ಮಂಗಳೂರು: ತಮ್ಮ ವಿವಾದಿತ ಹೇಳಿಕೆಗಳಿಂದಲೇ ಟ್ರೋಲ್ ಆಗುತ್ತಿರುವ ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಮತ್ತೆ ಟ್ರೋಲ್ ಆಗಿದ್ದಾರೆ. ಈ ಬಾರಿ ಅವರನ್ನು ದಂತಚೋರ ವೀರಪ್ಪನ್ ಆಗಿಸಿ ಟ್ರೋಲ್ ಮಾಡಲಾಗುತ್ತಿದೆ.
ಬೆಳ್ತಂಗಡಿಯಲ್ಲಿ ಕಾಡಾನೆಗಳ ಹಾವಳಿ ಹೆಚ್ಚಾಗುತ್ತಿದ್ದು, ರೈತರಿಗೆ ತೊಂದರೆಯಾಗುತ್ತಿದೆ ಎಂಬ ವಿಚಾರದಲ್ಲಿ ಸದನದಲ್ಲಿ ಅವರು ಆಕ್ರೋಶ ವ್ಯಕ್ತಪಡಿಸಿದರು. ಮಾತಿನ ಭರದಲ್ಲಿ ಅವರು ಕಾಡಾನೆಗಳನ್ನು ಗುಂಡಿಟ್ಟು ಕೊಲ್ಲಲು ನಮಗೆ ಕೋವಿ ಪರವಾನಿಗೆ ಕೊಡಿ ಎಂದು ಅರಣ್ಯ ಸಚಿವರನ್ನು ಒತ್ತಾಯಿಸಿದ್ದರು. ಇದರ ವೀಡಿಯೋ ವೈರಲ್ ಆಗುತ್ತಿದ್ದಂತೆ ಮತ್ತೆ ಅವರು ಟ್ರೋಲ್ ಮಾಡುವವರಿಗೆ ಆಹಾರವಾಗಿದ್ದರೆ. ಟ್ರೋಲಿಗರು ಅವರನ್ನು ದಂತಚೋರ ವೀರಪ್ಪನ್‌ನಂತೆ ಚಿತ್ರಿಸಿ ‘ಕರ್ನಾಟಕದ ವೀರಪ್ಪನ್’ ಪೂಂಜಾ, ‘ಕರಾವಳಿಯಲ್ಲೊಬ್ಬ ಮರಿ ವೀರಪ್ಪನ್’ ಎಂದು ಟ್ರೋಲ್ ಮಾಡಲಾರಂಭಿಸಿದ್ದಾರೆ.