ಭಾರತೀಯ ಮೂಲದ ಗಗನಯಾತ್ರಿ ಸುನೀತಾ ವಿಲಿಯಮ್ಸ್ Sunita Williams ಬಾಹ್ಯಾಕಾಶದಿಂದ ದೀಪಾವಳಿ ಹಬ್ಬದ ಶುಭಕೋರಿದ್ದಾರೆ.
ವೈಟ್ಹೌಸ್ನಲ್ಲಿ Whitehouse ನಡೆದ ದೀಪಾವಳಿ ಆಚರಣೆ ಕಾರ್ಯಕ್ರಮದಲ್ಲಿ ಬಾಹ್ಯಾಕಾಶದಿಂದ ವಿಡಿಯೋ ಸಂದೇಶ ಕಳುಹಿಸಿದ ಸುನೀತಾ ಸಂತೋಷದ ಹಬ್ಬವಾಗಿರುವ ದೀಪಾವಳಿ ಒಳ್ಳೆಯತನ ಮೇಲುಗೈ ಸಾಧಿಸಿದರ ಪ್ರತೀಕವಾಗಿದೆ ಎಂದು ವೈಟ್ಹೌಸ್ನಲ್ಲಿ ದೀಪಾವಳಿ ಆಚರಿಸುತ್ತಿರುವ ಎಲ್ಲರಿಗೂ ಶುಭಕೋರಿದರು.
ಈ ವರ್ಷ ಐಎಸ್ಎಸ್ನಲ್ಲಿ ಭೂಮಿಯಿಂದ 260 ಮೈಲುಗಳ ಮೇಲಿಂದ ದೀಪಾವಳಿಯನ್ನು ಆಚರಿಸಲು ನನಗೆ ಅನನ್ಯ ಅವಕಾಶ ಸಿಕ್ಕಿದೆ ಎಂದು ಸಂತಸ ವ್ಯಕ್ತಪಡಿಸಿದರು.
ಭಾರತೀಯ ಸಮುದಾಯದೊಂದಿಗೆ ದೀಪಾವಳಿ ಆಚರಿಸುತ್ತಿರುವ ಅಮೇರಿಕಾದ ಅಧ್ಯಕ್ಷ ಜೋ ಬೈಡನ್ ಮತ್ತು ಉಪಾಧ್ಯಕ್ಷ ಕಮಲಾ ಹ್ಯಾರಿಸ್ ಅವರಿಗೆ ವಿಲಿಯಮ್ಸ್ ಧನ್ಯವಾದ ಸಲ್ಲಿಸಿದರು.
ಸುನೀತಾ ವಿಲಿಯಮ್ಸ್, ಬುಚ್ ವಿಲ್ಮೋರ್ ಜೊತೆಗೆ, ಈ ವರ್ಷದ ಆರಂಭದಲ್ಲಿ ಸ್ಟಾರ್ಲೈನರ್ ಬಾಹ್ಯಾಕಾಶ ನೌಕೆಯಲ್ಲಿ ಅದರ ಉಡಾವಣೆ ಮತ್ತು ಲ್ಯಾಂಡಿಂಗ್ ಸಾಮರ್ಥ್ಯಗಳನ್ನು ಪರೀಕ್ಷಿಸಲು ISSಗೆ ಕಳುಹಿಸಲಾಗಿತ್ತು. ಬೋಯಿಂಗ್ ಬಾಹ್ಯಾಕಾಶ ನೌಕೆಯ ಉಡಾವಣೆಯು ವರ್ಷದ ಮೊದಲಾರ್ಧದಲ್ಲಿ ಹಲವು ಬಾರಿ ವಿಳಂಬವಾದ ಕಾರಣ ಸುನಿತಾ ಅವರ ಬಾಹ್ಯಾಕಾಶಕ್ಕೆ ಪರೀಕ್ಷಾ ಹಾರಾಟವು ಪ್ರಾರಂಭದಿಂದಲೂ ಅನೇಕ ಅಡಚಣೆಗಳನ್ನು ಎದುರಿಸಿತ್ತು. ಬಹು ವಿಳಂಬದ ನಂತರ, ಜೂನ್ 5, 2024 ರಂದು ಬಾಹ್ಯಾಕಾಶ ನೌಕೆಯನ್ನು ನಭಕ್ಕೆ ಹಾರಿಸಲಾಗಿತ್ತು. ಇಬ್ಬರು NASA ಗಗನಯಾತ್ರಿಗಳು ISS ನಲ್ಲಿ ಸುಮಾರು 2-3 ತಿಂಗಳುಗಳ ಕಾಲ ಇರಬೇಕಿತ್ತು, ಆದಾಗ್ಯೂ, ಬಹು ತಾಂತ್ರಿಕ ದೋಷಗಳಿಂದಾಗಿ ಸುನಿತಾ ವಿಲಿಯಮ್ಸ್ ಮತ್ತು ಬುಚ್ ವಿಲ್ಮೋರ್ ಅವರ ವಾಪಸಾತಿ ಬಾಹ್ಯಾಕಾಶ ಯಾನವು ಮುಂದಿನ ವರ್ಷಕ್ಕೆಂದು ಅಂದಾಜಿಸಲಾಗಿದೆ.