ಸಾಸ್ತಾನ: ರಸ್ತೆಯ ಅವ್ಯವಸ್ಥೆ, ಉರಿಯದ ದೀಪ, ಹೊಡಂಗಳಿಂದ ತುಂಬಿರುವ ಪಾದಾಚಾರಿ ಮಾರ್ಗ, ಸ್ಥಳೀಯ ವಾಹನಗಳಿಗೂ ವಿಧಿಸುತ್ತಿರುವ ಸುಂಕ. ಇವೆಲ್ಲವನ್ನೂ ಖಂಡಿಸಿ ನ09ರಂದು ಸಂಜೆ 5ಕ್ಕೆ ಸಾಸ್ತಾನ ಟೋಲ್‌ಗೆ ರಾಷ್ಟ್ರೀಯ ಹೆದ್ದಾರಿ ಜಾಗೃತಿ ಸಮಿತಿ ನೇತೃದವದಲ್ಲಿ ಸಾರ್ವಜನಿಕರು ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಲಿದ್ದಾರೆ.
ಈ ಕುರಿತು ನ್ಯೂಸ್‌ರೇʼಸ್ ಜೊತೆ ಮಾತನಾಡಿದ ರಾ.ಹೆದ್ದಾರಿ ಜಾಗೃತಿ ಸಮಿತಿ ಕಾರ್ಯದರ್ಶಿ ಆಲ್ವಿನ್ ಅದಾದ್ರೆ, ಸಂಸ್ಥೆಗಳ ಹೆಸರಿನಲ್ಲಿ ನೋಂದಾವಣಿ ಆಗಿರುವ ವಾಹನಗಳಿಗೆ ಟೋಲ್ ಹಾಕುವುದಕ್ಕೆ ಆರಂಭಿಸಿದ್ದಾರೆ. ಹಲವು ಬಾರಿ ಸ್ಥಳಿಯ ಶಾಲಾ ವಾಹನಗಳು ಟೋಲ್‌ನಲ್ಲಿ ನಿಂತುಕೊಂಡು ಗಂಟೆಗಟ್ಟಲೆ ಕಾದು ಕುಳಿತಿದೆ. ಇದರಿಂದ ಮಕ್ಕಳಿಗೆ ಮಾನಸಿಕವಾಗಿ ಸಾಕಷ್ಟು ಹಿಂಸೆಯಾಗುತ್ತದೆ. ಹೀಗೆ ಮುಂದುವರಿದರೆ ಕಮರ್ಶಿಯಲ್ ವಾಹನಗಳಿಗೂ ಟೋಲ್ ವಿಧಿಸುತ್ತಾರೆ. ಇದು ಅವರ ತಂತ್ರವಾಗಿದ್ದು, ಹಂತ ಹಂತವಾಗಿ ಟೋಲ್ ಸಂಗ್ರಹಣೆ ಆರಂಭಿಸುವುದು ಅವರ ಗುರಿಯಾಗಿದೆ. ಇಷ್ಟಲ್ಲದೆ ಸಾಸ್ತಾನದಿಂದ ಕುಂದಾಪುರಕ್ಕೆ ತೆರಳುವ ಮಾರ್ಗವೆನ್ನವುದು ಹೊಂಡಮಯವಾಗಿದೆ. ಪಾದಾಚಾರಿ ಮಾರ್ಗಗಳಲ್ಲಿ ಸಂಚರಿಸುವದೇ ದುಸ್ತರವಾಗಿದೆ. ಬೀದಿ ದೀಪಗಳು ಉರಿಯುತ್ತಿಲ್ಲ. ಇಷ್ಟೇಲ್ಲ ಸಮಸ್ಯೆಗಳನ್ನು ಇಟ್ಟುಕೊಂಡು ಸಾರ್ವಜನಿಕರ ಮೇಲೆ ದಬ್ಬಾಳಿಕೆ ಮಾಡಲು ಹೊರಟಿದ್ದಾರೆ. ಇದು ಕಂಪೆನಿ ಸರ್ಕಾರವಲ್ಲ. ಪ್ರಜಾಪ್ರಭುತ್ವ ಎನ್ನುವುದು ನೆನಪಿರಲಿ ಎಂದು ಎಚ್ಚರಿಕೆ ನೀಡಿದರು.
ನಮ್ಮ ಸಮಸ್ಯೆಗಳಿಗೆ ನಾವೇ ಹೋರಾಡಬೇಕು. ಎಲ್ಲಾ ವಾಹನ ಚಾಲಕರು ಮತ್ತು ಮಾಲೀಕರು, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಬಂದು ನಮ್ಮ ಬಲವನ್ನು ತೋರಿಸಬೇಕು ಎಂದು ಆಲ್ವಿನ್ ಅಂದ್ರಾದೆ ಕರೆ ನೀಡಿದರು.