• August 22, 2025
  • Last Update August 21, 2025 9:01 pm
  • Australia

ಕಡಬ: ಸ್ಕೂಟರ್‌ನಲ್ಲಿ ಸಂಚರಿಸುತ್ತಿದ್ದಾಗಲೇ ಮರಬಿದ್ದು ಪಿಗ್ಮಿ ಕಲೆಕ್ಟರ್ ಮೃತ್ಯು

ಕಡಬ: ಸ್ಕೂಟರ್‌ನಲ್ಲಿ ಸಂಚರಿಸುತ್ತಿದ್ದಾಗಲೇ ಮರಬಿದ್ದು ಪಿಗ್ಮಿ ಕಲೆಕ್ಟರ್ ಮೃತ್ಯು

ಕಡಬ: ಸ್ಕೂಟರ್‌ನಲ್ಲಿ ಸಂಚರಿಸುತ್ತಿದ್ದಾಗಲೇ ಮರವೊಂದು ಏಕಾಏಕಿ ಬಿದ್ದ ಪರಿಣಾಮ ಪಿಗ್ಮಿ ಕಲೆಕ್ಟರ್ ಗಂಭೀರವಾಗಿ ಗಾಯಗೊಂಡು ಸ್ಥಳದಲ್ಲಿಯೇ ಮೃತಪಟ್ಟ ಘಟನೆ ಕೋಡಿಂಬಾಳ ಸಮೀಪದ ಪುಳಿಕುಕ್ಕುವಿನಲ್ಲಿ ನಡೆದಿದೆ.

ಸೊಸೈಟಿಯ ಪಿಗ್ಮಿ ಕಲೆಕ್ಟರ್ ಸೀತಾರಾಮ ಮೃತಪಟ್ಟ ದುರ್ದೈವಿ.

ಸೀತಾರಾಮ ಅವರು ಕಡಬದಿಂದ ಮನೆಗೆ ಬರುತ್ತಿರುವಾಗ ವೇಳೆ ಈ ದುರ್ಘಟನೆ ಸಂಭವಿಸಿದೆ. ಘಟನೆಯಲ್ಲಿ ಸ್ಕೂಟರ್ ಸಹಿತ ಸೀತಾರಾಮರ ಮೇಲೆಯೇ ಮರ ಬುಡ ಸಹಿತ ಉರುಳಿ ಬಿದ್ದ ಪರಿಣಾಮ ಗಂಭೀರವಾಗಿ ಗಾಯಗೊಂಡ ಅವರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ತಕ್ಷಣ ಸ್ಥಳಕ್ಕೆ ಪೊಲೀಸರು ದೌಡಾಯಿಸಿದ್ದು, ಮರವನ್ನು ಸರಿಸಿ ಮೃತದೇಹವನ್ನು ಸಹರಿಸಲಾಗಿದೆ. ಈ ವೇಳೆ ಸ್ಥಳದಲ್ಲಿ ಜನ ಜಮಾಯಿಸಿದ್ದರು. ಅರಣ್ಯ ಇಲಾಖೆಯ ಅಸಡ್ಡೆ ವಿರುದ್ಧ ಸಾರ್ವಜನಿಕ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಪಾಯಕಾರಿ ಮರವನ್ನು ತೆರವುಗೊಳಿಸಿದ ಅರಣ್ಯ ಅಧಿಕಾರಿಗಳನ್ನು ಸ್ಥಳದಲ್ಲಿದ್ದವರು ತರಾಟೆಗೆ ತೆಗೆದುಕೊಂಡಿದ್ದಾರೆ.

 

administrator

Related Articles

Leave a Reply

Your email address will not be published. Required fields are marked *

error: Content is protected !!