• August 23, 2025
  • Last Update August 21, 2025 9:01 pm
  • Australia

Blog

Breaking news

ಮಂಗನಕಾಯಿಲೆಗೆ ಮುಂದಿನ ವರ್ಷ ಲಸಿಕೆ?

ಕೆಎಫ್‌ಡಿ ಕಾಯಿಲೆಗೆ ಮುಂದಿನ ವರ್ಷ ಲಸಿಕೆ ಬರುವ ನಿರೀಕ್ಷೆ ಇದೆ ಎಂದು ಆರೋಗ್ಯ ಸಚಿವ ದಿನೇಶ್‌ ಗುಂಡುರಾವ್‌ ಹೇಳಿದರು. ತೀರ್ಥಹಳ್ಳಿ ಶಾಸಕ ಅರಗ ಜ್ಞಾನೇಂದ್ರ ಅವರ ಪ್ರಶ್ನೆಗೆ ಉತ್ತರಿಸಿ, ಈ ಹಿಂದೆ ಎನ್‌ಐವಿ ಪೂನಾ ಕೇಂದ್ರದವರು 1990ರಲ್ಲಿ ತಯಾರಿಸಿದ ಲಸಿಕೆಯು ಕ್ಷಮತೆಯನ್ನು ಕಳೆದುಕೊಂಡಿದ್ದು, ಅದರಿಂದ ಕಾಯಿಲೆಗೆ ಯಾವುದೇ ರೀತಿಯ ಪ್ರಯೋಜನವಾಗುತ್ತಿಲ್ಲ. ಈ ಹಿನ್ನೆಲೆ ಹೈದರಬಾದ್‌ನ ಐಸಿಎಂಆರ್‌ನಲ್ಲಿ ಲಸಿಕೆ ತಯಾರಿಸಲು ಸೂಚಿಸಿದ್ದೇವೆ. ಈಗಾಗಲೇ ಉತ್ತಮ ಫಲಿತಾಂಶದ ನಿರೀಕ್ಷೆ ಇದೆ. ಇದು ನಮ್ಮ ರಾಜ್ಯಕ್ಕೆ ಮಾತ್ರ ಸೀಮಿತವಾಗಿರುವ ಹಿನ್ನೆಲೆ ಕೇಂದ್ರ […]

Read More
Breaking news

ಸರಕಾರಿ ಆಸ್ಪತ್ರೆಗಳಲ್ಲಿ ಸರ್ವರ್ ಸಮಸ್ಯೆ: ರೋಗಿಗಳ ಪರದಾಟ

ಹರೀಶ್‌ ಕಿರಣ್‌ ತುಂಗ, ಸಾಸ್ತಾನ ಉಡುಪಿ: ರಾಜ್ಯದ ಸರಕಾರಿ ಆಸ್ಪತ್ರೆಗಳಲ್ಲಿ ಸರ್ವರ್ ಸಮಸ್ಯೆಯಿಂದ ರೋಗಿಗಳು ಗಂಟೆಗಟ್ಟಲೆ ಸಾಲಿನಲ್ಲಿ ನಿಲ್ಲಬೇಕಾದ ಪರಿಸ್ಥಿತಿ ಎದುರಾಗಿದೆ. ಸರಕಾರಿ ಆಸ್ಪತ್ರೆಗಳಲ್ಲಿ ಪ್ರತಿ ಚಿಕಿತ್ಸೆ ಮತ್ತು ಪರೀಕ್ಷೆಗಳಿಗೆ ಬಿಲ್ ಮಾಡಿದ ಬಳಿಕವೇ ಚಿಕಿತ್ಸೆ ನೀಡಲಾಗುತ್ತದೆ. ಆದರೆ ಬಿಲ್ ಮಾಡಲೆಂದು ಹೋದರೆ ಸರ್ವರ್ ಇಲ್ಲ. ತುರ್ತು ಸಂದರ್ಭಗಳಲ್ಲಿ ಚಿಕಿತ್ಸೆ ನೀಡಿ ಸರ್ವರ್ ಬಂದ ಬಳಿಕ ಬಿಲ್‌ ಮಾಡಲಾಗುತ್ತಿದೆ. ಆದರೆ ಹೊರ ರೋಗಿಗಳಿಗೆ ಬಿಲ್ ಆಗದೆ ಸಮಸ್ಯೆಯಾಗುತ್ತಿದೆ‌. ಲ್ಯಾಬ್ ಪರೀಕ್ಷೆ ಸಂದರ್ಭಗಳಲ್ಲಿ ಬಿಲ್ ಆಗದೆ ಸೇವೆ ನೀಡಲು […]

