ನ್ಯೂಸ್ ಬ್ಯೂರೋ: ಹರಾರೆನಲ್ಲಿ ನಡೆದ ಅಂಡರ್–19 ವಿಶ್ವಕಪ್‌ನಲ್ಲಿ ಪಾಕಿಸ್ತಾನ ಜಿಂಬಾಬ್ವೇ ವಿರುದ್ಧ ರನ್‌ಚೇಸ್ ವೇಳೆ ಉದ್ದೇಶಪೂರ್ವಕವಾಗಿ ನಿಧಾನಗತಿಯಲ್ಲಿ ಆಡಿದಂತೆ ಕಾಣಿಸಿಕೊಂಡು ವಿವಾದಕ್ಕೆ ಕಾರಣವಾಗಿದೆ.
ಜಿಂಬ್ವಾಬೆಯನ್ನು 128 ರನ್‌ಗಳಿಗೆ ಆಲೌಟ್ ಮಾಡಿದ ಪಾಕಿಸ್ತಾನ, 26 ಓವರ್‌ಗಳಲ್ಲಿ 120/2 ರನ್ ಮಾಡಿ ಸುಲಭ ಜಯದ ಸ್ಥಿತಿಯಲ್ಲಿ ಇತ್ತು. ಆದರೂ ಆಟದ ಮಧ್ಯದಲ್ಲಿ ಬ್ಯಾಟಿಂಗ್ ವೇಗ ಕಡಿಮೆ ಮಾಡಿ ಜಿಂಬಾಬ್ವೇ ಸೂಪರ್ ಸಿಕ್ಸ್‌ನಲ್ಲಿ ಸ್ಕಾಟ್ಲೆಂಡ್‌ಗಿಂತ ಮುಂದೆ ಬರಲು ಪ್ರಭಾವ ಬೀರಿದೆ ಎಂಬ ಆರೋಪ ಕೇಳಿಬಂದಿದೆ..
ಟೂರ್ನಮೆಂಟ್ ನಿಯಮಗಳ ಪ್ರಕಾರ, ಸೂಪರ್ ಸಿಕ್ಸ್ ಹಂತಕ್ಕೆ ಜಿಂಬಾಬ್ವೇ ಅರ್ಹರಾದರೆ, ಪಾಕಿಸ್ತಾನಕ್ಕೆ ಜಿಂಬಾಬ್ವೇ ವಿರುದ್ಧ ಪಡೆದ ದೊಡ್ಡ ಗೆಲುವಿನ ನೆಟ್ ರನ್ ರೇಟ್ ಲಾಭ ಸಿಗುತ್ತದೆ. ಇದನ್ನು ಗಮನಿಸಿ ಪಾಕಿಸ್ತಾನ ಈ ತಂತ್ರಗಾರಿಕೆಯನ್ನು ಮಾಡಿದೆ.
ಕೆಲವರು ಇದನ್ನು “ಚತುರ ತಂತ್ರ” ಎಂದು ಹೊಗಳಿದರೆ, ಇನ್ನೂ ಕೆಲವರು ಇದು ಕ್ರೀಡಾ ನೈತಿಕತೆಗೆ ವಿರುದ್ಧ ಎಂದು ಟೀಕಿಸಿದ್ದಾರೆ.
ಪಾಕಿಸ್ತಾನ ನಂತರ 27ನೇ ಓವರ್‌ನಲ್ಲಿ ಎರಡು ಸಿಕ್ಸರ್‌ಗಳಿಂದ 132/2 ರನ್ ಮಾಡಿ 8 ವಿಕೆಟ್‌ಗಳಿಂದ ಜಯ ಸಾಧಿಸಿದೆ.







