ಉಡುಪಿ: ತೆಂಗಿನ ಕಾಯಿ ಕೀಳಲೆಂದು ಬಂದ ವ್ಯಕ್ತಿಯೋರ್ವ ಮರದಿಂದ ಬಿದ್ದ ಪರಿಣಾಮ ನೇರವಾಗಿ ಗೇಟಿನ ಸರಳಿಗೆ ಸಿಲುಕಿದ ಘಟನೆ ಉಡುಪಿಯ ಲಕ್ಷ್ಮೀಂದ್ರನಗರದಲ್ಲಿ ಸಂಭವಿಸಿದೆ.
ಮಂಜೇಗೌ(36) ತೆಂಗಿನಕಾಯಿ ಕೀಳಲೆಂದು ಮರವೇರಿದ್ದ, ಈ ಸಂದರ್ಭ ಆಯತಪ್ಪಿ ಬಿದ್ದ ಪರಿಣಾಮ ಅವರ ಎಡಗಾಲು ಗೇಟಿನ ಸರಳಿನೊಳಗೆ ಸಿಲುಕಿಕೊಂಡಿದೆ. ಈ ಸಂದರ್ಭ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕದಳ ಸಿಬ್ಬಂದಿಗಳು ಕಾಲಿಗೆ ತಿವಿದ ಸರಳನ್ನು ಕತ್ತರಿಸಿ, ಮಂಜೇಗೌಡರನ್ನು ರಕ್ಷಿಸಿ, ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಅಗ್ನಿಶಾಮಕ ದಳದ ಠಾಣಾಧಿಕಾರಿ ರವೀಂದ್ರ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಲಾಯಿತು.