ಕಾಲಿವುಡ್ನ ಖ್ಯಾತ ನಟರಾದ ಸೂರ್ಯ ಮತ್ತು ಜ್ಯೋತಿಕಾ ದಂಪತಿಗಳು ಸೋಮವಾರ ಕೊಲ್ಲೂರಿಗೆ ಭೇಟಿ ನೀಡಿದ್ದಾರೆ.

ದಂಪತಿಗಳು ದೇವರ ದರ್ಶನ ಪಡೆದು, ಚಂಡಿಕಾಯಾಗದಲ್ಲಿಯೂ ಭಾಗಿಯಾಗಿದ್ದಾರೆ.
ಸೆಲಬ್ರೆಟಿ ದಂಪತಿಗಳಾಗಿರುವ ಸೂರ್ಯ ಮತ್ತು ಜ್ಯೋತಿಕಾ ಬಂದಿರುವುದು ತಿಳಿಯುತ್ತಿದ್ದಂತೆ ಅಭಿಮಾನಿಗಳು ಅವರೊಂದಿಗೆ ಸೆಲ್ಫಿಗೆ ಮುಗಿಬಿದ್ದಿದ್ದಾರೆ. ಈಗ ಅವರು ಕೊಲ್ಲೂರು ದೇವಸ್ಥಾನಕ್ಕೆ ಭೇಟಿ ನೀಡಿರುವ ಫೋಟೋಗಳು ವೈರಲ್ ಆಗಿದೆ.