ಉಡುಪಿ: ಈ ಹಿಂದೆ ಗ್ರಾಮಪಂಚಾಯತ್ ಕೈಯಲ್ಲಿದ್ದ ಏಕ ನಿವೇಶನ ನಕ್ಷೆಯ ಅನುಮೋದನೆ ಮತ್ತು ಇ ಸ್ವತ್ತಿನ 9&11 ವಿತರಣೆಯ ಅಧಿಕಾರವನ್ನು ಏಕಾಏಕಿ ಸ್ಥಳೀಯ ನಗರಾಭಿವೃದ್ಧಿ ಪ್ರಾಧಿಕಾರಕ್ಕೆ ಹಸ್ತಾಂತರಿಸಲಾಗಿದೆ. ಇದರಿಂದ ಸಾರ್ವಜನಿಕರಿಗೆ ಸಾಕಷ್ಟು ಸಮಸ್ಯೆಗಳಾಗುತ್ತಿದೆ ಎಂದು ಸಂಸದ ಕೋಟ ಶ್ರೀನಿವಾಸ ಪೂಜಾರಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿದ್ದಾರೆ.
ಕರಾವಳಿಯ ಉಡುಪಿ, ದಕ್ಷಿಣ ಕನ್ನಡ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ತುಂಡು ಭೂಮಿ ಮಾಲೀಕರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಈ ಹೊಸ ಆದೇಶದಿಂದ ಸಾಕಷ್ಟು ಗೊಂದಲಗಳುಂಟಾಗಿ ಸಾರ್ವಜನಿಕರಿಗೆ ತೊಂದರೆ ಅನುಭವಿಸುತ್ತಿದ್ದಾರೆ.
ಈ ಹಿಂದೆ ವಿನ್ಯಾಸದ ಅನುಮೋದನೆಗೆ ಜಿಲ್ಲಾ ಪಂಚಾಯತ್ ಇಂಜಿನಿಯರ್ ವಿಭಾಗದಿಂದ ತಾಂತ್ರಿಕ ಶಿಫಾರಸ್ಸುಗಳಿಗೆ ಅವಕಾಶಗಳಿತ್ತು. ಈಗ ಸ್ಥಳೀಯ ನಗರಾಭಿವೃದ್ಧಿ ಪ್ರಾಧಿಕಾರದ ಅನುಮೋದನೆಗೆ ಕಾಯಬೇಕಾಗಿದೆ. ಸಿಬ್ಬಂದಿಗಳು ಮತ್ತು ಮೂಲ ಸೌಕರ್ಯ ಕೊರತೆ ಸಮಸ್ಯೆಯನ್ನು ಪ್ರಾಧಿಕಾರ ಎದುರಿಸುತ್ತಿದೆ. ಅದಲ್ಲದೆ ಈ ಹೊಸ ವ್ಯವಸ್ಥೆಯನ್ನು ಅಳವಡಿಸಿರುವುದರಿಂದ ಗ್ರಾಮಪಂಚಾಯತ್ಗೆ ಇದ್ದ ಹಕ್ಕನ್ನು ಕಸಿದುಕೊಂಡತಾಗಿದೆ ಎಂದು ಸ್ಥಳೀಯಾಡಳಿತದ ಪ್ರತಿನಿಧಿಗಳು ದೂರಿದ್ದಾರೆ. ಏಕ ನಿವೇಶನ ನಕ್ಷೆಯ ಅನುಮೋದನೆ ಮತ್ತು 9 & 11 ರ ವಿತರಣೆಯ ವ್ಯವಸ್ಥೆಯನ್ನು ಪಂಚಾಯತ್ ರಾಜ್ ವ್ಯವಸ್ಥೆಯಿಂದ ನಗರ ಪ್ರಾಧಿಕಾರಕ್ಕೆ ನೀಡಿರುವುದರಿಂದ ಬಡವರು ಸೇರಿದಂತೆ, ಜನಸಾಮಾನ್ಯರಿಗೆ ತೊಂದರೆಯಾಗಿದೆ.
