ಮಂಗಳೂರು: ಪೆಂಗಲ್ ಚಂಡಮಾರುತದ ಪರಿಣಾಮ ಭಾರೀ ಮಳೆ ಸುರಿದಿದ್ದು, ನಗರದ ಕೂಳೂರು ಬಳಿ ರಸ್ತೆ ಬದಿ ಕುಸಿತಗೊಂಡಿದೆ.

ಮಂಗಳೂರು – ಉಡುಪಿ ಸಂಪರ್ಕದ ರಾಷ್ಟ್ರೀಯ ಹೆದ್ದಾರಿ 66ರ ಕೂಳೂರು ಬಳಿ ಗೇಲ್ ಗ್ಯಾಸ್ ಕಂಪೆನಿಯು ಪೈಪ್ ಅಳವಡಿಕೆಗೆ ರಸ್ತೆ ಅಗೆತ ಮಾಡಿತ್ತು. ನಿನ್ನೆಯಿಂದ ಇಂದು ಬೆಳಗ್ಗೆವರೆಗೆ ಧಾರಾಕಾರವಾಗಿ ಸುರಿದ ಮಳೆಯಿಂದ ಹೆದ್ದಾರಿ ಬದಿ ಅಗೆದು ಇಡಲಾಗಿರುವ ಹೊಂಡದಲ್ಲಿ ನೀರು ತುಂಬಿತ್ತು. ಪರಿಣಾಮ ರಸ್ತೆ ಬದಿ ಭಾರೀ ಕುಸಿತ ಕಂಡು
ಟ್ರಾಫಿಕ್ ಜಾಮ್ ಆಗಿ ಉಡುಪಿಯಿಂದ ಮಂಗಳೂರಿಗೆ ಬರುವ ವಾಹನಗಳು ಪ್ರಯಾಣಿಕರು ಪರದಾಡಿದ ಪ್ರಸಂಗ ನಡೆಯಿತು.