Read More
Breaking news

ಪಾದಾಚಾರಿಗೆ ಸ್ವಿಫ್ಟ್‌ ಕಾರು ಢಿಕ್ಕಿ: ಸಾವು

ಹೊನ್ನಾವರ: ಸ್ವಿಫ್ಟ್‌ ಕಾರೊಂದು ಅತೀವೇಗ ಅಜಾಗರೂಕತೆಯಿಂದ ಚಾಲನೆ ಮಾಡಿ ಪಾದಚಾರಿಗೆ ಢಿಕ್ಕಿ ಹೊಡೆದ ಪರಿಣಾಮ ಪಾದಚಾರಿಯೋರ್ವ ಸ್ಥಳದಲ್ಲೇ ಮೃತಪಟ್ಟ ಘಟನೆ, ಹೊನ್ನಾವರದ ಅಗ್ರಹಾರ ಹಳದಿಪುರ ಗ್ರಾಮದ ಮಣ್ಣಗದ್ದೆಯಲ್ಲಿ ಸಂಭವಿಸಿದೆ. ಫೆ. 23ರ ರಾತ್ರಿ 10:30ರ ಸುಮಾರಿಗೆ ಕುಂಭಮೇಳಕ್ಕೆ ತೆರಳಿದ್ದ, ಕುಂದಾಪುರ ಹೊಸಾಡು ಗ್ರಾಮದ ಮುಳ್ಳಿಕಟ್ಟೆ ಕಮ್ಮಾರಕೊಡ್ಲು ನಿವಾಸಿ ಸುಕುಮಾರ್‌ ಸುಬ್ರಾಯ ಆಚಾರ್ಯ (48) ರಾಷ್ಟ್ರೀಯ ಹೆದ್ದಾರಿ 66ರಲ್ಲಿ, ಅತೀವೇಗ ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ರಸ್ತೆಯ ಪಾದಾಚಾರಿ ಮಾರ್ಗದಲ್ಲಿ ನಡೆದುಕೊಂಡು ಮೊಬೈಲ್‌ನಲ್ಲಿ ಮಾತನಾಡುತ್ತಾ ತೆರಳುತ್ತಿದ್ದ ಮಹೇಶ್‌ ಸುಬ್ರಾಯ ಗೌಡ […]

Read More
Breaking news

ಹೈಡ್ರಾಮದಲ್ಲಿ ನಡೆದ ಚುನಾವಣೆಯಲ್ಲಿ ಮೋಸೆಸ್‌ ರೋಡ್ರಿಗಸ್‌ ಗೆಲುವು

ಓಎಸ್‌ಎಸಿ ಎಜ್ಯುಕೇಶನ್‌ ಸೊಸೈಟಿ ಚುನಾವಣೆ: ಗೊಂದಲದ ನಡುವೆಯೂ ಸಸೂತ್ರವಾಗಿ ನಡೆದ ಚುನಾವಣೆ ಬ್ರಹ್ಮಾವರ: ಇಲ್ಲಿನ ಓಎಸ್‌ಎಸಿ ಎಜ್ಯುಕೇಶನ್‌ ಸೊಸೈಟಿಯ ಪ್ರಧಾನ ಕಾರ್ಯದರ್ಶಿಯಾಗಿ ಮೋಸೆಸ್‌ ರೋಡ್ರಿಗಸ್‌ ಆಯ್ಕೆಯಾಗಿದ್ದಾರೆ. ಕಾಲೇಜು ಕಾರ್ಯದರ್ಶಿಯಾಗಿ ಅನಿಲ್ ಬಿ ರೋಡ್ರಿಗಸ್, ಸಿಬಿಎಸ್‌ಸಿ ಕಾರ್ಯದರ್ಶಿಯಾಗಿ ರೊನಾಲ್ಡ್ ಒಲಿವೆರಾ ಆಯ್ಕೆಯಾಗಿದ್ದು, ಸದಸ್ಯರಾಗಿ ಜೆರೋಮ್ ರೋಡ್ರಿಗಸ್, ಕ್ಲೆಮೆಂಟ್ ಡಿ’ಸಿಲ್ವಾ, ಸ್ಟೀವನ್ ರೋಡ್ರಿಗಸ್, ಸ್ಟೀವನ್ ಅಲ್ಮೇಡಾ, ಲವೀನ್ ಲೆವಿಸ್, ಲಿಲ್ಲಿ ಡಿ’ಸೋಜಾ, ರೋಲ್ವಿನ್ ದೇಸಾ, ಜಾಯ್ಸನ್ ಡೇಸಾ, ಲೂಯಿಸ್ ಡಿ’ಸೋಜಾ ಪಾಲ್ ಡಿ ಅಲ್ಮೇಡಾ, ಅನಿಲ್ ಎಂ ಲೋಬೋ, ಮೈಕೆಲ್ ಡಿ ಅಲ್ಮೇಡಾ ಆಯ್ಕೆಯಾಗಿದ್ದಾರೆ. […]

