ನಿಟ್ಟೆ: ತಾಯಿಂದ ಬೇರ್ಪಟ್ಟ ಚಿರತೆ ಮರಿಯೊಂದು ಇಲ್ಲಿನ ದೇವಸ್ಥಾನದ ಬಳಿ ಅಡಗಿ ಕುಳಿತಿದ್ದು, ಅರಣ್ಯ ಇಲಾಖೆಯಿಂದ ರಕ್ಷಿಸಲಾಗಿದೆ.
ನಿಟ್ಟೆ ಸಮೀಪದ ಕಲ್ಯ ಗ್ರಾಮದ ಗುಳಿಗ ದೈವದ ಗುಡಿಯಲ್ಲಿ ಚಿರತೆಮರಿ ಅವಿತು ಕುಳಿತಿತ್ತು. ತಾಯಿಂದ ಬೇರ್ಪಟ್ಟು ಅಸಹಾಯಕವಾಗಿದ್ದ ಚಿರತೆಮರಿಯನ್ನು ಸ್ಥಳಿಯರು ಮೊದಲು ಕಂಡು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ.
ಸ್ಥಳಕ್ಕೆ ಬಂದ ಅರಣ್ಯ ಇಲಾಖೆ ಅಧಿಕಾರಿಗಳು ಚಿರತೆಮರಿಯನ್ನು ಸುರಕ್ಷಿತ ಸ್ಥಳಕ್ಕೆ ರವಾನಿಸಿದ್ದಾರೆ.