ಖಾಕಿ ಖಾಕಿಯೇ ಆಗಿರಲಿ ಕಾಂಗ್ರೆಸ್ ಆಗೋದು ಬೇಡ ಎಂದು ಕಾರ್ಕಳ ಶಾಸಕ ಸುನೀಲ್ ಕುಮಾರ್ ಆಕ್ರೋಶ ವ್ಯಕ್ತಪಡಿಸಿದರು.
ಅವರು ಹಿಂದೂ ಜಾಗರಣ ವೇದಿಕೆವತಿಯಿಂದ ಆಯೋಜಿಸಲಾದ ಜನಾಗ್ರಹ ಸಮಾವೇಶದಲ್ಲಿ ಮಾತನಾಡಿ, ಕಾಂಗ್ರೆಸ್ ಸರಕಾರ ನಮ್ಮನ್ನ ಹಿಂದೂ ಕಾರ್ಯಕರ್ತರನ್ನ ಪೊಲೀಸ್ ಇಲಾಖೆಯನ್ನು ಬಳಸಿ ನಿಯಂತ್ರಿಸಲು ಪ್ರಯತ್ನಿಸುತ್ತಿದೆ. ಇದು ನಿಜಕ್ಕೂ ನಾಚಿಕೆಗೇಡು
ನಮ್ಮನ್ನು, ನಮ್ಮ ವಿಚಾರಧಾರೆಗಳನ್ನು ಎದುರಿಸಲು ಆಗದೇ ಇರುವ ಕಾಂಗ್ರೆಸ್, ಹಿಂದೂ ಕಾರ್ಯಕರ್ತರ ಮೇಲೆ ಪ್ರಕರಣ ದಾಖಲಿಸಿ ಹಿಂದೂತ್ವದ ವಿಚಾರವನ್ನು ತಡೆಯಬಹುದೆನ್ನುವ ಭ್ರಮೆಯಲ್ಲಿ ಕಾಂಗ್ರೇಸ್ ಪಕ್ಷ ಇದೆ. ಅದಕ್ಕಾಗಿ ನೂರಾರು ಕಾರ್ಯಕರ್ತರ ಮೇಲೆ ದಾಖಲಿಸಿದೆ. ನಾನು ಪೊಲೀಸ್ ಇಲಾಖೆ ಮತ್ತು ರಾಜ್ಯ ಸರಕಾರವನ್ನು ಕೇಳುತ್ತೇನೆ. ಎಲ್ಲಿ ಯಾವ ಹಿಂದೂ ಕಾರ್ಯಕರ್ತರಿಂದ ಸಮಾಜದಲ್ಲಿ ಅಶಾಂತಿ ಸೃಷ್ಟಿಯಾಗಿದೆ. ಯಾರೂ ದೂರು ನೀಡದೇ ಇದ್ದರು ಪೊಲೀಸ್ ಇಲಾಖೆಯೇ ಸುಮೋಟೊ ದಾಖಲಿಸಿ ಹಿಂದೂ ಕಾರ್ಯಕರ್ತರನ್ನು ಮಟ್ಟ ಹಾಕುವ ಪ್ರಯತ್ನ ಮಾಡುತ್ತಿದೆ ಎಂದರು.
ಈ ಸಂದರ್ಭ ಜಿಲ್ಲೆಯ ಐವರೂ ಶಾಸಕರು ಸಹಸ್ರಾರು ಹಿಂದೂ ಕಾರ್ಯಕರ್ತರು ಇದ್ದರು.
ಎಸ್ಪಿ ಕಚೇರಿಗೆ ಬಿಗಿ ಭದ್ರತೆ
ಜನಾಗ್ರಹ ಸಭೆಯಲ್ಲಿ ಎಸ್.ಪಿ ಕಚೇರಿಗೆ ಮುತ್ತಿಗೆ ಹಾಕುತ್ತಾರೆ ಎನ್ನುವ ಹಿನ್ನೆಲೆ ಬಿಗಿ ಪೊಲೀಸ್ ಬಂದೋಬಸ್ತ ಎರ್ಪಡಿಸಲಾಗಿತ್ತು. ಎಸ್ಪಿ ಕಚೇರಿಗೆ ಬ್ಯಾರಿಕೇಡ್ ಅಳವಡಿಸಿ, ಪೊಲೀಸ್ ಭದ್ರತೆ ಎರ್ಪಡಿಸಲಾಗಿತ್ತು.