Read More
Breaking news

ಮಿಸ್ ಗ್ಲೋಬಲ್ನಲ್ಲಿ ಮಿಂಚಲಿರುವ ಬಾರ್ಕೂರಿನ ಸ್ವೀಝಲ್

ಬ್ರಹ್ಮಾವರ: ಕಾಂಬೋಡಿಯಾದಲ್ಲಿ ನಡೆಯುತ್ತಿರುವ ಮಿಸ್ ಗ್ಲೋಬಲ್ ಇಂಟರ್ನ್ಯಾಶನಲ್ಸ್ ಸ್ಪರ್ಧೆಗೆ ಭಾರತವನ್ನು ಪ್ರತಿನಿಧಿಸಿ ಬಾರ್ಕೂರು ಸಂಜಾತೆ ಸ್ವೀಝಲ್ ಪುಟಾರ್ಡೋ ಪಾದಾರ್ಪಣೆ ಮಾಡಿದ್ದಾರೆ. ಸೋಮವಾರ ನಡೆದ ಉದ್ಘಾಟನಾ ಸಮಾರಂಭದಲ್ಲಿ ಭಾರತವನ್ನು ಪ್ರತಿನಿಧಿಸಿ ಮಾತನಾಡಿದ ಸ್ವೀಝಲ್, ನನ್ನ ತಾಯಿ ನನಗೆ ಕಲಿಸಿದ್ದು, ಸಮಾಜದಿಂದ ಪಡೆದಿದ್ದ ನ್ನ ಸಮಾಜಕ್ಕೆ ವಾಪಾಸು ನೀಡಬೇಕು. ನಾನು ವೈಯುಕ್ತಿಕವಾಗಿ ಮಕ್ಕಳ ಜೊತೆ ಹೆಚ್ಚು ಕಾಲ ಕಳೆಯಬಯಸುತ್ತೇನೆ. ನಾನು ಹೆಣ್ಣುಮಕ್ಕಳು, ವಿಶೇಷ ಕಾಳಜಿಯ ಅವಶ್ಯಕತೆ ಇರುವ ಮಕ್ಕಳ ಬಗ್ಗೆ ಕೆಲಸ ಮಾಡಲು ಇಚ್ಚಿಸುತ್ತೇನೆ ಏಕೆಂದರೆ ಅವರು ನಮ್ಮ ದೇಶದ […]

Read More
Breaking news

ಇಂದು ಕರಾವಳಿಯ‌ ಕೃಷಿ ಉತ್ತರದವರನ್ನು ನಂಬಿ‌ ನಡೆಯುತ್ತಿದೆ: ಕೋಟ ಖೇದ

ಬ್ರಹ್ಮಾವರ: ಹಿಂದೆ ನಾವೇ ಉತ್ತು ಬಿತ್ತು, ಕೃಷಿ ಮಾಡುತ್ತಿದ್ದೇವು. ಇಂದು ತಂತ್ರಜ್ಞಾನ‌ ಮತ್ತು ಬಿಹಾರಿ ಕಾರ್ಮಿಕರ ನಂಬಿ ಕೃಷಿ ಮಾಡುತ್ತಿದ್ದೇವೆ ಎಂದು ಕೋಟ ಶ್ರೀನಿವಾಸ ಪೂಜಾರಿ ಖೇದ ವ್ಯಕ್ತಪಡಿಸಿದರು. ಅವರು ಬ್ರಹ್ಮಾವರ ಕೃಷಿ ವಿಜ್ಞಾನ ಕೇಂದ್ರದದಲ್ಲಿ ನಡೆದ ಕಿಸಾನ್ ಸಮ್ಮಾನ‌ 19ನೇ ಕಂತು ಬಿಡುಗಡೆ ಸಮಾರಂಭದಲ್ಲಿ ಮಾತನಾಡಿ, ನಮ್ಮವರು ಕೃಷಿಯಲ್ಲಿ ತೊಡಗಿಸಿಕೊಂಡಾಗ‌ ಮಾತ್ರ ಕರಾವಳಿಯಲ್ಲಿ ಕೃಷಿ ಉಳಿಯಲು ಸಾಧ್ಯ ಎಂದರು. ಕೃಷಿ ನಷ್ಟವಾದಾಗ, ಸಾಲಮನ್ನಾ ಮಾಡಿದರೆ ರೈತರಿಗೆ ಅನುಕೂಲವಾಗುವುದಿಲ್ಲ. ಬದಲಾಗಿ ರೈತರಿಗೆ ಬೆಂಬಲ ನೀಡಿದರೆ ಮಾತ್ರ ರೈತ […]

