• August 22, 2025
  • Last Update August 21, 2025 9:01 pm
  • Australia

ನಾಗನ ಕಟ್ಟೆಗೆ ಹಾನಿಗೈದ ಆರೋಪ- ಅನ್ಯಕೋಮಿನ ಯುವಕ ಅರೆಸ್ಟ್

ನಾಗನ ಕಟ್ಟೆಗೆ ಹಾನಿಗೈದ ಆರೋಪ- ಅನ್ಯಕೋಮಿನ ಯುವಕ ಅರೆಸ್ಟ್

ಪುತ್ತೂರು: ಇತಿಹಾಸ ಪ್ರಸಿದ್ಧ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಸಮೀಪದ ನೆಲ್ಲಿಕಟ್ಟೆ ಎಂಬಲ್ಲಿರುವ ನಾಗನಕಟ್ಟೆಗೆ ಹಾನಿಗೈದಿರುವ ಆರೋಪದಲ್ಲಿ ಅನ್ಯಕೋಮಿನ ಯುವಕನನ್ನು ಪೊಲೀಸರು ಬಂಧಿಸಿದ್ದಾರೆ.

ಮಹಮ್ಮದ್ ಸಲಾಂ ಎಂಬಾತ ಕೃತ್ಯ ಎಸಗಿದ್ದು, ಈತ ಗಾಂಜಾ ವ್ಯಸನಿ ಎಂದು ಆರೋಪಿಸಲಾಗಿದೆ. ಬುಧವಾರ ತಡರಾತ್ರಿ ಈತ ನಾಗನಕಟ್ಟೆಗೆ ನುಗ್ಗಿ ಗೇಟ್ ಹಾಗೂ ಇತರ ಸಾಮಾಗ್ರಿಗಳಿಗೆ ಹಾನಿ ಮಾಡಿದ್ದಾನೆ.

ವಿಚಾರ ತಿಳಿದು ಸ್ಥಳೀಯರೇ ಆತನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಈ ಹಿಂದೆಯೂ ಈತ ಇಂಥಹ ಹಲವು ಪ್ರಕರಣಗಳಲ್ಲಿ ಆರೋಪಿಯಾಗಿದ್ದ ಎಂದು ಹೇಳಲಾಗಿದೆ. ಸದ್ಯ ಪುತ್ತೂರು ಪೊಲೀಸರು ಈತನನ್ನು ಬಂಧಿಸಿ ಪ್ರಕರಣ ದಾಖಲಿಸಿ, ತನಿಖೆ ನಡೆಸುತ್ತಿದ್ದಾರೆ.

administrator

Related Articles

Leave a Reply

Your email address will not be published. Required fields are marked *

error: Content is protected !!