ್ರಾಭಿಷೇಕದ ನಂತರ ದೇವಳದಾದ್ಯಂತ ಸಾಲಂಕೃತವಾಗಿ ಸಜ್ಜುಗೊಳಿಸಿದ್ದ ದೀಪ, ಹಣತೆಗಳ ಹೊಂಬೆಳಕಿನ ಭವ್ಯ ದರ್ಶನಕ್ಕೆ ದೀಪ ಬೆಳಗುವ ಮೂಲಕ ಅಧ್ಯಕ್ಷ ಡಾ.ಕೆ.ಎಸ್.ಕಾರಂತ ದಂಪತಿ ವಿಧ್ಯುಕ್ತವಾದ ಚಾಲನೆಯನ್ನು ನೀಡಿದರು.]
ಈ ಸಂದರ್ಭದಲ್ಲಿ ಉಪಾಧ್ಯಕ್ಷ ಗಣೇಶ ಮೂರ್ತಿ ನಾವಡ ದಂಪತಿ, ಕಾರ್ಯದರ್ಶಿ ಲಕ್ಷ್ಮೀನಾರಾಯಣ ತುಂಗ, ಕೋಶಾಧಿಕಾರಿ ಪರಶುರಾಮ ಭಟ್ಟ, ಆಡಳಿತ ಮಂಡಳಿಯ ಬೆಂಗಳೂರಿನ ಸದಸ್ಯ ಪ್ರತಿನಿಧಿ ಎ.ವಿ.ಶ್ರೀಧರ ಕಾರಂತ, ಇಂದ್ರಪ್ರಸ್ಥ ಪ್ರಕಾಶ ಮಯ್ಯ ದಂಪತಿ,ಕೂಟ ಮಹಾ ಜಗತ್ತು ಕೇಂದ್ರ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಸುರೇಶ ತುಂಗ,ಕೋಶಾಧಿಕಾರಿ ಗೋಪಾಲಕೃಷ್ಣ ಮಯ್ಯ, ಇಂದ್ರಪ್ರಸ್ಥ ಪ್ರಕಾಶ ಮಯ್ಯ ದಂಪತಿ, ಕಿರಿಮಂಜೇಶ್ವರ ,ಉಡುಪಿ, ಸಾಲಿಗ್ರಾಮ, ಮಂಗಳೂರು ಮುಂತಾದ ವಿವಿಧ ಅಂಗಸಂಸ್ಥೆಯ ಪದಾಧಿಕಾರಿಗಳು, ಗ್ರಾಮ ಮೊಕ್ತೇಸರ ಪ್ರತಿನಿಧಿಗಳು, ಅರ್ಚಕ ವರ್ಗ, ಸಿಬ್ಬಂದಿ ವರ್ಗ,ಮತ್ತು ಊರ ಪರವೂರ ಸಹಸ್ರಾರು ಭಕ್ತಾಭಿಮಾನಿಗಳು ಉಪಸ್ಥಿತರಿದ್ದರು.
ಭವ್ಯ ದರ್ಶನಕ್ಕೆ ಹಬ್ಬವೋ ಎಂಬಂತೆ ಜನಸಾಗರ !
ಬೆಳಗಿನ ಜಾವದಲ್ಲಿ ಆರಂಭಗೊಂಡ ಭವ್ಯ ದರ್ಶನಕ್ಕೆ ಸಾಗರೋಪಾದಿಯಲ್ಲಿ ಜನಸಾಗರ ಆಗಮಿಸಿ ದೀಪದ ಬೆಳಕಿನಲ್ಲಿ ಶ್ರೀ ದೇವರ ಭವ್ಯ ದರ್ಶನ ಪಡೆದು ಪುನೀತರಾದರು.
5 ಗಂಟೆಗೆ ಸಾಲಿಗ್ರಾಮ ಸಾಲಿಗ್ರಾಮ ಬ್ರಾಹ್ಮಣ ಮಹಾಸಭೆ ಯವರಿಂದ ವಿಶೇಷ ಭಜನಾ ಕಾರ್ಯಕ್ರಮವು ನಡೆಯಿತು.