ಸಾಸ್ತಾನ: ಕೋಟ ಜಿ.ಪಂ ವ್ಯಾಪ್ತಿಯಲ್ಲಿ ಕರೆ ನೀಡಲಾಗಿದ್ದ ಬಂದ್ ವಾಪಾಸು ಪಡೆಯಲಾಗಿದೆ.
ಡಿ.30ರಂದು ಜಿಲ್ಲಾಧಿಕಾರಿ ಕಚೇರಿಯಲ್ಲಿ ಸಂಸದ ಕೋಟ ಶ್ರೀನಿವಾಸ ಪೂಜಾರಿ ನೇತೃತ್ವದಲ್ಲಿ, ನಡೆದ ಸಭೆಯಲ್ಲಿ ಸ್ಥಳೀಯ ವಾಹನಗಳಾದ ಟೂರಿಸ್ಟ್ ವಾಹನ, ಕಾರು, 407 ವಾಹನಗಳಿಗೆ ವಿನಾಯಿತಿ ನೀಡಲು ಜಿಲ್ಲಾಡಳಿತ ಒಪ್ಪಿಗೆ ಸೂಚಿಸಿದೆ. ಅಂತೆಯೆ ಟಿಪ್ಪರ್ ವಾಹನಗಳಿಗೆ ನಿಗದಿತ ಶುಲ್ಕ ₹6700 ಪಾವತಿಸಿ ಪಾಸ್ ಪಡೆದು ತಿಂಗಳಿಗೆ ಅನಿಯಮಿತವಾಗಿ ಓಡಾಡಬಹುದು ಎಂದು ನಿರ್ಧರಿಸಲಾಯಿತು.
ಪಟ್ಟು ಬಿಡದ ಜಿಲ್ಲಾಡಳಿತ, ಕಂಪೆನಿ, ಹೋರಾಟ ಸಮಿತಿ ಸದಸ್ಯರು
ಜಿಲ್ಲಾಡಳಿತ, ಕೆಕೆಆರ್ ಕಂಪೆನಿ, ಮತ್ತು ಹೋರಾಟ ಸಮಿತಿ ಜೊತೆ ಸಾಕಷ್ಡು ಚರ್ಚೆ ನಡೆಯಿತು. ಯಾವುದೇ ಕಾರಣಕ್ಕೂ ಟೋಲ್ ನೀಡಲು ಸಾಧ್ಯವಿಲ್ಲ ಎಂದು ಸಮಿತಿ ಸದಸ್ಯರು ವಾದಿಸಿದ್ದರು, ಆದರೆ ಎಸ್ ಪಿ ಡಾ. ಅರುಣ್‌ಕುಮಾರ್, ಜಿಲ್ಲಾಧಿಕಾರಿ ವಿದ್ಯಾಕುಮಾರಿ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳ ಜೊತೆ ಚರ್ಚಿಸಿ, ಮಲ್ಟಿ ಆಕ್ಸಿಲ್ ವಾಹನಗಳಿಗೆ ವಿನಾಯಿತಿ ನೀಡಲು ಸಾಧ್ಯವಿಲ್ಲ. ತರಕಾರಿ ಮತ್ತು ಮೀನು ಸಾಗಾಟ,ಜೆಸಿಬಿ ವಾಹನಗಳಿಗೆ ರಿಯಾಯಿತಿ ನೀಡಲಾಗುತ್ತದೆ ಎಂಬ ಅಂತಿಮ ನಿರ್ಧಾರ ಕೈಗೊಂಡರು.
ಈ ಸಂದರ್ಭ ಶಾಸಕ ಕಿರಣ್ ಕೊಡ್ಗಿ, ಗುರ್ಮೆ ಸುರೇಶ್ ಕುಮಾರ್ ಮೊದಲಾದವರು ಇದ್ದರು.