• November 23, 2025
  • Last Update November 14, 2025 3:04 pm
  • Australia

ಕೃಷ್ಣಯ್ಯ ಜೋಗಿ ಅಂಕದಕಟ್ಟೆಯವರಿಗೆ ಗೌರವ ಡಾಕ್ಟರೇಟ್

ಕೃಷ್ಣಯ್ಯ ಜೋಗಿ ಅಂಕದಕಟ್ಟೆಯವರಿಗೆ ಗೌರವ ಡಾಕ್ಟರೇಟ್

ಕುಂದಾಪುರ: ಸಮಾಜ ಸೇವಕ, ಹಲವಾರು ಸಂಘ ಸಂಸ್ಥೆಗಳನ್ನು ಮುನ್ನಡೆಸಿರುವ ಕುಂದಾಪುರ ತಾಲೂಕು ಅಂಕದಕಟ್ಟೆಯ ಕೃಷ್ಣಯ್ಯ ಜೋಗಿ ಅವರಿಗೆ ಏಷ್ಯಾ ಇಂಟರ್‌ನ್ಯಾಷನಲ್ ರಿಸರ್ಚ್ ಯುನಿವರ್ಸಿಟಿ (ಐಏಒ)ಗೌರವ ಡಾಕ್ಟರೇಟ್ ನೀಡಿ ಗೌರವಿಸಿದೆ.

ಏಷ್ಯಾ ಇಂಟರ್‌ನ್ಯಾಷನಲ್ ಕಲ್ಟರ್ ಅಕಾಡೆಮಿಯ ಸ್ಥಾಪಕರಾದ ವಿ ಬಾಬು ವಿಜಯನ್, ತಮಿಳುನಾಡಿನ ಐ.ಎನ್.ಟಿ.ಯು.ಸಿ ಯ ಡಾಕ್ಟರ್ ಕೆ.ಎ ಮನೋಕರನ್ (EX MLA ) ಆಂಧ್ರ ಪ್ರದೇಶದ ನಿವೃತ್ತ ನ್ಯಾಯಾಧೀಶ ಡಾಕ್ಟರ್ ಜೆ ಹರಿಡೋಸ್, ಬೆಂಗಳೂರಿನ ಕಿಮ್ಸ್ ಆಸ್ಪತ್ರೆಯ ಡಾಕ್ಟರ್ ಸಿಎಲ್ ಶಿವಮೂರ್ತಿ, ಲಯನ್ಸ್ ಸಂಸ್ಥೆಯ ಕೆ.ವಿ ಬಾಲಕೃಷ್ಣ, ಅಂಧ್ರ ಪ್ರದೇಶದ ಮಾನವ ಹಕ್ಕು ಸಂಸ್ಥೆಯ ರಾಜ್ಯಾಧ್ಯಕ್ಷೆ ಚಪ್ಪುಡಿ ನಾಗಪಾಣಿಶ್ರೀ, ಓ ಬಿ ಸಿ ಫೆಡರೇಷನ್ ಆಫ್ ಇಂಡಿಯಾದ ಸ್ಥಾಪಾಕಾಧ್ಯಕ್ಷ ಜೆ ಇಂಜಿರಪ್ಪ, ವರ್ಡ್ ಬುಕ್ ಆಫ್ ರೆಕಾರ್ಡ ಹೋಲ್ಡರ್ ಡಾಕ್ಟರ್ ಕೊಪ್ಪುಳ ವಿಜಯ್ ಕುಮಾರ್, ಕನ್ನಡ ಚಲನಚಿತ್ರ ನಿರ್ದೇಶಕ ಡಾಕ್ಟರ್ ಗುಣವಂತ ಮಂಜು ಮತ್ತಿತರು ಈ ಸಂದರ್ಭ ಉಪಸ್ಥಿತರಿದ್ದರು.

ಕೃಷ್ಣಯ್ಯ ಜೋಗಿಯವರು ಸಮಾಜದ ವಿವಿಧ ಸ್ಥರದ ಜನರಿಗೆ ತಮ್ಮ ಅಮೂಲ್ಯ ಸೇವೆಗಳನ್ನು ನೀಡಿದ್ದು, ಹಂಗಳೂರು ಶ್ರೀ ವನದುರ್ಗಿ ದೇವಸ್ಥಾನದ ಅಧ್ಯಕ್ಷರಾಗಿಯೂ, ಬಸ್ರೂರಿನ ಶ್ರೀ ಕಾಲಬೈರವ ದೇವಸ್ಥಾನದ ಅಧ್ಯಕ್ಷರಾಗಿ, ಯಡಮೊಗೆಯ ಶ್ರೀ ಕಾಲಭೈರವ, ಸಿದ್ದೇಶ್ವರ ದೇವಸ್ಥಾನದ ಬ್ರಹ್ಮ ಕಲಶೋತ್ಸವ ಸಮಿತಿಯ ಅಧ್ಯಕ್ಷರಾಗಿ, ಕುಂದಾಪುರ ತಾಲೂಕು ಜೋಗಿ ಸಮಾಜ ಸೇವಾ ಸಂಸ್ಥೆಯ ಸ್ಥಾಪಕಾಧ್ಯಕ್ಷರಾಗಿ, ಕುಂದಾಪುರ ತಾಲೂಕು ಜೋಗಿ ಸಮಾಜ ವಿವಿದೋದ್ದೇಶ ಸಹಕಾರಿ ಸಂಘದ ಅಧ್ಯಕ್ಷರಾಗಿ, ಉಡುಪಿ ಜಿಲ್ಲಾ ಅಲೆಮಾರಿ/ಅರೆ ಅಲೆಮಾರಿ ಒಕ್ಕೂಟದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. ಅವರ ಈ ಜೀವಮಾನದ ಶ್ರೇಷ್ಠ ಸಾಧನೆಯನ್ನು ಗುರುತಿಸಿ ಈ ಗೌರವ ಡಾಕ್ಟರೇಟ್ ನೀಡಿ ಗೌರವಿಸಿದೆ.

.

administrator

Related Articles

Leave a Reply

Your email address will not be published. Required fields are marked *

error: Content is protected !!