Read More
Breaking News

ಇನ್ನೂ 96 ಅಮೇರಿಕಾ ವಲಸಿಗರು ಭಾರತಕ್ಕೆ ವಾಪಾಸು

ನವದೆಹಲಿ: ಅಮೇರಿಕಾದಿಂದ 96 ಮಂದಿ ವಲಸಿಗರನ್ನು ಗಡಿಪಾರು ಮಾಡಲಾಗುವುದು ಎಂಬ ವಿಚಾರವನ್ನು ಭಾರತ ಸರ್ಕಾರ ದೃಡಪಡಿಸಿದೆ. ಡೋನಾಲ್ಡ್‌ ಟ್ರಂಪ್‌ ಅಧಿಕಾರ ಸ್ವೀಕರಿಸಿದ ಬಳಿಕ ಪೌರತ್ವ ಪರಿಶೀಲನೆ ಪ್ರಕ್ರಿಯೆಗಳು ಬಿಗಿಗೊಂಡಿದ್ದು, ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಅನಧೀಕೃತ ವಲಸಿಗರನ್ನು ಪತ್ತೆಹಚ್ಚಿ ಅವರನ್ನು ಗಡಿಪಾರು ಮಾಡುವ ಕೆಲಸ ನಡೆಯಲಿದೆ ಎಂದು ತಿಳಿದುಬಂದಿದೆ. ಇತ್ತಿಚಿಗೆ ಗಡಿಪಾರಾಗಿ ಬಂದವರಿಗೆ ಅಪರಾಧಿಗಳಂತೆ ಕೈಕೋಳ ಹಾಕಿ ಕರೆದುಕೊಂಡು ಬಂದಿರುವ ಬಗ್ಗೆ ಮತ್ತು ಅಮೇರಿಕಾದ ಅಧಿಕಾರಿಗಳು ನಡೆದುಕೊಂಡ ರೀತಿಯ ಬಗ್ಗೆ ಭಾರತ ಸರಕಾರವು ಪ್ರತಿಭಟಿಸಿದ್ದು, ಫೆ.12-13ರವರೆಗೆ ವಾಷಿಂಗ್‌ಟನ್‌ ಭೇಟಿಯಾಗಲಿದ್ದು, […]

Read More
Breaking News

ರಾ.ಹೆ ಕಾಮಗಾರಿ ವಿಳಂಬ ಪ್ರತಿಭಟನೆ ಕಾಂಗ್ರೆಸ್ ನಾಟಕ: ಪ್ರಥ್ವಿರಾಜ್

ಉಡುಪಿ: ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ವಿಳಂಬ ಕುರಿತು ಕಾಂಗ್ರೆಸ್ ನಡೆಸುತ್ತಿರುವ ಪ್ರತಿಭಟನೆ ಕೇವಲ ನಾಟಕ ಎಂದು ಬಿಜೆಪಿ ಯುವಮೋರ್ಚಾ ಅಧ್ಯಕ್ಷ ಬಿ. ಪ್ರಥ್ವಿರಾಜ್ ಶೆಟ್ಟಿ ಲೇವಡಿ ಮಾಡಿದರು. ಕಳೆದ ಏಳು ವರ್ಷಗಳ ಹಿಂದೆ ಆರಂಭಗೊಂಡ ಇಂದ್ರಾಳಿ ರೈಲ್ವೆ ಮೇಲ್ಸೇತುವೆ ಕಾಮಗಾರಿ, ಕೋಟ ಶ್ರೀನಿವಾಸ ಪೂಜಾರಿ ಸಂಸದರಾಗಿ ಆಯ್ಕೆಯಾದ ನಂತರ ವೇಗ ಪಡೆದುಕೊಂಡಿತ್ತು. ಸಂಸದರು ಹಲವಾರು ಬಾರಿ ಇಂದ್ರಾಳಿ ಸೇತುವೆ ಸ್ಥಳಕ್ಕೆ ಭೇಟಿಕೊಟ್ಟು, ಜಿಲ್ಲಾಡಳಿತದ ಸಮಕ್ಷಮದಲ್ಲಿ ಸಭೆ ನಡೆಸಿದ ಪರಿಣಾಮ ಕಾಮಗಾರಿಯ ವೇಗ ಹೆಚ್ಚಿತ್ತು. ಮಾತ್ರವಲ್ಲದೆ, ಇಂದ್ರಾಳಿ ಸೇತುವೆಯ […]

