ಅಂಡಮಾನ್ ನಿಕೋಬಾರ್: ಭಾರತೀಯ ಕೋಸ್ಟ್ ಗಾರ್ಡ್ ನಡೆಸಿದ ಭರ್ಜರಿ ಕಾರ್ಯಾಚರಣೆಯಲ್ಲಿ 2500ಕೋಟಿ ರೂ. ಮೌಲ್ಯದ ಡ್ರಗ್ಸ್ ವಶಕ್ಕೆ ಪಡೆದಿದ್ದಾರೆ.
ಅಂಡಮಾನ್ ಜಲಪ್ರದೇಶದಲ್ಲಿ ಈ ಕಾರ್ಯಾಚರಣೆ ನಡೆಸಲಾಗಿದ್ದು, ಮೀನುಗಾರಿಕಾ ದೋಣಿಯಲ್ಲಿ 5500ಕೆಜಿ (5 ಕ್ವಿಂಟಾಲ್) ತೂಕದ ಡ್ರಗ್ಸ್ ವಶಕ್ಕೆ ಪಡೆದಿದ್ದಾರೆ.
ಕಾರ್ಯಾಚರಣೆ ನಡೆದಿದ್ದು ಹೇಗೆ?
ಕೋಸ್ಟ್ ಗಾರ್ಡ್‌ನ ಗಸ್ತು ವಿಮಾನ ಡೋರ್ನಿಯರ್ ಅನುಮಾನಾಸ್ಪದವಾಗಿ ಸಾಗುತ್ತಿದ್ದ ದೋಣಿಯನ್ನು ಗುರುತಿಸಿ ಕಮಾಂಡೆಟ್‌ಗೆ ತಿಳಿಸಿತು. ಈ ಪ್ರಕಾರ ಗಸ್ತು ವಾಹನಗಳು ತಕ್ಷಣ ಧಾವಿಸಿ ಸಮೀಪದ ದ್ವೀಪಕ್ಕೆ ಕರೆದೊಯ್ದಿದ್ದು, ಅಲ್ಲಿ ಆರು ಮಂದಿ ಮಯನ್ಮಾರ್ ಪ್ರಜೆಗಳನ್ನು ಬಂಧಿಸಲಾಗಿದೆ. ವಶಪಡಿಸಲಾಗಿರುವ ಡ್ರಗ್ಸ್ ಮೆಥಾಂಫೆಟಮೈನ್ ಎಂದು ಗುರುತಿಸಲಾಗಿದ್ದು, ಡ್ರಗ್ಸ್ ಮಾದರಿಯನ್ನು ಹೆಚ್ಚಿನ ತನಿಖೆಗೆ ಕಳುಹಿಸಲಾಗಿದೆ.
ಆರೋಪಿಗಳನ್ನು ಜಂಟಿ ವಿಚಾರಣೆಗಾಗಿ ಅಂಡಮಾನ್ ಪೊಲೀಸರ ವಶಕ್ಕೆ ನೀಡಲಾಗಿದೆ.
ಈ ಕಾರ್ಯಾಚರಣೆಯು ಗುಪ್ತಚರ ಸಂಸ್ಥೆಗಳ ಸುಳಿವು ಆದರಿಸಿ ಮಾಡಲಾಗಿದ್ದು, ಕರಾವಳಿ ಕಾವಲು ಪಡೆ, ಎನ್‌ಸಿಬಿ, ನೌಕಾಪಡೆ ಮತ್ತು ಗುಜರಾತ್ ಭಯೋತ್ಪಾದನಾ ನಿಗ್ರಹದಳ ಕಾರ್ಯಾಚರಣೆಯ ಭಾಗವಾಗಿದೆ.