ಆದ್ದರಿಂದ ಹಿಂದಿನಂತೆ ಗ್ರಾಮ ಪಂಚಾಯತ್ ಮತ್ತು ಪಂಚಾಯತ್ ರಾಜ್ ವ್ಯವಸ್ಥೆಯ ಮೂಲಕ 9 & 11 ರ ವಿತರಣೆ ಮತ್ತು ಏಕ ನಿವೇಶನ ನಕ್ಷೆಯ ಅನುಮೋದನೆ ನೀಡುವಂತೆ ಆದೇಶ ಮಾಡಬೇಕೆಂದು ಸಂಸದ ಕೋಟ ಶ್ರೀನಿವಾಸ ಪೂಜಾರಿಯವರು ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಪತ್ರ ಬರೆದಿದ್ದಾರೆ.
- MRPL ವಿಷಾನಿಲ ಸೋರಿಕೆ: ಇಬ್ಬರು ಸಾವು
- ಇನ್ನೂ 96 ಅಮೇರಿಕಾ ವಲಸಿಗರು ಭಾರತಕ್ಕೆ ವಾಪಾಸು
- ರಾ.ಹೆ ಕಾಮಗಾರಿ ವಿಳಂಬ ಪ್ರತಿಭಟನೆ ಕಾಂಗ್ರೆಸ್ ನಾಟಕ: ಪ್ರಥ್ವಿರಾಜ್
- Rashmika Mandanna: ಈ ಪಾತ್ರವನ್ನೂ ಒಪ್ಪಿಕೊಂಡ್ರಾ!
- ಓಟಿಟಿಗೆ ಬರಲು ಸಿದ್ದನಾದ ಕುಬೇರ
- ಬಜೆಟ್ ನಲ್ಲಿ ಉಡುಪಿ ಜಿಲ್ಲೆಯ ಸಂಪೂರ್ಣ ನಿರ್ಲಕ್ಷ:ಪ್ರಥ್ವೀರಾಜ್ ಶೆಟ್ಟಿ ಬಿಲ್ಲಾಡಿ
- ಎಸ್ಪಿ ಕಚೇರಿ ಮುತ್ತಿಗೆಗೆ ಯುವಮೋರ್ಚಾ ಬೆಂಬಲ
- ಕಾರ್ಕಳ ಶ್ರೀಕಾಂತ್ ಶೆಟ್ಟಿ ವಿರುದ್ಧ ಪ್ರಕರಣ ದಾಖಲು
- ಮಹೇಶ್ ಶೆಟ್ಟಿ ತಿಮರೋಡಿ ಜಾಮೀನು ಅರ್ಜಿ ತಿರಸ್ಕೃತ: ಬೆಂಬಲಿಗರಿಂದ ಕಣ್ಣೀರು
- ಹಿಂದೂ ಮುಖಂಡರುಗಳ ಮೇಲೆ ಕೇಸು ದಾಖಲಿಸುವುದೇ ಕಾಂಗ್ರೆಸ್ ಸಾಧನೆ: ಬಿಲ್ಲಾಡಿ ಪ್ರಥ್ವೀರಾಜ್ ಶೆಟ್ಟಿ
- ಮರುಎಣಿಕೆ ಕಾನೂನು ನೀಡಿದ ಹಕ್ಕು: ಸಹಕಾರಿ ಮಿತ್ರರು
- MS SILVER WHISPER ಮಂಗಳೂರು ಬಂದರಿಗೆ
- ನಾಗನ ಕಟ್ಟೆಗೆ ಹಾನಿಗೈದ ಆರೋಪ- ಅನ್ಯಕೋಮಿನ ಯುವಕ ಅರೆಸ್ಟ್
- 198ರಲ್ಲಿ 81ದೂರುಗಳು ಇತ್ಯರ್ಥ – ನ್ಯಾ.ಮೂ. ಬಿ.ವೀರಪ್ಪ