ಉಡುಪಿ: ಸಾಸ್ತಾನ ಮತ್ತು ಹೆಜಮಾಡಿ ಟೋಲ್‌ಗಳಲ್ಲಿ ಸ್ಥಳೀಯರಿಗೆ ಇರುವ ವಿನಾಯಿತಿ ತೆರವುಗೊಳಿಸುವದಕ್ಕೆ ಸಾಧ್ಯವಿಲ್ಲ. ಯಥಾ ಸ್ಥಿತಿ ನಿರ್ವಹಣೆ ಮಾಡಿ ಎಂದು ಟೋಲ್ ಅಧಿಕಾರಿಗಳಿಗೆ ಸಂಸದ ಕಡಕ್ ಎಚ್ಚರಿಕೆ ನೀಡಿದರು.
ಅವರು ಉಡುಪಿಯ ರಜತಾದ್ರಿಯಲ್ಲಿ ನಡೆದ ರಾಷ್ಟ್ರೀಯ ಹೆದ್ದಾರಿಯ ಸಮಸ್ಯೆಗಳ ಕುರಿತ ಸಭೆಯಲ್ಲಿ ಪ್ರತಿ ನಿತ್ಯ ಟೋಲ್‌ನಲ್ಲಿ 2000 ಸ್ಥಳೀಯ ವಾಹನಗಳು ಓಡಾಡುತ್ತಿದೆ. ನಮಗೆ ಇಷ್ಟು ವಾಹನಗಳಿಗೆ ಉಚಿತವಾಗಿ ಬಿಡುವಂತಿಲ್ಲ . ಸ್ಥಳೀಯರು ತಿಂಗಳ ಪಾಸ್ ಮಾಡಿಸಿಕೊಂಡು ಓಡಾಡಬೇಕು, ಇದಕ್ಕೆ ಅನುಮತಿ ನೀಡಬೇಕು ಎಂದು ಟೋಲ್ ಅಧಿಕಾರಿಗಳು ಸಂಸದರನ್ನು ಕೇಳಿದರು.
ಪ್ರತಿ ವರ್ಷ ಜಿಲ್ಲೆಯಲ್ಲಿ ಐದು ಸಾವಿರಕ್ಕೂ ಅಧಿಕ ರೋಡಿಗಿಳಿಯುತ್ತಿದೆ. ಅವರೆಲ್ಲ ಇದೇ ಟೋಲ್‌ನಲ್ಲಿ ಓಡಾಡುವುದು. ಅವರಿಂದ ಟೋಲ್ ಸಂಗ್ರಹ ಮಾಡುತ್ತಿರಲ್ಲ. ಅದು ನಿಮಗೆ ಲೆಕ್ಕಕ್ಕೆ ಸಿಗುವುದಿಲ್ಲವೇ ಎಂದು ಪ್ರಶ್ನಿಸಿದ ಸಂಸದರು, ಯಥಾ ಸ್ಥಿತಿಯನ್ನು ಕಾಪಾಡಿಕೊಳ್ಳುವಂತೆ ಸೂಚಿಸಿದರು. ಟೋಲ್‌ಗೇಟ್‌ನಲ್ಲಿರುವ ಕ್ಯಾಂಟಿನ್‌ಗಳ ಟೆಂಡರ್ ಪ್ರಕ್ರಿಯೆ ವಿಳಂಬವಾಗಿರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಕೋಟ ಶ್ರೀನಿವಾಸ ಪೂಜಾರಿ, ನಿಮಗೆ ಟೆಂಡರ್ ಕರೆಯುವುದಕ್ಕೆ 6 ತಿಂಗಳು ಬೇಕೆ ಎಂದು ಪ್ರಶ್ನಿಸಿದರು. ಟೆಂಡರ್ ಕರೆಯಲಾಗಿದೆ ಶೀಘ್ರ ಕ್ಯಾಂಟಿನ್‌ಗಳು ಪುನರಾರಂಭಗೊಳ್ಳಲಿದೆ ಅಧಿಕಾರಿಗಳು ತಿಳಿಸಿದರು.