[cmsmasters_row][cmsmasters_column data_width=”1/1″][cmsmasters_text]
ಆಗುಂಬೆ: ಮಲೆನಾಡಿನ ಆಗುಂಬೆ ಮೊದಲಾದ ಪರಿಸರದಲ್ಲಿ ಕಂಡು ಬರುವ ಕಾಳಿಂಗ ಸರ್ಪಗಳಿಗೆ ಇನ್ನು ಮುಂದೆ ಓಫಿಯೋಫಾಗಸ್ ಕಾಳಿಂಗ ಎಂಬ ವೈಜ್ಞಾನಿಕ ಹೆಸರನ್ನು ನೀಡಲಾಗಿದೆ.
ಕಾಳಿಂಗ ಸರ್ಪಗಳ ಸಂಶೋಧಕ ಗೌರಿಶಂಕರ್ ಅವರು ಈ ಬಗ್ಗೆ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡಿದ್ದು, 10 ವರ್ಷಗಳ ಅಧ್ಯಯನದ ಫಲಶ್ರುತಿಯಾಗಿ ಪಶ್ಚಿಮಘಟ್ಟಗಳಲ್ಲಿ ಕಂಡುಬರುವ ಕಾಳಿಂಗ ಸರ್ಪಗಳಿಗೆ ಓಫಿಯೋಫಾಗಸ್ ಕಾಳಿಂಗ ಎಂಬ ವೈಜ್ಞಾನಿಕ ಹೆಸರನ್ನು ನೀಡಿದ್ದಾರೆ.
ಕಾಳಿಂಗ ಸರ್ಪಗಳು ಓಫಿಯೋಫಾಗಸ್ ಎಂಬ ಕುಲಕ್ಕೆ ಸೇರಿದ ಸರಿಸೃಪವಾಗಿದ್ದು, ದಕ್ಷಿಣ ಏಷ್ಯಾದಲ್ಲಿ ಕಂಡು ಬರುವ ಸರ್ಪಗಳಾಗಿವೆ. ಈ ಹಿಂದೆ ಅದರ ಲಕ್ಷಣಗಳಿಗೆ ಅನುಗುಣಾಗಿ ಮೂರು ಪ್ರಭೇದಗಳನ್ನಾಗಿ ವಿಂಗಡಿಸಲಾಗಿತ್ತು. ಅವು ಒಫಿಯೋಫಾಗಸ್ ಸಾಲ್ವತಾನ, ಓಫಿಯೋಫಾಗಸ್ ಬಂಗರಸ್, ಓಫಿಯೋಫಾಗಸ್ ಹೆನ್ನಾ ಎಂದು ಹೆಸರಿಸಲಾಗಿತ್ತು. ಓಫಿಯೋಫಾಗಸ್ ಹೆನ್ನಾ ಪ್ರಭೇದದ ಕಾಳಿಂಗ ಸರ್ಪಗಳು ಪೂರ್ವ ಪಾಕಿಸ್ತಾನ, ಅಂಡಮಾನ್ ನಿಕೋಬಾರ್ ದ್ವೀಪಗಳು, ಇಂಡೋ ಬರ್ಮಾ, ಇಂಡೋ ಚೀನಾ, ದಕ್ಷಿಣ ಮತ್ತು ಸೆಂಟಲ್ ಥೈಲಾಂಡ್ ಪ್ರದೇಶಗಳಲ್ಲಿ ಹೆಚ್ಚಾಗಿ ಕಾಣಸಿಗುತ್ತಿತ್ತು.ಈ ಮೊದಲು ದಕ್ಷಿಣ ಭಾರತದಲ್ಲಿ ಕಂಡು ಬರುವ ಕಾಳಿಂಗ ಸರ್ಪಗಳಿಗೂ ಓಫಿಯೋಫಾಗಸ್ ಹೆನ್ನಾ ಎಂದೇ ಕರೆಯಲಾಗುತ್ತಿತ್ತು. ಆದರೆ ಈ ಹೆನ್ನಾ ಮತ್ತು ಕಾಳಿಂಗ ಸರ್ಪಗಳಲ್ಲಿ ಪಟ್ಟಿಗಳಲ್ಲಿ ಮತ್ತು ಹಲ್ಲುಗಳಲ್ಲಿ ಸಂಖ್ಯೆಯಲ್ಲಿನ ವೆತ್ಯಾಸಗಳ ಆಧಾರದ ಮೇಲೆ ಸಂಶೋಧಕ ಗೌರಿಶಂಕರ್ ಅವರು ಓಫಿಯೋಫಾಗಸ್ ಕಾಳಿಂಗ ಎಂಬ ಕನ್ನಡದ ಹೆಸರು ನೀಡಿದ್ದಾರೆ. ಈ ಪ್ರಬೇದದ ಹಾವುಗಳು ಕನ್ಯಾಕುಮಾರಿಯಿಂದ ಮಹಾರಾಷ್ಟ್ರ ಭಾಗದಲ್ಲಿ ತಂಪು ಪ್ರದೇಶಗಳಲ್ಲಿ ಕಂಡುಬರುತ್ತದೆ.
[/cmsmasters_text][/cmsmasters_column][/cmsmasters_row]