• August 23, 2025
  • Last Update August 21, 2025 9:01 pm
  • Australia

ಸಿಎನ್‌ಜಿ ವ್ಯತ್ಯಯ: ನ15ಕ್ಕೆ ಕೋಟ ಸಭೆ

ಉಡುಪಿ: ಜಿಲ್ಲೆಯಲ್ಲಿ ಹಲವು ದಿನಗಳಿಂದ ಸಿ.ಎನ್.ಜಿ ಇಂಧನ ಪೂರೈಕೆಯಲ್ಲಿ ವ್ಯತ್ಯಯವಾಗುತ್ತಿರುವ ಬಗ್ಗೆ ಪದೇ ಪದೇ ದೂರು ನೀಡುತ್ತಿರುವ ಹಿನ್ನೆಲೆ, ಉಡುಪಿ-ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ ಪೂಜಾರಿ ಸಂಬಂಧಪಟ್ಟ ಅಧಿಕಾರಿಗಳ ಸಭೆ ನಡೆಸಲು ಸೂಚಿಸಿದ್ದು, ಆ ಪ್ರಕಾರವಾಗಿ ನ.15ರಂದು ಬೆಳಗ್ಗೆ 10.30ಕ್ಕೆ ಜಿಲ್ಲಾಧಿಕಾರಿ ಡಾ. ಕೆ.ವಿದ್ಯಾಕುಮಾರಿ ಜಿಲ್ಲಾಧಿಕಾರಿ ಕಚೇರಿಯಲ್ಲಿ, ಪೋಲಿಸ್ ಅಧೀಕ್ಷಕರು ಉಡುಪಿ ಜಿಲ್ಲೆ ಸೇರಿದಂತೆ ಪೂರೈಕೆದಾರ ಕಂಪೆನಿಯಾದ ಅದಾನಿ ಕಂಪೆನಿಯ ನಿರ್ದೇಶಕರು ಮತ್ತು ಪೆಟ್ರೋಲ್ ಬಂಕಿನ ಮಾಲಿಕರ ಸಭೆಯನ್ನು ಕರೆದಿದ್ದಾರೆ. ಈ ಸಭೆಯಲ್ಲಿ ಸಿ.ಎನ್.ಜಿ ಇಂಧನ ಪೂರೈಕೆಯ ಬಗ್ಗೆ ಸುದೀರ್ಘವಾಗಿ ಚರ್ಚೆ ನಡೆಸಲಾಗುವುದು ಎಂದು ಸಂಸದರ ಕಚೇರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

administrator

Related Articles

Leave a Reply

Your email address will not be published. Required fields are marked *

error: Content is protected !!