ಬೀಜಾಡಿ: ಮಿನಿ ಕೈರಂಪಣಿ ದೋಣಿಯಲ್ಲಿ ಮೀನುಗಾರಿಕೆ ನಡೆಸುತ್ತಿದ್ದ ವ್ಯಕ್ತಿಯೊಬ್ಬರು ದೋಣಿ ಮುಗುಚಿ ಸಾವನ್ನಪ್ಪಿದ ಘಟನೆ ಬೀಜಾಡಿಯ ಚಾತ್ರಬೆಟ್ಟುವಿನಲ್ಲಿ ಬುಧವಾರ ಬೆಳಗ್ಗೆ ಸಂಭವಿಸಿದೆ.
ಬೀಜಾಡಿ ನಿವಾಸಿ ಸಂಜೀವ ಮೃತಪಟ್ಟಿದ್ದು, ಬೆಳಗ್ಗೆ ಮಿನಿ ಕೈರಂಪಣಿ ದೋಣಿಯಲ್ಲಿ ಮೀನುಗಾರಿಕೆಗೆ ತೆರಳಿದ್ದ ಸಂದರ್ಭ, ನೀರಿನ ರಭಸಕ್ಕೆ ದೋಣಿ ಮುಗುಚಿ ಬಿದ್ದಿದೆ. ಈ ಸಂದರ್ಭ ಮುಳುಗಿದ ಸಂಜೀವ ಅವರನ್ನು ಅವರ ಜೊತೆಗಿದ್ದವರು ರಕ್ಷಿಸಿ ಕೋಟೇಶ್ವರದ ಖಾಸಗಿ ಆಸ್ಪತ್ರೆಗೆ ದಾಖಲಿಸಿದರೂ ಅವರು ಅಷ್ಟರಲ್ಲೇ ಸಾವನ್ನಪ್ಪಿದ್ದರು.
ಈ ಕುರಿತು ಕುಂದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.