[cmsmasters_row][cmsmasters_column data_width=”1/1″][cmsmasters_text]
ಮಂಗಳೂರು:ಕಳೆದ ಬಾರಿ ಬೆಂಗಳೂರು ಕಂಬಳವನ್ನು 9 ಕೋಟಿ ಖರ್ಚಿನಲ್ಲಿ ಮಾಡಿದ್ದೇವೆ. ಈ ಬಾರಿ ದಕ್ಷಿಣ ಕನ್ನಡ ಮತ್ತು ಉಡುಪಿಯಲ್ಲಿ ಮಾತ್ರ ಕಂಬಳ ಮಾಡುತ್ತೇವೆ ಎಂದು ಬರೆದು ಕೊಟಿದ್ದಾರೆಂದು ಆಕ್ಷೇಪಿಸಿ ಪೇಟಾದವರು ಕೋರ್ಟ್ ಮೆಟ್ಟಿಲು ಹತ್ತಿದ್ದಾರೆ.
ನಾವು ಕಂಬಳವನ್ನು ಕರಾವಳಿ ಜಿಲ್ಲೆಗಳ ಜನಪದ ಕ್ರೀಡೆಯೆಂದು ಹೇಳಿದ್ದೇವೆಯೇ ಹೊರತು, ಕಂಬಳವನ್ನು ಕರಾವಳಿಯಲ್ಲಿ ಮಾತ್ರ ಮಾಡುತ್ತೇವೆಂದು ನಾವು ಬರೆದುಕೊಟ್ಟಿಲ್ಲ. ಅಲ್ಲದೆ ಅವರು ಕೋಣಗಳ ಬಾಯಲ್ಲಿ ನೊರೆ ಬರುತ್ತದೆ ಎಂದು ಆಕ್ಷೇಪಿಸಿದ್ದಾರೆ. ಕೋಣಗಳ ಬಾಯಲ್ಲಿ ನೊರೆ ಬಾರದೆ ಪೇಟಾದವರ ಬಾಯಲ್ಲಿ ನೊರೆ ಬರುತ್ತದೆಯೇ?.
ಅವರಿಗೆ ಅಮೆರಿಕದಿಂದ ದುಡ್ಡು ಬರುತ್ತದೆ, ದೊಡ್ಡದೊಡ್ಡ ವಕೀಲರನ್ನಿಟ್ಟು ಕೇಸು ಮುನ್ನಡೆಸುತ್ತಿದ್ದಾರೆ. ನಾವು ಕೋಣಗಳನ್ನು ಕೊಡುತ್ತೇವೆ ತಾಕತ್ತಿದ್ದರೆ ಇವರು ಒಂದು ತಿಂಗಳು ಸಾಕಲಿ ನೋಡೋಣ ಎಂದು ಅಶೋಕ್ ರೈ ಸವಾಲೆಸೆದರು.
[/cmsmasters_text][/cmsmasters_column][/cmsmasters_row]