ಸಾಸ್ತಾನ: ಭ್ರಷ್ಟಾಚಾರ ನಿರ್ಮೂಲನ ಸಪ್ತಾಹ ಕಾರ್ಯಕ್ರಮದ ಅಂಗವಾಗಿ ಒಂದು ದಿನದ ಮಾಹಿತಿ ಅ.30ರಂದು ಸಂಜೆ 4.00ಕ್ಕೆ ಚೇತನಾ ಹೈಸ್ಕೂಲ್‌ನಲ್ಲಿ ಜರಗಲಿದೆ.
ಕರ್ನಾಟಕ ಲೋಕಾಯುಕ್ತ ಉಡುಪಿ ಜಿಲ್ಲೆ, ರೋಟರಿ ಕ್ಲಬ್ ಹಂಗಾರಕಟ್ಟೆ, ವಿಪ್ರವೇದಿಕೆ ಬಾಳ್ಕುದ್ರು ಮತ್ತು ವಿವಿಧ ಸಂಘಟನೆಗಳ ನೇತೃತ್ವದಲ್ಲಿ ನಡೆಯುವ ಈ ಕಾರ್ಯಕ್ರಮದಲ್ಲಿ ಭ್ರಷ್ಟಾಚಾರ ನಿರ್ಮೂಲನೆಯ ಅರಿವು ಮತ್ತು ಮಾಹಿತಿ ವಿಚಾರದ ಮೇಲೆ ಲೋಕಾಯುಕ್ತ ಎಸ್‌ಪಿ ಎಂ ನಟರಾಜ್, ಲೋಕಾಯುಕ್ತ ಪ್ರಭಾರ ಡಿವೈಎಸ್‌ಪಿ ಮಂಜುನಾಥ್ ಆಗಮಿಸಿ ಮಾಹಿತಿ ನೀಡಲಿದ್ದಾರೆ.