ಬ್ರಹ್ಮಾವರ ತಾಲೂಕಿನ 7 ಮಂದಿ ಸಾಧಕರಿಗೆ 2024ನೇ ಸಾಲಿನ ಜಿಲ್ಲಾಮಟ್ಟದ ಸನ್ಮಾನಕ್ಕೆ ಆಯ್ಕೆಯಾಗಿದ್ದಾರೆ.
ಸಮಾಜಸೇವೆಗೆ ಸಾಲಿಗ್ರಾಮಪಟ್ಟಣ ಪಂಚಾಯತ್ ವ್ಯಾಪ್ತಿಯ ಕೆ.ತಾರಾನಾಥ್ ಹೊಳ್ಳ, ಸಾಹಿತ್ಯ ಕ್ಷೇತ್ರದ ಸಾಧನೆಗಾಗಿ ಮಣೂರು ಗ್ರಾಮದ ಶಂಕರ್ ಯು. ಮಂಜೇಶ್ವರ್, ಹಾವಂಜೆಯ ಪ್ರದೀಪ್ ಡಿಎಂ. ಶಿಕ್ಷಣ ಕ್ಷೇತ್ರದ ಸೇವೆಗಾಗಿ, ಕೆಂಜೂರಿನ ಡಾ. ದಿನಕರ್ ಕೊರಗರ ಗುಂಪು, ಯಕ್ಷಗಾನದ ಸಾಧನೆಗಾಗಿ ಉದಯ್‌ಕುಮಾರ್ ಹೊಸಾಳ, ಸಾಲಿಗ್ರಾಮದ ಪಿ.ವಿ ಆನಂದ್, ಝೀಕನ್ನಡ ಡ್ರಾಮಾ ಜ್ಯೂನಿಯರ್ ಖ್ಯಾತಿಯ ಬಾಲಪ್ರತಿಬೆ ಸಮೃದ್ಧಿ ಎಸ್. ಮೊಗವೀರ ಅವರನ್ನು ಆಯ್ಕೆಮಾಡಲಾಗಿದೆ.
ನ.೧ರಂದು ಉಡುಪಿಯಲ್ಲಿ ಮಹಾತ್ಮ ಗಾಂಧೀ ಕ್ರೀಡಾಂಗಣದಲ್ಲಿ ಜರಗಲಿರುವ ಸಮಾರಂಭದಲ್ಲಿ ವಿವಿಧ ಗಣ್ಯರ ಉಪಸ್ಥಿತಿಯಲ್ಲಿ ಈ ಎಲ್ಲಾ ಸಾಧಕರಿಗೆ ಸನ್ಮಾನ ಜರಗಲಿದೆ.