Read More
Breaking News

ಕಾರಿನಲ್ಲಿ ಮಣ್ಣು ತಂದು ಗುಂಡಿ ಮುಚ್ಚಿದ ವೃದ್ಧ

ಮಂಗಳೂರು: ನಗರದ ನಂತೂರು ಹೆದ್ದಾರಿಯಲ್ಲಿನ ಗುಂಡಿಗೆ ವೃದ್ಧರೋರ್ವರು ಕಾರಿನಲ್ಲಿ ಮಣ್ಣು ತಂದು ಗುಂಡಿ ಮುಚ್ಚಿರುವ ವೀಡಿಯೋ ವೈರಲ್ ಆಗಿದೆ. ನಂತೂರು ಸರ್ಕಲ್‌ನಲ್ಲಿ ದೊಡ್ಡದಾದ ಹೊಂಡ ಸೃಷ್ಟಿಯಾಗಿತ್ತು. ಈ ಹೊಂಡಕ್ಕೆ ಬುಧವಾರ ರಾತ್ರಿ ಪಾಂಡುರಂಗ ಕಾಮತ್ ಎಂಬವರು ಕಾರಿನಲ್ಲಿಟ್ಟು ಗೋಣಿಯಲ್ಲಿ ಮಣ್ಣು ತಂದು ಮುಚ್ಚಿದ್ದಾರೆ. ಇದರ ವೀಡಿಯೋ ವೈರಲ್ ಆಗಿದೆ. ಅಂಗಡಿ ಹೊಂದಿರುವ ಈ ರಸ್ತೆಯಲ್ಲಿ ದಿನಕ್ಕೆ ಐದಾರು ಸಲ ದ್ವಿಚಕ್ರ ವಾಹನದಲ್ಲಿ ಓಡಾಡುತ್ತಿರುತ್ತೇನೆ. ಈ ಹೊಂಡದಿಂದ ವಾಹನದಲ್ಲಿ ಓಡಾಟ ನಡೆಸಲು ತೊಂದರೆ ಆಗುತ್ತದೆ. ಅದಕ್ಕಾಗಿ ಈ ಹೊಂಡ […]

Read More
Breaking News

ಬಂದೂಕಿನಿಂದ ಗುಂಡು ಮಿಸ್ ಫೈರ್- ಆಸ್ಪತ್ರೆಗೆ ದಾಖಲು

ಮಂಗಳೂರು: ನಗರದ ಹೊರವಲಯದ ವಾಮಂಜೂರು ಸೆಕೆಂಡ್ ಹ್ಯಾಂಡ್ ಬಜಾರ್‌ನಲ್ಲಿ ರಿವಾಲ್ವರ್ ಮಿಸ್ ಫೈರ್ ಆಗಿ ಯುವಕನೋರ್ವನು ಗಾಯಗೊಂಡ ಘಟನೆ ಸೋಮವಾರ ನಡೆದಿದೆ. ಸಫ್ವಾನ್ ಎಂಬಾತ ಗಾಯಾಳು ಯುವಕ ಸೆಕೆಂಡ್ ಹ್ಯಾಂಡ್ ಬಜಾರ್‌ಗೆ ವಸ್ತುಗಳ ಖರೀದಿಗೆ ಸಫ್ವಾನ್ ಆಗಮಿಸಿದ್ದ. ಈ ವೇಳೆ ಟೇಬಲ್‌ನಲ್ಲಿ ರಿವಾಲ್ವರ್ ಗಮನಿಸಿದ್ದಾನೆ. ಈ ರಿವಾಲ್ವರ್ ಅನ್ನು ಆಟದ ವಸ್ತುವೆಂದು ಭಾವಿಸಿ ಸಫ್ವಾನ್ ತನ್ನ ಹೊಟ್ಟೆಗೆ ಗುರಿಯಾಗಿಟ್ಟುಕೊಂಡು ಫೈಯರ್ ಮಾಡಿಕೊಂಡಿದ್ದಾನೆ. ಪರಿಣಾಮ ಗುಂಡು ಸಿಡಿದು ಸಫ್ವಾನ್ ಗಾಯಗೊಂಡಿದ್ದಾನೆ ಎನ್ನಲಾಗಿದೆ. ಸದ್ಯ ಗಾಯಾಳು ಯುವಕನನ್ನು ಪಡೀಲ್‌ನ ಖಾಸಗಿ […]

Read More
error: Content is protected !!