ಉಡುಪಿ: ಹಿಂದೂ ಫೈರ್ ಬ್ರಾಂಡ್ ಎಂದೇ ಖ್ಯಾತರಾಗಿರುವ ಪ್ರಖರ ವಾಗ್ಮಿ ಶ್ರೀಕಾಂತ್ ಶೆಟ್ಟಿ ಕಾರ್ಕಳ ವಿರುದ್ಧ ಕಾರ್ಕಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅನ್ಯಕೋಮಿನ ವಿರುದ್ಧ ದ್ವೇಷ ಹರಡುವ, ಸಮುದಾಯಗಳ ನಡುವೆ ವೈಮನಸ್ಸು ಹಬ್ಬುವ ರೀತಿಯಲ್ಲಿ ವಿಡಿಯೋ ಮಾಡಿ ಹರಿಯಬಿಟ್ಟು ಕೋಮು ಸೌಹಾರ್ಧತೆಗೆ ದಕ್ಕೆ ತರುವ ಪ್ರಯತ್ನ ಮಾಡಿದ್ದಾರೆ ಎಂದು ಕಾರ್ಕಳ ಪಿಎಸ್‌ಐ ಸಂದೀಪ್ ಶೆಟ್ಟಿ ದೂರು ದಾಖಲಿಸಿದ ಹಿನ್ನೆಲೆ ಪ್ರಕರಣ ದಾಖಲಾಗಿದೆ.
ಘಟನೆ ಹಿನ್ನೆಲೆ ಏನು?
ಕಾರ್ಕಳ ಶ್ರೀಕಾಂತ್ ಶೆಟ್ಟಿ ಖಾಸಗಿ ಸುದ್ಧಿ ವಾಹಿನಿಯೊಂದರಲ್ಲಿ ಪತ್ರಿಕಾಗೋಷ್ಠಿ ನಡೆಸಿ, ಕಾರ್ಕಳ ಲಕ್ಷದೀಪೋತ್ಸವದಲ್ಲಿ ಅಂಗಡಿ ಇಡಲು ಹಿಂದೂಗಳಿಗೆ ಮಾತ್ರ ಅವಕಾಶ ನೀಡಿ ಎಂದು ಹೇಳಿದ್ದಕ್ಕೆ ಸುಮೋಟೋ ಪ್ರಕರಣವನ್ನು ದಾಖಲಿಸಲಾಗಿತ್ತು. ಈ ಪ್ರಕರಣವನ್ನು ಹಿಂಪಡೆಯಲು ಆಗ್ರಹಿಸಿ, ವಿಹಿಂಪ ಜೊತೆ ಎಸ್‌ಪಿ ಕಚೇರಿ ಮುತ್ತಿಗೆ ಹಾಕುವುದಾಗಿ ಹೇಳಿಕೆ ನೀಡಿದ್ದರು. ಈ ಹಿನ್ನೆಲೆ ಶ್ರೀಕಾಂತ್ ಶೆಟ್ಟಿ ವಿರುದ್ಧ ಪ್ರಕರಣ ದಾಖಲಾಗಿದೆ.