ಉಡುಪಿ: ಪಾರ್ಟಿ ನಡೆಯುತ್ತಿದ್ದ ವೇಳೆ ಗ್ಯಾ ಸ್ ಸಿಲಿಂಡರ್ ಸ್ಪೋಟಗೊಂಡ ಘಟನೆ ಉಡುಪಿಯ ಕಲ್ಸಂಕ ಸಮೀಪದ ಬಡಗುಪೇಟೆಯ ಆದಿತ್ಯ ಟವರ್‌ನಲ್ಲಿ ಸಂಭವಿಸಿದೆ.
ಈ ಫ್ಲಾಟ್‌ನ ಎರಡನೇ ಮಹಡಿಯ ಮನೆಯಲ್ಲಿ ಪ.ಬಂಗಾಳ ಮೂಲದ ಕಾರ್ಮಿಕರು ಪಾರ್ಟಿ ನಡೆಸುತ್ತಿದ್ದರು. ಈ ಸಂದರ್ಭ ಇದ್ದಕ್ಕಿದಂತೆ ಗ್ಯಾಸ್ ಸಿಲಿಂಡರ್ ಸ್ಪೋಟಗೊಂಡಿದೆ. ತಕ್ಷಣ ಹೊರಕ್ಕೆ ಓಡಿಬಂದ ಕಾರ್ಮಿಕರು ಪ್ರಾಣವನ್ನು ಉಳಿಸಿಕೊಂಡಿದ್ದಾರೆ. ಈ ವೇಳೆ ಎಂಟು ಮಂದಿ ಕೋಣೆಯಲ್ಲಿದ್ದರು ಎನ್ನಲಾಗಿದೆ. ಘಟನೆಯ ತೀವ್ರತೆಗೆ ಕೋಣೆಗಳು ಛಿದ್ರ ಛಿದ್ರವಾಗಿದ್ದು, ಈ ಮನೆಯ ಜೊತೆಗೆ ಇನ್ನೆರೆಡು ಮನೆಗಳಿಗೂ ಹಾನಿಯಾಗಿದೆ.
ಅಗ್ನಿಶಾಮಕದಳದ ಸಿಬ್ಬಂದಿಗಳು ಸ್ಥಳಕ್ಕೆ ದೌಡಾಯಿಸಿ ಬೆಂಕಿ ನಂದಿಸಿದ್ದಾರೆ.