• August 22, 2025
  • Last Update August 21, 2025 9:01 pm
  • Australia

ಬಿಲ್ಲಾಡಿ ಕಂಬಳ.. ನೋಡಲು ಸುಂದರ..

ಬಿಲ್ಲಾಡಿ ಕಂಬಳ.. ನೋಡಲು ಸುಂದರ..

ಕೋಟ: ಅರ್ಧ ಶತಮಾನಗಳಷ್ಟು ಪುರಾತನ ಹಿನ್ನೆಲೆ ಹೊಂದಿರುವ ಉದ್ಭವ ಮಹಾಗಣಪತಿ ಕೇಚರಾಹುತ “ಬಿಲ್ಲಾಡಿ ಕಂಬಳ” ಶುಕ್ರವಾರ ಸಂಪನ್ನಗೊಂಡಿತು.

ಶುಕ್ರವಾರ ಬೆಳಗ್ಗೆ ಘೋರಿ ಕಟ್ಟುವ ಮೂಲಕ ಚಾಲನೆ ಪಡೆದ ಕಂಬಳದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರಗಿದವು. ಸಂಜೆ 4.30ಕ್ಕೆ ಕಂಬಳ ಗದ್ದೆಗಳಲ್ಲಿ ಕಂಬಳ ಕೋಣಗಳ ತಯಾರಿ ಆರಂಭಗೊಂಡು ಸಂಜೆ 6.00ಗಂಟೆಗೆ ಸ್ಪರ್ಧೆ ಆರಂಭಗೊಂಡಿತು.

ಬಡಗಿನಲ್ಲಿ ನಡೆದ ಹೊನಲು ಬೆಳಕಿನ ಕಂಬಳ ಇದಾಗಿದ್ದು ಸುಮಾರು 34ಕ್ಕೂ ಅಧಿಕ ಜೋಡಿ ಕೋಣಗಳು ಕಂಬಳದಲ್ಲಿ ಭಾಗವಹಿಸಿದ್ದವು, ಸೆನ್ಸಾರ್‌ ಮೂಲಕ ಸಮಯ ಪರಿಗಣನೆ ಸೇರಿದಂತೆ ಹಲವಾರು ವಿಶೇಷತೆಗಳನ್ನು ಹೊಂದಿದ್ದ ಕಂಬಳದಲ್ಲಿ ಎದ್ದು ಬಿದ್ದು ಗುರಿತಲುಪಲು ಓಡುವ ಕಂಬಳ ಕೋಣ ಮತ್ತು ಓಟಗಾರರು ಕಂಬಳ ಪ್ರಿಯರಿಗೆ ಖುಷಿಕೊಟ್ಟಿತ್ತು.

ಕೊನೆಯಲ್ಲಿ ಪಟ್ಟದ ಕೋಣಗಳನ್ನು ಸೂಡಿಯ ಜೊತೆ ಓಡಿಸುವ ಮೂಲಕ ಸ್ಪರ್ಧೆ ಅಂತ್ಯಗೊಂಡಿತು.

ಮನೋರಂಜಿಸಿದ ಅಮರ್‌ ಅಭಿ ಜುಗಲ್‌ಬಂಧಿ

ಸ್ಪರ್ಧೆಯಲ್ಲಿ ಅಮರ್‌ ಮತ್ತು ಅಭಿಜಿತ್ ಪಾಂಡೇಶ್ವರ ಅವರ ಹಾಸ್ಯ ಮಿಶ್ರಿತ ನಿರೂಪಣೆ ಎಲ್ಲರ ಗಮನ ಸೆಳೆಯಿತು. ಜೊತೆಗೆ ಪ್ರಶಾಂತ್‌ ಹಾವಂಜೆಯರ ತೂಕದ ನಿರೂಪಣೆ ಕಾರ್ಯಕ್ರಮದ ವಿಶೇಷ ಆಕರ್ಷಣೆಯಾಗಿತ್ತು.

ವಿಜೇತರ ವಿವರ

ಹಗ್ಗ ಕಿರಿಯ ವಿಭಾಗ:
ಪ್ರಥಮ : ನಾಗೂರು ಬಡಾವಣೆ ಪ್ರಿಯಾಂಕಾ ರನ್ವಿತ್ ಆರ್ ಪೂಜಾರಿ
ದ್ವಿತೀಯ :ಶ್ರೀ ಸ್ವಾಮಿಧಾಮ ಹೊಳೆ ಕಟ್ಟು ಕುಂಬಾಸಿ

ಹಗ್ಗ ಹಿರಿಯ ವಿಭಾಗ:
ಪ್ರಥಮ : ವೆಂಕಟ ಪೂಜಾರಿ ಸಸಿಹಿತ್ಲು ಬೈಂದೂರು
ದ್ವಿತೀಯ :ಬೈಂದೂರು ತಗ್ಗರ್ಸೆ ನೀಲಕಂಠ

ಸಬ್ಬ್ ಜೂನಿಯರ್ ಕಿರಿಯ ವಿಭಾಗ
ಪ್ರಥಮ :ದಿ ಶೀನ ಪೂಜಾರಿ ಕೋಟ ಮಣುರು ಕೋಟ
ದ್ವಿತೀಯ :ಚಂದ್ರ ದೇವಾಡಿಗ ಕಲ್ತೊಡಿ ಮನೆ

ಹಲಗೆ ಓಟ
ಪ್ರಥಮ : ತಕ್ಕಟ್ಟೆ ಮೇಲಗುಡ್ಡೆ ಮನೆ ಆನಂದ ದೇವಾಡಿಗ
ದ್ವಿತೀಯ :ಶ್ರೀ ರಾಮ ಚೈತ್ರ ಪರಮೇಶ್ವರ ಭಟ್ ಬೋಲಂಬಳ್ಳಿ

 

administrator

Related Articles

Leave a Reply

Your email address will not be published. Required fields are marked *

error: Content is protected !!