ಪುತ್ತೂರು: ಅನ್ಯಕೋಮಿನ ಯುವಕನೋರ್ವನ ಕಿರುಕುಳಕ್ಕೆ ಬೇಸತ್ತ ಮಹಿಳೆಯೊಬ್ಬರು ‘ಸಮೀರ್‌ನಿಂದ ನನ್ನನ್ನು ಕಾಪಾಡು’ ಪುತ್ತೂರು ಶ್ರೀಮಹಾಲಿಂಗೇಶ್ವರನ ಹುಂಡಿಗೆ ಚೀಟಿ ಹಾಕಿ ದೇವರ ಮೊರೆಹೋದ ಘಟನೆ ನಡೆದಿದೆ.

ಇತ್ತೀಚೆಗೆ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವರ ಹುಂಡಿಯ ಹಣ ಎಣಿಕೆ ಮಾಡಲಾಗುತ್ತದೆ. ಅದರಂತೆ ದೇವಳದ ಸಭಾಂಗಣದಲ್ಲಿ ಈ ಬಾರಿಯ ಕಾಣಿಕೆ ಹುಂಡಿಯ ಎಣಿಕೆ ನಡೆಯುತ್ತಿತ್ತು. ಈ ವೇಳೆ ಮಹಿಳೆ ದೇವರ ಮೊರೆಹೋದ ಚೀಟಿ ದೊರಕಿದೆ.
ಪತ್ರದಲ್ಲಿ ನೊಂದ ಮಹಿಳೆಯು ಅನ್ಯಕೋಮಿನ ಯುವಕನಿಂದ ತನ್ನ ಜೀವನವೇ ಹಾಳಾಗಿದೆ ಎಂದು ದೇವರಿಗೆ ಮೊರೆ ಹೊಕ್ಕಿದ್ದಾರೆ. ‘ಸಮೀರ್‌ನಿಂದಾಗಿ ನನ್ನ ಜೀವನ ಹಾಳಾಗಿದೆ. ಇವತ್ತು ನಾನು ನನ್ನ ಮಗಳು ಬೀದಿಯಲ್ಲಿ ಇದ್ದೇವೆ. ನಮ್ಮ ಜೀವನ ಹಾಳು ಮಾಡಿದ ಸಮೀರ್ ನ ಜೀವನ ಕೂಡ ಹಾಳಾಗಬೇಕು. ಸಮೀರ್ ಗೆ ಮದುವೆ ಆಗಲು ಹುಡುಗಿ ಸಿಗಬಾರದು. ಓ ದೇವರೇ ಇದು ನನ್ನ ಪ್ರಾರ್ಥನೆ’ ಎಂದು ಆ ಚೀಟಿಯಲ್ಲಿ ಬರೆಯಲಾಗಿದೆ.
ಈ ಘಟನೆಗೆ ಸಂಬಂಧಿಸಿ ಹಿಂದೂ ಸಂಘಟನೆಗಳು ಆ ನೊಂದ ಕುಟುಂಬದ ಬೆಂಬಲಕ್ಕೆ ನಿಂತಿದ್ದು, ನಿಮ್ಮ ಬೆಂಬಲಕ್ಕೆ ನಾವಿದ್ದೇವೆ. ಮಹಿಳಾ ಠಾಣೆಗೆ ಬಂದು ನಿಮಗಾದ ಅನ್ಯಾಯವನ್ನು ಹೇಳಿಕೊಳ್ಳಿ ನಿಮಗೆ ಬೆಂಬಲವಾಗಿ ನಿಲ್ಲುತ್ತೇವೆ ಎಂದು ಹೇಳಿದ್ದಾರೆ.