ಕೋಟ: ಕರಾವಳಿಯ ಪ್ರಸಿದ್ದ ಬಿಲ್ಲಾಡಿ ಉದ್ಭವ ಮಹಾಗಣಪತಿ ಕೇಚರಾಹುತ ಕಂಬಳ ಮಹೋತ್ಸವವು ನ.22ರಂದು ಜರಗಲಿದೆ.
ಸುಮಾರು 500 ವರ್ಷಗಳ ಇತಿಹಾಸ ಇರುವ ಉದ್ಭವ ಮಹಾಗಣಪತಿ ಕೇಚರಾಹುತ ಕಂಬಳವು ಶುಕ್ರವಾರ ಬೆಳಗ್ಗೆ 9.30ಕ್ಕೆ ಘೋರಿ ಕಟ್ಟುವ ಮೂಲಕ ಉದ್ಘಾಟನೆಗೊಳ್ಳಲಿದ್ದು, ಮಧ್ಯಾಹ್ನ 4.30ಕ್ಕೆ ಸ್ಪರ್ಧೆಗಳು ಆರಂಭಗೊಳ್ಳಲಿದೆ.

ಹಲಗೆ ಓಟ
ಪ್ರಥಮ ರೂ.12000 + ಶಾಶ್ವತ ಫಲಕ
ದ್ವಿತೀಯ ರೂ.10000 + ಶಾಶ್ವತ ಫಲಕ
ಹಗ್ಗ ಹಿರಿಯ
ಪ್ರಥಮ :ರೂ.10000 + ಶಾಶ್ವತ ಫಲಕ
ದ್ವಿತೀಯ ರೂ.8000 ಶಾಶ್ವತ ಫಲಕ
ಹಗ್ಗ ಕಿರಿಯ
ಪ್ರಥಮ ರೂ.8000 ಶಾಶ್ವತ ಫಲಕ,
ದ್ವಿತೀಯ ರೂ. 6000 + ಶಾಶ್ವತ ಫಲಕ
ಸಬ್ ಜೂನಿಯರ್
ಪ್ರಥಮ :ರೂ.8000 + ಶಾಶ್ವತ ಫಲಕ
ದ್ವಿತೀಯ 6000 + ಶಾಶ್ವತ ಫಲಕ
ಕಂಬಳದ ಫಲಿತಾಂಶ ನಿರ್ಧರಿಸಲು ಸೆನ್ಸಾರ್ ವ್ಯವಸ್ಥೆಯನ್ನೂ ಕೂಡ ಅಳವಡಿಸಲಾಗಿದ್ದು ನಿಖರ ಫಲಿತಾಂಶ ಹೊರಬೀಳಲಿದೆ.
ಅಂತಿಮವಾಗಿ ಪಟ್ಟದ ಕೋಣಗಳನ್ನು ಸೂಡಿ ಬೆಳಕಿನಲ್ಲಿ ಓಡಿಸುವ ಮೂಲಕ ಕಂಬಳಕ್ಕೆ ತೆರೆ ಬೀಳಲಿದೆ.

ಪ್ರತಿಷ್ಠಿತ ಬಿಲ್ಲಾಡಿ ಕಂಬಳ ಪ್ರತಿ ವರ್ಷ ಹೊಸತನದಲ್ಲಿ ಮೂಡಿ ಬರುತ್ತಿದ್ದು, ಕಂಬಳ ಸಂಘಟಕ ಪ್ರಥ್ವಿರಾಜ್ ಶೆಟ್ಟಿ ಬಿಲ್ಲಾಡಿ ಮತ್ತು ಅವರ ಕುಟುಂಬಿಕರ ಸಹಕಾರದಲ್ಲಿ ವಿಶಿಷ್ಠವಾಗಿ ಸಂಘಟಿಸಲಾಗುತ್ತಿದೆ. ಈ ಬಾರಿಯ ಹೊಸತನ ನೋಡಲು ಬಿಲ್ಲಾಡಿ ಕಂಬಳಕ್ಕೆ ಬನ್ನಿ ಎಂದು ಸಂಘಟಕ ಪ್ರಥ್ವಿರಾಜ್ ಶೆಟ್ಟಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.